Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > Uncategorized > ಬರೋ ಬಾಡಿಗೆ ನಂಬಿಕೊಳ್ಳುವಂತಾಗಿದೆ: ನಟ ದಿಗಂತ್‌ ಈ ರೀತಿ ಹೇಳಿದ್ಯಾಕೆ
Uncategorized

ಬರೋ ಬಾಡಿಗೆ ನಂಬಿಕೊಳ್ಳುವಂತಾಗಿದೆ: ನಟ ದಿಗಂತ್‌ ಈ ರೀತಿ ಹೇಳಿದ್ಯಾಕೆ

Share
2 Min Read
SHARE

newsics.com/ನ್ಯೂಸಿಕ್ಸ್

ನಟ ದಿಗಂತ್‌ ಚಿತ್ರರಂಗಕ್ಕೆ 20 ವರ್ಷ ಆಗಿದೆ. ಈ 20 ವರ್ಷದಲ್ಲಿ ಸಾಕಷ್ಟು ಸಿನಿಮಾ ಮಾಡಿದ್ದಾರೆ. ಸೋಲು-ಗೆಲುವು ಎರಡನ್ನೂ ನೋಡಿದ್ದಾರೆ. ಆದರೆ, ಯಾವತ್ತೂ ಸಿನಿಮಾಗಳಿಲ್ಲದೇ ಖಾಲಿ ಕುಳಿತವರಲ್ಲ. ಈಗ ಅಂತಹ ಒಂದು ಅನುಭವ ಕೂಡಾ ದಿಗಂತ್‌ ಅವರಿಗೆ ಆಗಿದೆಯಂತೆ. ಅದಕ್ಕೆ ಕಾರಣ ಕನ್ನಡ ಚಿತ್ರರಂಗದಲ್ಲಿನ ಗೆಲುವಿನ ಕೊರತೆ.

ಇತ್ತೀಚೆಗಷ್ಟೇ ದಿಗಂತ್‌ ಅವರ ರುದ್ರ ನಾಗ ಸಿನಿಮಾ ಸೆಟ್ಟೇರಿದೆ. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ದಿಗಂತ್‌, ಇವತ್ತಿನ ಈ ಪರಿಸ್ಥಿತಿಗೆ ಕಾರಣ ಕನ್ನಡದಲ್ಲಿ ಒಳ್ಳೆಯ ಸಿನಿಮಾ ಬಾರದಿರುವುದು. ಸಿನಿಮಾ ಗೆದ್ದಾಗ ಚಿತ್ರರಂಗ ಚೆನ್ನಾಗಿ ಇರುತ್ತದೆ. ಆದರೆ, ಈಗಿನ ಪರಿಸ್ಥಿತಿಯಲ್ಲಿ ಸಿನಿಮಾ ಮಾಡಲು ಹೊಸ ನಿರ್ಮಾಪಕರು ಭಯಪಡುತ್ತಾರಂತೆ ಎನ್ನುತ್ತಾರೆ.

ಈ ಅನುಭವದ ಕುರಿತು ಮಾತನಾಡುವ ದಿಗಂತ್‌, ಆರು ತಿಂಗಳ ಹಿಂದೆ ಎರಡು ಸಿನಿಮಾ ಒಪ್ಪಿಕೊಂಡಿದ್ದೆ. ಆದರೆ, ನಿರ್ಮಾಪಕರು ಬಂದು ಸದ್ಯ ಪರಿಸ್ಥಿತಿ ಸರಿ ಇಲ್ಲ ಈಗ ಸಿನಿಮಾ ಮಾಡೋದು ಬೇಡ ಎಂದರು. ಆಗಲೇ ನನಗೆ ಗೊತ್ತಾಗಿದ್ದು, ಪರಿಸ್ಥಿತಿ ಸರಿಯಿಲ್ಲ ಎಂದು. ಏನು ಮಾಡೋದು, ಬೇರೆ ಕೆರಿಯರ್‌ ಹುಡುಕಬೇಕಾ ಎಂಬ ಯೋಚನೆ ಬಂತು.

ತೀರ್ಥಹಳ್ಳಿಗೆ ಹೋಗಿ ತೋಟ ನೋಡಿಕೊಳ್ಳೋದಾ ಅಥವಾ ಯಾವುದಾದರೂ ಕೋಸ್‌ ಮಾಡೋದಾ ಎಂಬ ಯೋಚನೆ ಬಂದಿದ್ದು ಸುಳ್ಳಲ್ಲ. ಏಕೆಂದರೆ ನಾನು ವರ್ಷಪೂರ್ತಿ ಬಿಝಿ ಇದ್ದವನು, ಸೋಲು-ಗೆಲುವು ಏನೇ ಇರಬಹುದು, ಕೈ ತುಂಬಾ ಕೆಲಸ ಇತ್ತು. ಆದರೆ, ಮೊದಲ ಬಾರಿಗೆ ಸಿನಿಮಾಕ್ಕಾಗಿ ಎದುರು ನೋಡುವಂತಾಗಿದೆ ಎನ್ನುತ್ತಾರೆ.

ನಂದಿ ಹಿಲ್ಸ್‌ ಬಳಿ ನನ್ನದೊಂದು ಗೇಟೆಡ್‌ ಕಮ್ಯುನಿಟಿಯಲ್ಲಿ ಮನೆ ಇದೆ. ಈಗ ಆ ಮನೆಯನ್ನು ಬಾಡಿಗೆಗೆ ಬಿಟ್ಟಿದ್ದೇನೆ. ಆ ಬಾಡಿಗೆಯನ್ನೂ ಈಗ ನಂಬಿಕೊಳ್ಳುವಂತಾಗಿದೆ ಎನ್ನುವ ಮೂಲಕ ಸದ್ಯ ಕನ್ನಡ ಚಿತ್ರರಂಗದ ಪರಿಸ್ಥಿತಿ ಬಗ್ಗೆ ಹೇಳುತ್ತಾರೆ ದಿಗಂತ್‌.

