newsics.com/ನ್ಯೂಸಿಕ್ಸ್
ಅಮೆರಿಕದ ರಾಜಧಾನಿ ವಾಷಿಂಗ್ಟನ್ ಡಿ.ಸಿಯಲ್ಲಿನ ಹಿಲ್ಟನ್ ಹೋಟೆಲ್‌ನಲ್ಲಿ ನಡೆದ ವರದಿಗಾರರೊಂದಿಗಿನ ಹೈಪ್ರೊಫೈಲ್ ಔತಣಕೂಟದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ನಡೆದಿರುವ ಹತ್ಯೆ ಯತ್ನ ಆರೋಪದಲ್ಲಿ ಕೋಲ್ ಥಾಮಸ್ ಅಲೆನ್ ಎಂಬಾತನನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಯಾರು ಈ ಕೋಲ್ ಥಾಮಸ್ ಅಲೆನ್?
ಸದ್ಯ ದೊರೆತಿರುವ ಮಾಹಿತಿ ಪ್ರಕಾರ, ಬಂಧಿತ ಕೋಲ್ ಅಲೆನ್ ಕಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಮೆಕಾನಿಕಲ್ ಎಂಜಿನಿಯರಿಂಗ್ನಲ್ಲಿ 2017 ರಲ್ಲಿ ಪದವಿ ಪಡೆದಿದ್ದು, ಕಾಲಿಫೋರ್ನಿಯಾ ರಾಜ್ಯ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ಇವರು ಸಿ 2 (C2) ಎಂಬ ಶೈಕ್ಷಣಿಕ ಸಂಸ್ಥೆಯಲ್ಲಿ ಪಾರ್ಟ್ ಟೈಮ್ಗೆ ಬೋಧಕ ಸಿಬ್ಬಂದಿಯಾಗಿ ಕೆಲಸಮಾಡುತ್ತಿದ್ದು, 2024 ರಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪಡೆದಿದ್ದಾರೆ. ಹಾಗೆಯೇ ಈ ಅಲೆನ್, 2014 ರಲ್ಲಿ ನಾಸಾ ದ ಪ್ರೊಪಲ್ಷನ್ ಪ್ರಯೋಗಾಲಯದ ಬೇಸಿಗೆ ಸಂಶೋಧನಾ ಶಿಬಿರದ ಫೆಲ್ಲೊಶಿಫ್ನಲ್ಲಿ ಭಾಗವಹಿಸಿದ್ದರು ಎಂದು ಹೇಳಲಾಗುತ್ತಿದೆ.
ಇದರ ಜೊತೆಗೆ, ಅಲೆನ್ ವಿಡಿಯೋ ಗೇಮ್ಗಳನ್ನು ಡೆವಲಪರ್ ಆಗಿ ಸಹ ಕೆಲಸ ಮಾಡಿದ್ದು, ಯುದ್ಧ ಹಾಗೂ ಹೊಡೆದಾಟದ ಗೇಮ್ಗಳನ್ನು ಸೃಷ್ಟಿಸುವಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾನೆ ಎಂದು ತಿಳಿದಿದೆ. ಹಾಗೆಯೇ ಈ ಕೋಲ್ ಅಲೆನ್ 2024 ರಲ್ಲಿ ಡೆಮೊಕ್ರಾಟಿಕ್ ಪಕ್ಷದ ಕಮಾಲಾ ಹ್ಯಾರಿಸ್ಗೆ ಬೆಂಬಲ ಸೂಚಿಸಿ 25 ಡಾಲರ್ನ್ನು ದೇಣಿಗೆ ರೂಪದಲ್ಲಿ ನೀಡಿದ್ದ ಎಂದು ಮಾಹಿತಿ ದೊರೆತಿದೆ.
ಈ ಔತಣಕೂಟದಲ್ಲಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪತ್ನಿ ಮೆಲೆನಿಯಾ ಟ್ರಂಪ್, ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಸೇರಿದಂತೆ ಸುಮಾರು 2,500 ಹೈ ಪ್ರೊಫೈಲ್ ಜನರು ಹಾಜರಿದ್ದರೆಂದು ತಿಳಿದು ಬಂದಿದೆ.
