Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Retired DGP wife mentally ill ನಿವೃತ್ತ ಡಿಜಿಪಿ ಗಂಡನನ್ನೇ ಕೊಂದ ಪತ್ನಿ ಈಗ ಜೈಲಲ್ಲಿ ಮಾನಸಿಕ ಅಸ್ವಸ್ಥೆ! ವಿಚಿತ್ರ ವರ್ತನೆಗೆ ಬೇಸತ್ತ ಜೈಲ್ ಸಿಬ್ಬಂದಿ
ಕರ್ನಾಟಕಪ್ರಮುಖ

Retired DGP wife mentally ill ನಿವೃತ್ತ ಡಿಜಿಪಿ ಗಂಡನನ್ನೇ ಕೊಂದ ಪತ್ನಿ ಈಗ ಜೈಲಲ್ಲಿ ಮಾನಸಿಕ ಅಸ್ವಸ್ಥೆ! ವಿಚಿತ್ರ ವರ್ತನೆಗೆ ಬೇಸತ್ತ ಜೈಲ್ ಸಿಬ್ಬಂದಿ

Share
2 Min Read
SHARE

newsics.com/ನ್ಯೂಸಿಕ್ಸ್

ಬೆಂಗಳೂರು: ನಿವೃತ್ತ ಡಿಜಿ ಓಂ ಪ್ರಕಾಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ ಪತ್ನಿ ಪಲ್ಲವಿ ಅವರ ವರ್ತನೆ ಗಮನಾರ್ಹವಾಗಿ ಬದಲಾಗಿರುವುದು ಇದೀಗ ಚರ್ಚೆಗೆ ಕಾರಣವಾಗಿದೆ. ಹತ್ಯೆ ಪ್ರಕರಣದ ನಂತರದಿಂದಲೇ ಜೈಲಿನಲ್ಲಿ ಇರುವ ಪಲ್ಲವಿ, ಇತ್ತೀಚಿನ ತಿಂಗಳುಗಳಲ್ಲಿ ಮಾನಸಿಕವಾಗಿ ಅಸ್ಥಿರವಾಗಿ ವರ್ತಿಸುತ್ತಿರುವುದಾಗಿ ಜೈಲು ಮೂಲಗಳು ತಿಳಿಸಿವೆ.

ಪ್ರಕರಣ ನಡೆದು ಈಗಾಗಲೇ ಒಂದು ವರ್ಷ ಕಳೆದಿದೆ. ಆದರೆ ಈ ಅವಧಿಯಲ್ಲಿಯೇ ಪಲ್ಲವಿ ಅವರ ವರ್ತನೆ ದಿನೇದಿನೇ ವಿಚಿತ್ರವಾಗುತ್ತಿದ್ದು, ಜೈಲು ಸಿಬ್ಬಂದಿಗೆ ಅವರನ್ನು ನಿಯಂತ್ರಿಸುವುದು ಸವಾಲಿನ ಸಂಗತಿಯಾಗಿದೆ. ಕೆಲವೊಮ್ಮೆ ಯಾವುದೇ ಕಾರಣವಿಲ್ಲದೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಮೇಲೆ ಕಿರುಚಾಟ, ಕೂಗಾಟ ನಡೆಸುವುದು ಹೆಚ್ಚಾಗಿದೆ.

ವಿಚಿತ್ರ ವರ್ತನೆಗೆ ಬೇಸತ್ತ ಭದ್ರತಾ ಸಿಬ್ಬಂದಿ

ಕಳೆದ ಎರಡು ತಿಂಗಳಿಂದ ಮಾನಸಿಕವಾಗಿ ವಿಚಿತ್ರವಾಗಿ ವರ್ತನೆ ಇನ್ನಷ್ಟು ತೀವ್ರಗೊಂಡಿದ್ದು, ಪಲ್ಲವಿ ಅವರ ಮಾನಸಿಕ ಸ್ಥಿತಿಯ ಬಗ್ಗೆ ಆತಂಕ ವ್ಯಕ್ತವಾಗುತ್ತಿದೆ. ಅವರ ಈ ಅಸಹಜ ನಡೆಗೆ ಬೇಸತ್ತಿರುವ ಭದ್ರತಾ ಸಿಬ್ಬಂದಿ, ಪರಿಸ್ಥಿತಿಯನ್ನು ನಿಭಾಯಿಸಲು ಸಾಕಷ್ಟು ಕಷ್ಟಪಡುತ್ತಿದ್ದಾರೆ.

