newsics.com/ನ್ಯೂಸಿಕ್ಸ್
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿಮಾನಿಗಳು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದ ‘ಕೆಡಿ’ ಸಿನಿಮಾ ಇಂದು (ಏಪ್ರಿಲ್ 30) ರಿಲೀಸ್ ಆಗಿದೆ. ಜೋಗಿ ಪ್ರೇಮ್ ನಿರ್ದೇಶನದ ಮಾಸ್ ಸಿನಿಮಾ ಆದ್ದರಿಂದ ಬಿಡುಗಡೆಗೂ ಮುನ್ನವೇ ಒಂದು ಹೈಪ್ ಸೃಷ್ಟಿ ಆಗಿತ್ತು. ಪಾತ್ರವರ್ಗದಲ್ಲಿ ದೊಡ್ಡ ದೊಡ್ಡ ಕಲಾವಿದರು ಇರುವುದರಿಂದ ಸಹಜವಾಗಿಯೇ ಸ್ಟಾರ್ ಮೆರುಗು ಹೆಚ್ಚಿತ್ತು.
ಕೆವಿಎನ್ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣವಾದ ಈ ಬೃಹತ್ ಬಜೆಟ್ ಚಿತ್ರ ಮುಂದಿನ ರಜೆ ದಿನಗಳಲ್ಲಿ ಇನ್ನಷ್ಟು ಗಳಿಕೆ ಮಾಡುವ ನಿರೀಕ್ಷೆಯಿದೆ. ಪ್ರೇಮ್ ನಿರ್ದೇಶನದ ಈ ಚಿತ್ರದ ಹಿನ್ನೆಲೆ ಸಂಗೀತಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಕೆಡಿ’ ಸಿನಿಮಾಗೆ ಮೊದಲ ದಿನ 845 ಶೋಗಳನ್ನು ನೀಡಲಾಗಿತ್ತು. ಮುಂಜಾನೆ ಫ್ಯಾನ್ಸ್ ಶೋ ಕೂಡ ಇಟ್ಟಿದ್ದರಿಂದ ಸಿನಿಮಾ ಹೆಚ್ಚಿನ ಗಳಿಕೆ ಮಾಡಿದೆ. ಈ ಚಿತ್ರ ಮೊದಲ ದಿನ 4.10 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಆಗಿದೆ ಎಂದು ‘ಸ್ಯಾಕ್‌ನಿಲ್ಕ್ ವರದಿ ಮಾಡಿದೆ. ಇನ್ನು, ಚಿತ್ರದ ನೆಟ್ ಕಲೆಕ್ಷನ್ ಮೂರುವರೆ ಕೋಟಿ ರೂಪಾಯಿ ಆಗಿದೆ.
ಸಿನಿಮಾಗೆ ಈ ಮೂರು ದಿನ ತುಂಬಾನೇ ಮುಖ್ಯವಾಗಲಿದೆ. ಇಂದು (ಮೇ 1) ಕಾರ್ಮಿಕರ ದಿನಾಚರಣೆ ಪ್ರಯುಕ್ತ ಸರ್ಕಾರಿ ರಜೆ ಇದ್ದು ಚಿತ್ರ ಹೆಚ್ಚಿನ ಗಳಿಕೆ ಮಾಡುವ ನಿರೀಕ್ಷೆ ಇದೆ. ಇನ್ನು ಶನಿವಾರ ಹಾಗೂ ಭಾನುವಾರ ಎಂದಿನಂತೆ ಜನರು ಸಿನಿಮಾ ವೀಕ್ಷಣೆಗೆ ತೆರಳುತ್ತಾರೆ. ಹೀಗಾಗಿ, ಸಿನಿಮಾದ ಕಲೆಕ್ಷನ್ ಹೆಚ್ಚಬಹುದು.