Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಶವಪೆಟ್ಟಿಗೆ ಎದುರು ಭರ್ಜರಿ ಡಾನ್ಸ್! ಇದ್ಯಾಕೆ ಹೀಗೆ? ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ, ವಿಡಿಯೋ ನೋಡಿ
ಪ್ರಮುಖವಿದೇಶವೈರಲ್

ಶವಪೆಟ್ಟಿಗೆ ಎದುರು ಭರ್ಜರಿ ಡಾನ್ಸ್! ಇದ್ಯಾಕೆ ಹೀಗೆ? ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ, ವಿಡಿಯೋ ನೋಡಿ

Share
2 Min Read
SHARE

newsics.com/ನ್ಯೂಸಿಕ್ಸ್

ಸಾಮಾನ್ಯವಾಗಿ ಯಾರಾದರೂ ಅಗಲಿದಾಗ ದುಃಖದಿಂದ ವಿದಾಯ ಹೇಳುತ್ತೇವೆ. ಆದರೆ ಕೆಲವು ಕಡೆ ಯಾರೂ ಊಹಿಸದ ರೀತಿಯಲ್ಲಿ ಅಂತಿಮ ವಿದಾಯವನ್ನು (Farewell) ಹೇಳುತ್ತಾರೆ.

ಇತ್ತೀಚೆಗೆ ಥೈಲ್ಯಾಂಡ್​ನಲ್ಲಿ (Thailand) ಇದೇ ರೀತಿಯ ಘಟನೆಯೊಂದು ಬೆಳಕಿಗೆ ಬಂದಿದ್ದು, ಎಲ್ಲರನ್ನೂ ಬೆಚ್ಚಿ ಬೀಳಿಸಿದೆ.

ಇಲ್ಲಿನ ಒಂದು ಕುಟುಂಬವು (Family) ತಮ್ಮ ಪ್ರೀತಿಪಾತ್ರರ ಕೊನೆಯ ಆಸೆಯನ್ನು ಪೂರೈಸಲು ಅಂತ್ಯಕ್ರಿಯೆಯಲ್ಲಿ (Funeral) ನೃತ್ಯ ​​ಪ್ರದರ್ಶನವನ್ನು (Dance Performance) ನೀಡಲು ಡ್ಯಾನ್ಸರ್​ಗಳನ್ನು (Dancers) ಕರೆಸಿದೆ. ಈ ವಿಚಾರ ಸೋಶಿಯಲ್​ ಮೀಡಿಯಾದಲ್ಲಿ (Social Media) ವೈರಲ್​ ಆಗಿದ್ದು, ಚರ್ಚೆಗೆ ಕಾರಣವಾಗಿದೆ.

ನಮ್ಮಲ್ಲಿ, ಮೃತರ ಅಂತಿಮ ಯಾತ್ರೆ ವೇಳೆ ತಮಟೆ ಬಾರಿಸುವ ಸಂಪ್ರದಾಯವಿದೆ. ಅದು ಹುಟ್ಟಿದ್ದು ಹೇಗೋ ಗೊತ್ತಿಲ್ಲ. ಆದರೆ ಶವದ ಮೆರವಣಿಗೆಯಲ್ಲಿ ಬಾರಿಸುವ ತಮಟೆಗೆ ಹಳೆಯ ಇತಿಹಾಸವಿದೆ. ಹಾಗೇ ಕಳೆದ ಕೆಲವು ವರ್ಷಗಳ ಹಿಂದೆ ಆಫ್ರಿಕಾ ದೇಶದ ಘಾನದಲ್ಲಿ ‘ಶವ ಪೆಟ್ಟಿಗೆ ಡ್ಯಾನ್ಸ್’​ ಮಿಮ್ಸ್​ಗಳಲ್ಲಿ ರಾರಾಜಿಸಿತ್ತು, ಇದೀಗ ಥೈಲ್ಯಾಂಡ್​ನಲ್ಲಿ ನಡೆದ ಘಟನೆ ಸಾಕಷ್ಟು ಸದ್ದು ಮಾಡುತ್ತಿದೆ.