ದಿಗಂತ್‌ ಹೇಳುವಂತೆ ಇಂತಹ ಪರಿಸ್ಥಿತಿ ಇರೋದು ಕನ್ನಡದಲ್ಲಿ ಮಾತ್ರ. ಅದೇ ತೆಲುಗು ಸೇರಿದಂತೆ ಬೇರೆ ಭಾಷೆಗಳಲ್ಲಿ ಸಿನಿಮಾ ಕೆಲಸಗಳು ಜೋರಾಗಿ ನಡೆಯುತ್ತಿವೆ. ಸಿನಿಮಾ ಆರಂಭವಾಗುತ್ತಿದ್ದಂತೆ ಬಿಜಿನೆಸ್‌ ಕೂಡಾ ಆಗುತ್ತಿದೆ. ಆದರೆ, ಕನ್ನಡದಲ್ಲಿ ಅಂತಹ ಸಹಕಾರ ಸಿಗುತ್ತಿಲ್ಲ ಎನ್ನುವ ದಿಗಂತ್‌, ಇವತ್ತು ಚಿತ್ರಮಂದಿರಗಳು ದುಬಾರಿಯಾಗಿರೋದು ಕೂಡಾ ಜನ ಚಿತ್ರಮಂದಿರಕ್ಕೆ ಬಾರದಿರಲು ಒಂದು ಕಾರಣ ಎನ್ನುತ್ತಾರೆ.

ಆಪ್ ಗೆ ದೊಡ್ಡ ಹೊಡೆತ; ಗುಡ್ ಬೈ ಹೇಳಿದ ಚಡ್ಡಾ

TAGGED:It's like trusting the rent: Why did actor Digant say this?
Share This Article
Facebook Twitter Copy Link Print
Previous Article ಆಪ್ ಗೆ ದೊಡ್ಡ ಹೊಡೆತ; ಗುಡ್ ಬೈ ಹೇಳಿದ ಚಡ್ಡಾ
Next Article Paytm Payments Bank closed ತಕ್ಷಣದಿಂದಲೇ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಬಂದ್: RBI ನಿರ್ಧಾರಕ್ಕೇನು ಕಾರಣ?

Popular Posts

Kaveri River Issue | ಡಿಕೆ ಶಿವಕುಮಾರ್-ತಮಿಳುನಾಡು ಸಿಎಂ ವಿಜಯ್ ಭೇಟಿ ದಿನಾಂಕ ನಿಗದಿ

2 Min Read

Sexual harrassment for minor ಕೆಲಸಕ್ಕೆಂದು ತೆರಳಿ ನಾಪತ್ತೆಯಾಗಿದ್ದ ಅಪ್ರಾಪ್ತೆ ಪತ್ತೆ: ಲೈಂ*ಗಿಕ ದೌರ್ಜನ್ಯ, ಆರೋಪಿ ಬಂಧನ

1 Min Read

Narendra Modi on Protest ಮಧ್ಯರಾತ್ರಿ ವಿಡಿಯೋ ಸಂದೇಶ ಬಿಡುಗಡೆ ಮಾಡಿದ ಪ್ರಧಾನಿ ಮೋದಿ

2 Min Read

What Do Pimples on Different Parts of Your Face Mean? ಮುಖದ ಮೇಲಿನ ಮೊಡವೆಗಳನ್ನು ನಿರ್ಲಕ್ಷಿಸಬೇಡಿ! ಕಾರಣ ತಿಳಿದುಕೊಳ್ಳಿ

2 Min Read

You Might Also Like

Uncategorized

Today Gold Rates In Bangalore| ಬೆಂಗಳೂರು ಚಿನ್ನ-ಬೆಳ್ಳಿ ದರ ಇಂದು: ಚಿನ್ನ ಸ್ಥಿರ, ಬೆಳ್ಳಿ ದರದಲ್ಲಿ ಅಲ್ಪ ಬದಲಾವಣೆ

2 Min Read
Uncategorized

Eat These Fruits for Naturally Glowing Skin: ಗ್ಲೋಯಿಂಗ್ ಸ್ಕಿನ್‌ಗಾಗಿ ಈ ಹಣ್ಣುಗಳನ್ನು ತಿನ್ನಿ! ನೈಸರ್ಗಿಕ ಕಾಂತಿಯುತ ಚರ್ಮಕ್ಕೆ ಆರೋಗ್ಯಕರ ಆಹಾರ

1 Min Read
Uncategorized

Cockroach ಜಿರಳೆ ಕಂಡರೆ ಮಹಿಳೆಯರು ಅಷ್ಟೊಂದು ಕಿರುಚಾಡುವುದೇಕೆ? ಇದರ ಹಿಂದಿರುವ ಅಸಲಿ ಸೈಕಾಲಜಿ ಇಲ್ಲಿದೆ

2 Min Read
Uncategorizedಕರ್ನಾಟಕಪ್ರಮುಖ

Viral Fever ಸಿಲಿಕಾನ್ ಸಿಟಿಯಲ್ಲಿ ಶುರುವಾಯ್ತು ಹೊಸ ಜ್ವರದ ಕಾಟ; ಕೋವಿಡ್‌ಗಿಂತ ಸ್ವೈನ್ ಫ್ಲೂ, H3N2 ಅಬ್ಬರ ಜೋರು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?