newsics.com/ನ್ಯೂಸಿಕ್ಸ್
ದೇಶದಲ್ಲಿ ಕಳೆದ ಎರಡೂವರೆ ತಿಂಗಳಿನಿಂದಲೂ ಕರ್ನಾಟಕವೂ ಸೇರಿದಂತೆ ಭಾರತದಾದ್ಯಂತ ಗ್ಯಾಸ್ ಸಿಲಿಂಡರ್ ಸಮಸ್ಯೆ ಆಗಿದೆ. ಇದೀಗ ಮೇ ಮೊದಲ ತಿಂಗಳು ಸಮೀಪಿಸುತ್ತಿದ್ದಂತೆ, ಭಾರತದ ಎಲ್ಪಿಜಿ ಸಿಲಿಂಡರ್ ಬುಕಿಂಗ್ ಮತ್ತು ವಿತರಣಾ ವ್ಯವಸ್ಥೆಯಲ್ಲಿ ಗಮನಾರ್ಹ ಬದಲಾವಣೆಗಳು ಜಾರಿಗೆ ಬರಲಿದೆ.
https://youtube.com/shorts/A7gPa–K6QY?si=UClQxtCV5fiwGWUd
1. ಸಂಪೂರ್ಣ ಡಿಜಿಟಲ್ ಬುಕಿಂಗ್ ವ್ಯವಸ್ಥೆ
ಗ್ಯಾಸ್ ಏಜೆನ್ಸಿಗಳಿಗೆ ಅಲೆಯುವ ಕಾಲ ಇನ್ನು ಮುಗಿಯಿತು. ಗ್ಯಾಸ್ ಬುಕಿಂಗ್ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಲಾಗಿದೆ. ಗ್ರಾಹಕರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಮಿಸ್ಡ್ ಕಾಲ್ ನೀಡುವ ಮೂಲಕ ಅಥವಾ ವಾಟ್ಸಾಪ್ (WhatsApp) ಸಂದೇಶದ ಮೂಲಕ ಸುಲಭವಾಗಿ ಸಿಲಿಂಡರ್ ಬುಕ್ ಮಾಡಬಹುದು.
2. ಡೆಲಿವರಿ ಅಥೆಂಟಿಕೇಶನ್ ಕೋಡ್ (DAC) ಕಡ್ಡಾಯ
ಸುರಕ್ಷತೆಯ ದೃಷ್ಟಿಯಿಂದ ಈಗ ಒಟಿಪಿ (OTP) ಆಧಾರಿತ ವಿತರಣಾ ಕ್ರಮವನ್ನು ಜಾರಿಗೆ ತರಲಾಗಿದೆ. ಗ್ಯಾಸ್ ಡೆಲಿವರಿ ಬಾಯ್ ಮನೆಗೆ ಬಂದಾಗ, ನಿಮ್ಮ ಮೊಬೈಲ್ಗೆ ಬರುವ DAC ಕೋಡ್ ಅನ್ನು ಅವರಿಗೆ ನೀಡಬೇಕು. ಈ ಕೋಡ್ ನೀಡಿದ ನಂತರವಷ್ಟೇ ಸಿಲಿಂಡರ್ ಹಸ್ತಾಂತರಿಸಲಾಗುತ್ತದೆ. ಆದ್ದರಿಂದ ನಿಮ್ಮ ಮೊಬೈಲ್ ಸಂಖ್ಯೆಯನ್ನು ಅಪ್ಡೇಟ್ ಮಾಡುವುದು ಅತ್ಯಗತ್ಯ.
3. ಎರಡು ಬುಕಿಂಗ್ಗಳ ನಡುವೆ ಕಡ್ಡಾಯ ಅವಧಿ
ಗ್ಯಾಸ್ ಸಿಲಿಂಡರ್ಗಳ ಕಾಳಸಂತೆ ತಡೆಯಲು ಬುಕಿಂಗ್ ನಡುವೆ ಸಮಯದ ಮಿತಿಯನ್ನು ಹೇರಲಾಗಿದೆ:
ನಗರ ಪ್ರದೇಶಗಳಲ್ಲಿ: ಒಂದು ಸಿಲಿಂಡರ್ ಪಡೆದ ನಂತರ ಮತ್ತೊಂದು ಬುಕ್ ಮಾಡಲು ಕನಿಷ್ಠ 25 ದಿನಗಳ ಅಂತರವಿರಬೇಕು.
ಗ್ರಾಮೀಣ ಪ್ರದೇಶಗಳಲ್ಲಿ: ಈ ಅವಧಿಯನ್ನು 45 ದಿನಗಳಿಗೆ ನಿಗದಿಪಡಿಸಲಾಗಿದೆ.
4. LPG ಮತ್ತು PNG ಎರಡೂ ಬಳಸುವಂತಿಲ್ಲ
ಒಂದೇ ಮನೆಯಲ್ಲಿ ಪೈಪ್ಡ್ ಗ್ಯಾಸ್ (PNG) ಮತ್ತು ಎಲ್ಪಿಜಿ (LPG) ಸಿಲಿಂಡರ್ ಎರಡನ್ನೂ ಒಟ್ಟಿಗೆ ಬಳಸಲು ಅವಕಾಶವಿಲ್ಲ. ಈಗಾಗಲೇ ಎರಡು ಕನೆಕ್ಷನ್ ಹೊಂದಿರುವವರು ಯಾವುದಾದರೊಂದನ್ನು ಬಿಟ್ಟುಕೊಡಬೇಕಾಗುತ್ತದೆ. ಇಲ್ಲದಿದ್ದರೆ ಸರ್ಕಾರವೇ ಕನೆಕ್ಷನ್ ರದ್ದುಗೊಳಿಸುವ ಸಾಧ್ಯತೆಯಿದೆ.
5. ಇ-ಕೆವೈಸಿ ಕಡ್ಡಾಯ
ಗ್ಯಾಸ್ ಗ್ರಾಹಕರು ತಮ್ಮ ಆಧಾರ್ ಕಾರ್ಡ್ ಅಥವಾ ಬಯೋಮೆಟ್ರಿಕ್ ವಿವರಗಳೊಂದಿಗೆ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಕಡ್ಡಾಯ. ಇದನ್ನು ಮಾಡದಿದ್ದರೆ ಗ್ಯಾಸ್ ಬುಕಿಂಗ್ ಮಾಡಲು ಸಾಧ್ಯವಾಗುವುದಿಲ್ಲ ಮತ್ತು ನಿಮ್ಮ ಸಬ್ಸಿಡಿ ಹಣ ಕೂಡ ಸ್ಥಗಿತಗೊಳ್ಳಲಿದೆ.
https://www.newsics.com/2026/04/30/listening-to-music-has-dozens-of-health-benefits/