ಪಲ್ಲವಿ ಜತೆ ಒಂದೇ ಬ್ಯಾರಕ್‌ನಲ್ಲಿ ಇರುವ ಕೆಲವು ಮಹಿಳಾ ವಿಚಾರಣಾಧೀನ ಕೈದಿಗಳು ಕೂಡ ಭಯಭೀತರಾಗಿದ್ದು, ಅವರನ್ನು ಬೇರೆ ಬ್ಯಾರಕ್‌ಗೆ ಸ್ಥಳಾಂತರಿಸುವಂತೆ ಮನವಿ ಮಾಡಿರುವುದಾಗಿ ತಿಳಿದುಬಂದಿದೆ. ಈ ಹಿನ್ನೆಲೆ, ಪಲ್ಲವಿ ಜೊತೆ ಹೊಂದಾಣಿಕೆಯಾಗುವ ಕೆಲ ಮಹಿಳಾ ಕೈದಿಗಳನ್ನು ಅವರ ಬ್ಯಾರಕ್‌ನಲ್ಲಿ ಇರಿಸಲು ಜೈಲು ಸಿಬ್ಬಂದಿ ಕ್ರಮ ಕೈಗೊಂಡಿದ್ದಾರೆ. ಇದರಿಂದ ಪರಿಸ್ಥಿತಿಯನ್ನು ಸ್ವಲ್ಪ ಮಟ್ಟಿಗೆ ಸಮತೋಲನಗೊಳಿಸಲು ಪ್ರಯತ್ನಿಸಲಾಗುತ್ತಿದೆ.

ಇನ್ನೊಂದೆಡೆ, ಪಲ್ಲವಿ ಅವರ ಮಾನಸಿಕ ಆರೋಗ್ಯದ ದೃಷ್ಟಿಯಿಂದ ಪ್ರತಿ ಹದಿನೈದು ದಿನಕ್ಕೊಮ್ಮೆ ಅವರನ್ನು ನಿಮಾನ್ಸ್ (NIMHANS) ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿದೆ. ಅಲ್ಲಿ ವೈದ್ಯರು ಕೌನ್ಸೆಲಿಂಗ್ ಸೇರಿದಂತೆ ಅಗತ್ಯ ಚಿಕಿತ್ಸೆಯನ್ನು ನೀಡುತ್ತಿದ್ದು, ಮಾನಸಿಕ ಸಮಸ್ಯೆಗಳ ಕುರಿತು ನಿರಂತರವಾಗಿ ಪರಿಶೀಲನೆ ನಡೆಸಲಾಗುತ್ತಿದೆ. ಆದರೂ ಕೆಲ ಸಂದರ್ಭಗಳಲ್ಲಿ ಪಲ್ಲವಿ ಆಸ್ಪತ್ರೆಗೆ ಹೋಗಲು ಸಹ ನಿರಾಕರಿಸುತ್ತಿದ್ದು, ಇದರಿಂದ ಸಿಬ್ಬಂದಿಗೆ ಮತ್ತಷ್ಟು ಸಂಕಷ್ಟ ಉಂಟಾಗುತ್ತಿದೆ. ಇಂತಹ ಸಂದರ್ಭಗಳಲ್ಲಿ ಜೈಲು ಸಿಬ್ಬಂದಿಯೇ ಅವರನ್ನು ಮನವೊಲಿಸಿ, ವಿಶ್ವಾಸಕ್ಕೆ ತೆಗೆದುಕೊಂಡು ಆಸ್ಪತ್ರೆಗೆ ಕರೆದೊಯ್ಯಬೇಕಾಗುತ್ತಿದೆ.

ಪಲ್ಲವಿ ಅವರ ಮಾನಸಿಕ ಸ್ಥಿತಿಗೆ ಕುಟುಂಬದ ದೂರವಾಗಿರುವುದೂ ಒಂದು ಕಾರಣವಾಗಿರಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.

ಭೇಟಿಗೆ ಬಾರದ ಮಕ್ಕಳು!

ಕಳೆದ ಒಂದು ವರ್ಷದ ಅವಧಿಯಲ್ಲಿ ಅವರು ತಮ್ಮ ಮಗ ಅಥವಾ ಮಗಳನ್ನು ಭೇಟಿಯಾಗಿಲ್ಲ ಎನ್ನಲಾಗಿದ್ದು, ಕುಟುಂಬದ ಸಂಪರ್ಕವೂ ಕಡಿಮೆಯಾಗಿದೆ. ಈ ಕಾರಣದಿಂದಲೇ ಅವರು ಇನ್ನಷ್ಟು ಒಂಟಿತನಕ್ಕೆ ಒಳಗಾಗಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನೂ ಕೆಲ ಹಿರಿಯ ಐಪಿಎಸ್ ಅಧಿಕಾರಿಗಳ ಮಾನವೀಯ ಮನೋಭಾವದಿಂದ ಪಲ್ಲವಿ ಅವರ ಮಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಮಾಹಿತಿಯೂ ಲಭ್ಯವಾಗಿದೆ. ಆದರೂ, ಕುಟುಂಬದಿಂದ ದೂರವಾಗಿರುವುದು ಪಲ್ಲವಿ ಅವರ ಮನಸ್ಥಿತಿಗೆ ಪರಿಣಾಮ ಬೀರಿರುವುದಾಗಿ ಅಂದಾಜಿಸಲಾಗಿದೆ.

