newsics.com/ನ್ಯೂಸಿಕ್ಸ್
ಮೆಟ್ರೋದಲ್ಲಿ ಮಹಿಳೆಯರ ಶರೀರದ ಭಾಗಗಳನ್ನು ಚಿತ್ರೀಕರಿಸಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿದ್ದ ಆರೋಪಿಯೊಬ್ಬನ ಪ್ರಕರಣ ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ.
https://youtube.com/shorts/A7gPa–K6QY?si=UClQxtCV5fiwGWUd
ಸಾರ್ವಜನಿಕ ಸಾರಿಗೆ ಎಂಬುದು ಯಾರಿಗೂ ಭಯವನ್ನು ಉಂಟು ಮಾಡುವ ಮತ್ತು ಶೋಷಣೆಯ ಸ್ಥಳವಾಗಿರಬಾರದು. ಈ ಜಾಗಗಳು ಎಲ್ಲರ ಪಾಲಿಗೆ ಸದಾ ಸುರಕ್ಷತೆ ಹೊಂದಿದ ಘನತೆಯ ತಾಣಗಳಾಗಿ ಕಂಗೊಳಿಸಬೇಕು’ ಎಂದು ಹೇಳಿದೆ.
ಮೆಟ್ರೋದಲ್ಲಿ ಪ್ರಯಾಣಿಸುವ ಮಹಿಳೆಯರನ್ನು ಹಿಂಬಾಲಿಸಿ ಅವರ ಶರೀರದ ಭಾಗಗಳನ್ನು ಮೊಬೈಲ್ ಫೋನ್‌ನಲ್ಲಿ ಸೆರೆಹಿಡಿದು ಅಂತಹ ವಿಡಿಯೋಗಳನ್ನು ತನ್ನ ‘ಮೆಟ್ರೊ_ಚಿಕ್ಸ್’ ಹೆಸರಿನ ಇನ್‌ಸ್ಟಾಗ್ರಾಂ ಸಾಮಾಜಿಕ ಜಾಲತಾಣದಲ್ಲಿ ಬಿತ್ತರಿಸುತ್ತಿದ್ದ ಆರೋಪಿ ಮೇಲೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ಹಾಗೂ ವಿಚಾರಣೆಯನ್ನು ರದ್ದುಪಡಿಸುವಂತೆ ಆರೋಪಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ವಜಾಗೊಳಿಸಿದೆ.
ಪ್ರಕರಣದ ಆರೋಪಿಯು, ದೂರು ಅಥವಾ ದೋಷಾರೋಪ ಪಟ್ಟಿಯಲ್ಲಿ ಕಂಡುಬರುವ ಎಲ್ಲ ಆರೋಪಗಳು ಕಳಪೆ ಮತ್ತು ಅಸ್ಪಷ್ಟವಾಗಿವೆ. ಸಾಕ್ಷಿಗಳು ವಿಶ್ವಾಸಾರ್ಹವಾಗಿಲ್ಲ. ಆದ್ದರಿಂದ, ಪ್ರಕರಣ ರದ್ದುಗೊಳಿಸಬೇಕು ಎಂದು ತನ್ನ ಅರ್ಜಿಯಲ್ಲಿ ಮನವಿ ಮಾಡಿದ್ದರು.
ಕರಿಹೋಬನಹಳ್ಳಿ ತಿಗಳರಪಾಳ್ಯ ಮುಖ್ಯರಸ್ತೆಯ ನಿವಾಸಿ ಬಿ.ಕೆ. ದಿಗಂತ್ (28) ತನ್ನ ವಿರುದ್ಧದ ಎಫ್‌ಐಆರ್ ಹಾಗೂ ಅಧೀನ ನ್ಯಾಯಾಲಯದಲ್ಲಿ ನಡೆಯುತ್ತಿರುವ ನ್ಯಾಯಿಕ ವಿಚಾರಣೆ ರದ್ದುಪಡಿಸಬೇಕು ಎಂದು ಹೈಕೋರ್ಟ್ ಮೆಟ್ಟಿಲೇರಿದ್ದರು. ಬನಶಂಕರಿ ಪೊಲೀಸ್ ಠಾಣೆ ಪೊಲೀಸರು ಸ್ವಯಂಪ್ರೇರಿತ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಚಾರ್ಜ್‌ಶೀಟ್ ಸಲ್ಲಿಸಿದ್ದು, ‘ತನ್ನ ಇನ್‌ಸ್ಟಾಗ್ರಾಂ ಖಾತೆ ಮೆಟ್ರೊ_ಚಿಕ್ಸ್ ಪುಟವನ್ನು ಹೆಚ್ಚು ಜನರು ಫಾಲೋ ಮಾಡಬೇಕು. ಅತಿ ಹೆಚ್ಚು ಲೈಕ್‌ಗಳು ಹಾಗೂ ಕಮೆಂಟ್‌ಗಳು ಬರಬೇಕು ಎಂಬ ಉದ್ದೇಶದಿಂದ ಆರೋಪಿಯು ಮಹಿಳೆಯರನ್ನು ಹಿಂಬಾಲಿಸಿಕೊಂಡು ಹೋಗಿ ಅವರ ಅಂಗಾಂಗಗಳನ್ನು ರಹಸ್ಯವಾಗಿ ಸೆರೆಹಿಡಿದು ವಿಡಿಯೊ ಚಿತ್ರೀಕರಣ ಮಾಡಿದ್ದಾರೆ. ಇಂತಹ 14 ವಿಡಿಯೊಗಳು ಆರೋಪಿಯ ಪುಟದಲ್ಲಿ ಬಿತ್ತರವಾಗಿರುವುದು ಕಂಡುಬಂದಿದೆ ಎಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ.