newsics.com/ನ್ಯೂಸಿಕ್ಸ್
ಇಂದು ಅಹ್ಮದಾಬಾದ್‌ನ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಐಪಿಎಲ್ 2026ರ ಲೀಗ್ ಹಂತದ 42ನೇ ಪಂದ್ಯ ನಡೆಯುತ್ತಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟನ್ಸ್ ತಂಡಗಳು ಮುಖಾಮುಖಿಯಾಗಿವೆ.
ಈ ಪಂದ್ಯದಲ್ಲಿ ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಅವರ ವಿಕೆಟ್ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಈ ವಿವಾದ ಎಷ್ಟು ತೀವ್ರವಾಗಿತ್ತು ಎಂದರೆ ಹಿರಿಯ ಆಟಗಾರ ವಿರಾಟ್ ಕೊಹ್ಲಿ ಮತ್ತು ಆರ್‌ಸಿಬಿ ಮುಖ್ಯ ತರಬೇತುದಾರ ಆಂಡಿ ಫ್ಲವರ್ ಅಂಪೈರ್ ಜೊತೆ ಬಹಿರಂಗವಾಗಿಯೇ ಮಾತಿನ ಚಕಮಕಿ ನಡೆಸಿದರು. ಇದೀಗ ಅದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಆರ್‌ಸಿಬಿ ಅಭಿಮಾನಿಗಳು ಅಂಪೈರ್ಗೆ ಹಿಡಿಶಾಪ ಹಾಕುತ್ತಿದ್ದಾರೆ.
ಡೀಪ್ ಫೈನ್ ಲೆಗ್ ಬೌಂಡರಿ ಬಳಿ ಜೇಸನ್ ಹೋಲ್ಡರ್ ರೋಚಕ ಕ್ಯಾಚ್ ಪಡೆದರು. ಆದರೆ ಹೋಲ್ಡರ್ ಕ್ಯಾಚ್ ಪಡೆಯುತ್ತಿದ್ದಾಗಲೇ ಚೆಂಡು ನೆಲಕ್ಕೆ ತಾಗಿದೆಯಾ ಎಂದು ಪರಿಶೀಲನೆ ನಡೆಸಿದ ಥರ್ಡ್ ಅಂಪೈರ್ ಔಟ್ ನೀಡಿದರು.
ಆದರೆ ಈ ನಿರ್ಣಯ ವಿರಾಟ್ ಕೊಹ್ಲಿಗೆ ಸಮಾಧಾನ ನೀಡಲಿಲ್ಲ. ಚೆಂಡು ನೆಲಕ್ಕೆ ತಾಗಿದೆ ಎಂದು ಅಂಪೈರ್ ಜತೆ ಚರ್ಚೆಗೆ ಇಳಿದರು. ಕೊಹ್ಲಿ ಅಸಮಾಧಾನಗೊಂಡಿರುವುದು ಅವರ ಮುಖದಲ್ಲಿ ಎದ್ದುಕಾಣುತ್ತಿತ್ತು.
ಕೊಹ್ಲಿ ಮಾತ್ರವಲ್ಲದೇ ನೆಟ್ಟಿಗರೂ ಸಹ ಈ ವಿಡಿಯೊವನ್ನು ಹಂಚಿಕೊಂಡು ಇದು ನಾಟ್‌ಔಟ್ ಎಂದು ವಾದಿಸುತ್ತಿದ್ದಾರೆ.
https://www.newsics.com/2026/04/30/jeep-falls-into-700-meter-deep-ditch-20-dead/