newsics.com/ನ್ಯೂಸಿಕ್ಸ್
ನಟ ಧ್ರುವ ಸರ್ಜಾ ಹಾಗೂ ನಿರ್ದೇಶಕ ಪ್ರೇಮ್ ಕಾಂಬಿನೇಷನ್‌ನ ಮೊದಲ ಚಿತ್ರ ಕೆಡಿ ದಿ ಡೆವಿಲ್ ಬಿಡುಗಡೆಯಾಗಿದೆ. ರಮೇಶ್ ಅರವಿಂದ್, ರವಿಚಂದ್ರನ್, ಶಿಲ್ಪಾಶೆಟ್ಟಿ, ಸಂಜಯ್ ದತ್ ರೀತಿಯ ದೊಡ್ಡ ಕಲಾವಿದರ ದಂಡೇ ಇರುವ ಈ ಚಿತ್ರ ಬಿಡುಗಡೆಗೂ ಮುನ್ನ ಕೆಲ ವಿವಾದಗಳು ಹಾಗೂ ಟೀಕೆಗಳನ್ನು ಎದುರಿಸಿ ಕೊನೆಗೂ ಬೆಳ್ಳಿ ಪರದೆಯ ಮೇಲೆ ಪ್ರದರ್ಶನವನ್ನು ಕಂಡಿದೆ.
ಮೊದಲ ಪ್ರದರ್ಶನ ವೀಕ್ಷಿಸಿ ಹೊರಬಂದ ಸಿನಿ ರಸಿಕರು ಚಿತ್ರ ಚೆನ್ನಾಗಿದೆ, ಧ್ರುವ ಸರ್ಜಾ ಹಾಗೂ ಪ್ರೇಮ್ ಇಬ್ಬರಿಗೂ ಇದು ಕಮ್‌ಬ್ಯಾಕ್ ಸಿನಿಮಾ ಎಂಬ ಮಾತುಗಳನ್ನು ಹೇಳುತ್ತಿದ್ದು, ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಹಿಟ್ ಫಲಿತಾಂಶ ಸಿಗುವ ಲಕ್ಷಣಗಳು ಕಾಣಿಸುತ್ತಿವೆ.
ಇನ್ನು ಪ್ರೇಕ್ಷಕರ ವಿಮರ್ಶೆ ಕುರಿತಾಗಿ ಕೆಡಿ ಚಿತ್ರತಂಡ ಮತ್ತೊಂದು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದು, ನ್ಯಾಯಾಲಯದ ಆದೇಶ ತಂದು ಬುಕ್‌ಮೈಶೋನಲ್ಲಿ ಪ್ರೇಕ್ಷಕರ ವಿಮರ್ಶೆಗೆ ನಿಷೇಧ ಹೇರುವ ಕೆಲಸಕ್ಕೆ ಕೈ ಹಾಕಿಲ್ಲ.