ಈ ವಿಚಿತ್ರ ಘಟನೆ ಥೈಲ್ಯಾಂಡ್‌ನ ನಖೋನ್ ಸಿ ಥಮ್ಮರತ್‌ನ ರಾನ್ ಫಿಬುನ್ ಜಿಲ್ಲೆಯಲ್ಲಿರುವ ವಾಟ್ ಥೆಪ್ಫನಮ್ ಚುಯೆಟ್ ದೇವಾಲಯದಲ್ಲಿ ನಡೆದಿದೆ. 59 ವರ್ಷದ ವ್ಯಕ್ತಿಯ ಅಂತ್ಯಕ್ರಿಯೆಗೆ ದೇವಾಲಯದ ಆವರಣದಲ್ಲಿ ಸಿದ್ಧತೆ ಮಾಡಲಾಗುತ್ತಿತ್ತು, ಆದರೆ, ಅಲ್ಲಿನ ವಾತಾವರಣವು ದುಃಖಕ್ಕಿಂತ ಭಿನ್ನವಾಗಿತ್ತು.

ಬ್ಯಾಂಕಾಕ್​ ಪೋಸ್ಟ್​​​ನ ವರದಿಯ ಪ್ರಕಾರ, ಮೃತರ ಕೊನೆಯ ಆಸೆಯನ್ನು ಗೌರವಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕುಟುಂಬ ತಿಳಿಸಿದೆ. ಜನರು ತಮ್ಮ ಸಾವನ್ನು ಶೋಕಿಸುವ ಬದಲು ಸಂತೋಷದಿಂದ ತಮ್ಮ ಜೀವನವನ್ನು ನೆನಪಿಸಿಕೊಳ್ಳಬೇಕೆಂದು ಅವರು ಬಯಸಿದ್ದರು. ಈ ಕಾರಣಕ್ಕಾಗಿ, ಅಂತ್ಯಕ್ರಿಯೆಯ ಮೊದಲು ಶವಪೆಟ್ಟಿಗೆಯ ಮುಂದೆ ಪ್ರದರ್ಶನ ನೀಡಲು ಮೂವರು ನೃತ್ಯಗಾರರನ್ನು ಆಹ್ವಾನಿಸಲಾಯಿತು ಎಂದು ಹೇಳಿದ್ದಾರೆ.

ಈ ಆಸೆಯನ್ನು ಪೂರೈಸಲು, ಮೃತನ ಕುಟುಂಬಸ್ಥರು ಅಂತ್ಯಕ್ರಿಯೆಗೆ ಮೂವರು ‘ಕೊಯೊಟೆ ನೃತ್ಯಗಾರರನ್ನು’ ಕರೆಸಿದ್ದಾರೆ. ಈ ಡ್ಯಾನ್ಸರ್ಸ್​ ಶವಪೆಟ್ಟಿಗೆಯ ಮುಂದೆ ಡ್ಯಾನ್ಸ್​ ಮಾಡಿದ್ದಾರೆ. ಆದರೆ, ಈ ದೃಶ್ಯವನ್ನು ಕಂಡ ಅಂತ್ಯಕ್ರಿಯೆಗೆ ಹಾಜರಾಗಿದ್ದವರು ಒಂದು ಕ್ಷಣ ಶಾಕ್​ ಆಗಿದ್ದಾರೆ. ಈ ಕೊಯೊಟೆ ಡ್ಯಾನ್ಸರ್ಸ್​ಗಳು ಬಾರ್​ಗಳಲ್ಲಿ ನೃತ್ಯಮಾಡುವವರಾಗಿದ್ದಾರೆ.

ಇಡೀ ಕಾರ್ಯಕ್ರಮದ ವಿಡಿಯೋವನ್ನು ರೆಕಾರ್ಡ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದ್ದು, ಈ ವಿಡಿಯೋ ಬೇಗನೆ ವೈರಲ್ ಆಗಿ ವ್ಯಾಪಕ ಚರ್ಚೆಗೆ ನಾಂದಿ ಹಾಡಿದೆ.

ಕೆಲವರು ಈ ಕ್ರಮವನ್ನು ಶ್ಲಾಘಿಸಿದ್ದಾರೆ. ಇದು ಮೃತರ ಕೊನೆಯ ಆಸೆಗಳನ್ನು ಗೌರವಿಸುತ್ತದೆ ಎಂದು ಹೇಳಿದ್ದಾರೆ. ದುಃಖಪಡುವ ಬದಲು ಜೀವನವನ್ನು ಸಂತೋಷದಿಂದ ನೆನಪಿಸಿಕೊಳ್ಳುವುದು ಸಕಾರಾತ್ಮಕ ವಿಧಾನ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮತ್ತೊಂದೆಡೆ, ಈ ಕ್ರಮದ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಅಂತ್ಯಕ್ರಿಯೆಯಂತಹ ಗಂಭೀರ ಕಾರ್ಯಕ್ರಮದ ಸಮಯದಲ್ಲಿ ಅಂತಹ ಕಾರ್ಯಕ್ರಮವು ಸೂಕ್ತವಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

ಥೈಲ್ಯಾಂಡ್‌ನಂತಹ ದೇಶಗಳು ವೈವಿಧ್ಯಮಯ ಸಾಂಸ್ಕೃತಿಕ ಪದ್ಧತಿಗಳನ್ನು ಹೊಂದಿವೆ ಮತ್ತು ಸ್ಥಳೀಯ ಸಂಪ್ರದಾಯಗಳು ಅಂತ್ಯಸಂಸ್ಕಾರದಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ. ಈ ಘಟನೆಯು ಮೃತರ ವೈಯಕ್ತಿಕ ಆಶಯಗಳಿಗೆ ಎಷ್ಟು ಪ್ರಾಮುಖ್ಯತೆ ನೀಡಬೇಕು ಎಂಬುದರ ಕುರಿತು ಹೊಸ ಚರ್ಚೆಗಳನ್ನು ಹುಟ್ಟುಹಾಕಿದೆ.

https://x.com/BangkokPostNews/status/2047235183561322707?s=20

https://x.com/BangkokPostNews/status/2047235183561322707?s=20

 

Global Temperature ಹೀಟ್​ ವೇವ್​ ಅಬ್ಬರ : ಜಗತ್ತಿನ ಅತಿ ಹೆಚ್ಚು ತಾಪಮಾನವಿರುವ 100 ನಗರಗಳಲ್ಲಿ ಭಾರತದ 95 ನಗರ, ಕರ್ನಾಟಕದ 3 ಜಿಲ್ಲೆಗಳು

ರಸ್ತೆ ಬದಿ ಸ್ಕೂಟರ್ ನಿಲ್ಲಿಸಿ ಫೋನ್ ನಲ್ಲಿ ಮಾತನಾಡುತ್ತಿದ್ದ ವ್ಯಕ್ತಿ : ಮುಂದೇನಾಯ್ತು? ವೈರಲ್ ವಿಡಿಯೋ ನೋಡಿ

ಚಲಿಸುತ್ತಿದ್ದ ರೈಲಿನಿಂದ ಕೈಜಾರಿ ಬಿದ್ದ ಮಗು : ಚೈನ್ ಎಳೆದರೂ ನಿಲ್ಲದ ರೈಲು, ಕಣ್ಣೀರಿಟ್ಟ ತಾಯಿ

 

TAGGED:Dancing in front of a coffin! Why is this happening? Huge discussion on social mediawatch the video
Share This Article
Facebook Twitter Copy Link Print
Previous Article ಪರಮೇಶ್ವರ್ ಗೆ ಸಿಎಂ ಪಟ್ಟ..!?; ಹೈಕಮಾಂಡ್ ಮುಂದೆ ಸಿದ್ದರಾಮಯ್ಯ ಇಟ್ಟ ʻಕಂಡೀಷನ್’ ಏನು?
Next Article ಬಿಜೆಪಿ ಜೊತೆ ರಾಘವ್ ಚಡ್ಡಾ ಸೇರಿ 7 ಆಪ್ ಸಂಸದರ ವಿಲೀನವನ್ನು ಅಂಗೀಕರಿಸಿದ ರಾಜ್ಯಸಭೆ

Popular Posts

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read

CM D K Shivakumar Pressmeet | ಮತ್ತೆ ಮುಂದೂಡಿದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ

2 Min Read

Daily Horoscope Today | ಇಂದಿನ ರಾಶಿ ಭವಿಷ್ಯ – 12 ರಾಶಿಗಳ ಸಂಪೂರ್ಣ ಫಲ ಭವಿಷ್ಯ

2 Min Read

Shri Lakshmi Hayagreeva Mantra | ಶ್ರೀ ಲಕ್ಷ್ಮೀ ಹಯಗ್ರೀವ ಆರಾಧನೆ: ಏಕಾಗ್ರತೆ, ಜ್ಞಾಪಕಶಕ್ತಿ ಮತ್ತು ವಿದ್ಯಾಭ್ಯಾಸದ ಯಶಸ್ಸಿಗೆ ಆಧ್ಯಾತ್ಮಿಕ ಮಾರ್ಗ

2 Min Read

You Might Also Like

ವೈರಲ್

Personality Traits Based on the Day You Were Born ನೀವು ಹುಟ್ಟಿದ ವಾರದ ದಿನದ ಪ್ರಕಾರ ನಿಮ್ಮ ಸ್ವಭಾವ ಹೇಗಿರುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read
ಪ್ರಮುಖದೇಶ

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read
ಪ್ರಮುಖದೇಶ

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read
ಪ್ರಮುಖಕರ್ನಾಟಕ

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?