 

ನೋಂದಣಿ ಮಾಡಿಸಿದ್ದ 30 ಸಾವಿರಕ್ಕೂ ಹೆಚ್ಚು ಗರ್ಭಿಣಿಯರ ಪೈಕಿ 3000 ಗರ್ಭಿಣಿಯರು ಪತ್ತೆಯೇ ಇಲ್ಲ

ಉರಿಯುವ ಚಿತೆಗಳ ನಡುವೆ ಸಪ್ತಪದಿ ತುಳಿದ ಜೋಡಿ

ಆಸ್ಪತ್ರೆಯ ಲಿಫ್ಟ್‌ ನಲ್ಲಿ ಸಿಲುಕಿದ ಮಹಿಳಾ ಉದ್ಯೋಗಿಯ ತಲೆ : ವೈರಲ್ ವಿಡಿಯೋ ನೋಡಿ

TAGGED:Wife of retired DGP who killed her husband is now mentally ill in jail! Jail staff fed up with her strange behavior
Share This Article
Facebook Twitter Copy Link Print
Previous Article Sanjana Burli Honeymoon ಹನಿಮೂನ್‌ಗೆಂದು ನಟಿ ಸಂಜನಾ ಬುರ್ಲಿ ಹೋದದ್ದೆಲ್ಲಿಗೆ?
Next Article GOOD MORNING | Today’s Horoscope ಇಂದಿನ ರಾಶಿ ಭವಿಷ್ಯ 29-04-2026, ಬುಧವಾರ, ಹೇಗಿದೆ ನಿಮ್ಮ ಇಂದಿನ ಗ್ರಹಗತಿ?

Popular Posts

ಜೂನ್ 25ಕ್ಕೆ ನಟಿ ಶರ್ಮಿಳಾ ಮಾಂಡ್ರೆ ನಿಶ್ಚಿತಾರ್ಥ; ವರ ಯಾರು?

1 Min Read

ಕಲಬುರಗಿಯಲ್ಲಿ PSI ಆತ್ಮಹತ್ಯೆ, ಕಾರಣವೇನು?

1 Min Read

ಮನೆಯಲ್ಲಿ ನೀರಿನ ಕಾರಂಜಿ ಇಡುವಾಗ ಈ ನಿಯಮಗಳು ನೆನಪಿರಲಿ

1 Min Read

ಉದ್ಯೋಗಿಗಳ ಉತ್ತಮ ನಿದ್ದೆಗೆ ಹೈಟೆಕ್ ಹಾಸಿಗೆ ಗಿಫ್ಟ್ ನೀಡಿದ ಸಿಇಒ!

2 Min Read

You Might Also Like

ಕರ್ನಾಟಕಪ್ರಮುಖ

ಆಭರಣ ಪ್ರಿಯರಿಗೆ ಗುಡ್ ನ್ಯೂಸ್; ಸತತ ಎರಡನೇ ದಿನ ಚಿನ್ನದ ಬೆಲೆ ಇಳಿಕೆ

1 Min Read
ಕರ್ನಾಟಕಪ್ರಮುಖ

ಈ ಜಿಲ್ಲೆಗಳಲ್ಲಿ ಇಂದು ಬಿರುಗಾಳಿಯ ಅಬ್ಬರ; ಮತ್ತೆ ತಾಪಮಾನದಲ್ಲಿ ಏರಿಕೆ

2 Min Read
ಕರ್ನಾಟಕದೇಶಪ್ರಮುಖ

RSS Letter Controversy ಸರ್ಕಾರದ ಪರವಾಗಿ ಆರೆಸ್ಸೆಸ್‌ಗೆ ಪತ್ರ, ಉಡಾಫೆ ಬೇಡ, ಉತ್ತರ ಕೊಡಿ: ಪ್ರಿಯಾಂಕ್ ಖರ್ಗೆ

3 Min Read
ಪ್ರಮುಖ

1200 ವರ್ಷಗಳಿಂದ ನಂದಿಯ ಬಾಯಿಂದ ಶಿವಲಿಂಗಕ್ಕೆ ಸದಾ ನೀರಿನ ಅಭಿಷೇಕ! 

3 Min Read

Social Networks

Facebook-f Instagram Twitter
Welcome Back!

Sign in to your account

Lost your password?