ಬಂಧಿತ ಆರೋಪಿ ಸೆಕ್ಯರಿಟಿ ಚೆಕ್ಪಾಯಿಂಟ್ನ್ನು ದಾಟಿ ಬಂದೂಕನ್ನು ಹಿಡಿದು ಬಾಲ್ರೂಮ್ನತ್ತ ಓಡುತ್ತಿದ್ದಾಗ ಭದ್ರತಾ ಸಿಬ್ಬಂದಿಗಳು ಆತನನ್ನು ವಶಕ್ಕೆ ಪಡೆದಿರುವುದಾಗಿ ವಾಷಿಂಗ್ಟನ್ ಡಿ.ಸಿ ಪೊಲೀಸ್ ಮುಖ್ಯಸ್ಥ ಜೇಫ್ರಿ ಕ್ಯಾರೋಲ್ ತಿಳಿಸಿದ್ದಾರೆ. ಆತನನ್ನು ವಶಕ್ಕೆ ಪಡೆದ ಕೂಡಲೇ ಅರೆ ಬೆತ್ತಲೆ ಮಾಡಿ ನೆಲದ ಮೇಲೆ ಮಲಗಿಸಿ, ಸ್ಪೋಟಕ ವಸ್ತುಗಳೇನಾದರೂ ಇದ್ದವೆ ಎಂದು ಪರೀಕ್ಷಿಸಲಾಗಿದೆ. ಆದರೆ ಅವನ ಬಳಿ ಯಾವುದೇ ಸ್ಪೋಟಕಗಳು ಕಂಡು ಬಂದಿಲ್ಲ. ಅಲೇನ್ ಬಳಿ ಇದ್ದ ಶಾಟ್ಗನ್, ಹ್ಯಾಂಡ್ಗನ್ ಹಾಗೂ ಹಲವಾರು ಚಾಕುಗಳನ್ನು ವಶಕ್ಕೆ ತೆಗೆದು ಕೊಂಡಿರುವುದಾಗಿ ಕ್ಯಾರೋಲ್ ಮಾಹಿತಿ ನೀಡಿದ್ದಾರೆ.
ಪ್ರಕರಣ ದಾಖಲು; ಸೋಮವಾರ ಹಾಜರು
ಭದ್ರತಾ ಸಿಬ್ಬಂದಿ ಅಲೆನ್ನ್ನು ತಡೆಯಲು ಯತ್ನಿಸಿದಾಗ ಗುಂಡಿನ ದಾಳಿ ನಡೆಸಿದ್ದಾನೆ. ಭದ್ರತಾ ಸಿಬ್ಬಂದಿಗಳು ಬುಲೆಟ್ಪ್ರೂಫ್ ಜಾಕೆಟ್ ಧರಿಸಿದ್ದ ಕಾರಣ ಯಾವುದೇ ಅಪಾಯ ಸಂಭವಿಸಲಿಲ್ಲ ಎಂದು ಯುಎಸ್ ಅಟಾರ್ನಿ ಜೀನೈನ್ ಪಿರೊ ಹೇಳಿದ್ದಾರೆ.
ಬಂಧಿತ ಆರೋಪಿ ಕೋಲ್ ಥಾಮಸ್ ಅಲೆನ್ನನ್ನು ಸೋಮವಾರ (ಏ.27) ಫೆಡರಲ್ ನ್ಯಾಯಾಲಯದ ಮುಂದೆ ಹಾಜರು ಪಡಿಸುವುದಾಗಿ ತಿಳಿಸಿದ್ದಾರೆ. ಅದೇ ರೀತಿ ತನಿಖೆ ನಡೆಯುತ್ತಿದ್ದು, ಇವನ ಮೇಲೆ ಕಾರ್ಯುಕ್ರಮಕ್ಕೆ ಬಂದೂಕಿದಾರಿಯಾಗಿ ಬಂದಿರುವ ಹಾಗೂ ಕೊಲೆ ಯತ್ನ ಮಾಡಿರುವ ಹಿನ್ನಲೆ ಪ್ರಕರಣವನ್ನು ದಾಖಲಿಸಿ ಕೊಳ್ಳಲಾಗಿದೆ ಎಂದು ಪಿರೊ ತಿಳಿಸಿದ್ದಾರೆ,