Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Actor Darshan ಪವಿತ್ರಾ ಗೌಡ ಅಲ್ಲ.. ರೇಣುಕಾಸ್ವಾಮಿನೂ ಅಲ್ಲ..! ದರ್ಶನ್ ಜೈಲು ಸೇರಲು ಇವನೇ ಪರೋಕ್ಷ ಕಾರಣ
ಕರ್ನಾಟಕಪ್ರಮುಖಮನರಂಜನೆ

Actor Darshan ಪವಿತ್ರಾ ಗೌಡ ಅಲ್ಲ.. ರೇಣುಕಾಸ್ವಾಮಿನೂ ಅಲ್ಲ..! ದರ್ಶನ್ ಜೈಲು ಸೇರಲು ಇವನೇ ಪರೋಕ್ಷ ಕಾರಣ

Share
2 Min Read
SHARE

newsics.com

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆಪ್ರಕರಣದಲ್ಲಿ ನಟ ದರ್ಶನ್ ತೂಗುದೀಪ,  ಜೈಲು ಸೇರಿದ್ದಾರೆ. ಆದರೆ  ದರ್ಶನ್ ಜೈಲು ಸೇರಲು ಕಾರಣ ಪವಿತ್ರಾ ಗೌಡ ಅಲ್ಲ, ರೇಣುಕಾಸ್ವಾಮಿನೂ ಅಲ್ಲ. ಈ ಒಬ್ಬ ವ್ಯಕ್ತಿಯಿಂದ ನಟ ದರ್ಶನ್ ಜೈಲು ಪಾಲಗಿದ್ದಾರೆ.

https://youtube.com/shorts/7P5j592ICRU?si=brWLJ4hEetaflYiu

ಕಳೆದ ಕೆಲವು ದಿನಗಳ ಹಿಂದೆ ಬಹುಕಾಲದಿಂದ ಮರೆಯಾಗಿದ್ದ ಒಂದು ಹಳೆಯ ಪ್ರಕರಣ ಈಗ ಮತ್ತೆ ಮುನ್ನೆಲೆಗೆ ಬಂದಿತ್ತು . ನಟ ದರ್ಶನ್ ಅವರ ಮಾಜಿ ಮ್ಯಾನೇಜರ್ ಮಲ್ಲಿಕಾರ್ಜುನ್ ಹಲವು ವರ್ಷಗಳ ನಂತರ ಹಠಾತ್ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು.  ದರ್ಶನ್ ಆಪ್ತರು ಹೇಳೋ ಪ್ರಕಾರ ದಾಸನ ಸದ್ಯದ ಸ್ಥಿತಿಗೆ ಈ ಮಲ್ಲಿಕಾರ್ಜುನೇ ಕಾರಣ. ಈತ ಮಾಡಿದ ಕೆಲಸಗಳಿಂದಲೇ ಇವತ್ತು ದರ್ಶನ್ ಜೈಲು ಸೇರಿರೋದು.

ಕೋಟಿ ಕೋಟಿ ಅಭಿಮಾನಿಗಳ ಒಡೆಯ, ಸ್ಯಾಂಡಲ್​ವುಡ್​​ನ ಗಜ ದರ್ಶನ್ ಇವತ್ತು ಪರಪ್ಪನ ಅಗ್ರಹಾರ ಸೇರಿ ಕಂಬಿ ಹಿಂದೆ ಜೀವನ ಮಾಡ್ತಾ ಇರೋದು ದುರಂತವೇ ಸರಿ. ದರ್ಶನ್​ ಹೀಗೆ ಜೈಲು ಸೇರಿರೋದು ಬರೀ ಅವರಿಗೆ, ಅವರ ಕುಟುಂಬಕ್ಕಷ್ಟೇ ಅಲ್ಲ, ಇಡೀ ಚಿತ್ರರಂಗಕ್ಕೆ ನಷ್ಟ ಅಂತಾರೆ ಸಿನಿಮಾ ಮಂದಿ.

ಆದ್ರೆ ದರ್ಶನ್ ಇವತ್ತಿನ ಸ್ಥಿತಿಗೆ ಯಾರು ಕಾರಣ ಅಂತ ನೋಡಹೋದ್ರೆ.. ಕೆಲವರು ಪವಿತ್ರಾ ಗೌಡ ಸಹವಾಸ ಕಾರಣ ಅಂತಾರೆ. ರೇಣುಕಾಸ್ವಾಮಿ ಮಾಡಿದ ತಪ್ಪು, ಅದನ್ನ ಶಿಕ್ಷಿಸೋಕೆ ಹೋಗಿ ದರ್ಶನ್ ಮಾಡಿದ ಎಡವಟ್ಟು ಕಾರಣ ಅಂತಾರೆ. ಆದ್ರೆ ಅಸಲಿ ಮ್ಯಾಟರ್ ಬೇರೇನೇ ಇದೆ. ದಾಸನ ಇವತ್ತಿನ ಸ್ಥಿತಿಗೆ ಪರೋಕ್ಷ ಕಾರಣವೇ ಈ ಮ್ಯಾನೇಜರ್ ಮಲ್ಲಿ..!

ಸಾರಥಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಬುಲ್ ಬುಲ್ ಹೀಗೆ ದರ್ಶನ್ ನಟನೆಯ ಸಿನಿಮಾಗಳು ಕೋಟಿ ಕೋಟಿ ಲೂಟಿ ಮಾಡ್ತಾ ಇದ್ದ ಸಮಯ ಅದು. ಆ ಸಮಯದಲ್ಲಿ ದರ್ಶನ್ ಬಳಿ ಸೇರಿಕೊಂಡ ಸಮಯ ಸಾಧಕನೇ ಈ ಮಲ್ಲಿಕಾರ್ಜುನ್ ಸಂಕನಗೌಡರ್.

ಮೊದಲ ಸಲ ಅನ್ನೋ ಸಿನಿಮಾ ನಿರ್ಮಿಸಿದ್ದ ಮಲ್ಲಿಕಾರ್ಜುನ್, ದರ್ಶನ್ ಜೊತೆ ಆಪ್ತನಾಗಿ ಅವರ ಮ್ಯಾನೇಜರ್ ಆಗಿ ಸೇರಿದ್ದ. ಈತನನ್ನ ನಂಬಿ ತಮ್ಮ ನಿರ್ಮಾಣ ಸಂಸ್ಥೆ ಮತ್ತು ವಿತರಣಾ ಸಂಸ್ಥೆಯ ಜವಾಬ್ದಾರಿಗಳನ್ನ ಬಿಟ್ಟುಕೊಟ್ಟಿದ್ರು ದರ್ಶನ್.

ದರ್ಶನ್ ಜೊತೆಗೆ ಆವತ್ತು ಆಪ್ತರಾಗಿದ್ದ ಅನೇಕರು ಅವರ ನಿರ್ಮಾಣ ಸಂಸ್ಥೆ ಮತ್ತು ವಿತರಣಾ ಸಂಸ್ಥೆ ಜೊತೆಗೆ ಹಣಕಾಸಿವ ವ್ಯವಹಾರ ಹೊಂದಿದ್ರು. ಆದ್ರೆ ಈ ವಂಚಕ ಮಲ್ಲಿ ಆ ಹಣವನ್ನ ಲಪಟಾಯಿಸಿ ಓಡಿಹೋಗಿಬಿಟ್ಟ.

ಈತ ಮಾಡಿದ ಎಡವಟ್ಟಿನಿಂದ ದರ್ಶನ್ ಜೊತೆಗಿದ್ದ ಅನೇಕ ಸ್ನೇಹಿತರು ದೂರವಾಗಿಬಿಟ್ರು. ಮ್ಯಾನೇಜರ್ ಮಾಡಿದ ಮೋಸದಿಂದ ದರ್ಶನ್ ಜೊತೆಗಿದ್ದ ಅನೇಕ ಅಸಲಿ ಮಿತ್ರರು ದೂರವಾಗುವಂತೆ ಮಾಡಿತು. ಅಲ್ಲಿಂದ ಮುಂದೆ ದರ್ಶನ್ ಗೆಳೆಯರ ಬಳಗ ಬದಲಾಯ್ತು.

ಈ ಸ್ನೇಹಿತರ ಬಳಗ ಬದಲಾದ ಮೇಲೆಯೇ ದರ್ಶನ್ ಒಂದರ ಹಿಂದೆ ಒಂದು ಎಡವಟ್ಟು ಮಾಡಿಕೊಳ್ಳೋದಕ್ಕೆ ಶುರುವಾಗಿದ್ದು. ದರ್ಶನ್ ಜೊತೆಗೆ ಸೇರಿಕೊಂಡ ದುಷ್ಟ ಸ್ನೇಹಿತರ ಪಡೆ ಅವರನ್ನ ಎಚ್ಚರಿಸದೇ ಮತ್ತಷ್ಟು ಕುಕೃತ್ಯ ಮಾಡೋದಕ್ಕೆ ಪ್ರೇರಿಪಿಸ್ತಾನೆ ಹೋಯ್ತು.

ಒಟ್ನಲ್ಲಿ ಮ್ಯಾನೇಜರ್ ಮಲ್ಲಿ ಮಾಡಿದ ಎಡವಟ್ಟಿನಿಂದ ದರ್ಶನ್ ಬದುಕೇ ಬದಲಾಗಿಬಿಟ್ತು. ಅಂತೆಯೇ ಖುದ್ದು ದಿನಕರ್, ಈತನಿಂದ ನಮ್ಮ ಕುಟುಂಬದಲ್ಲಿ ಎಷ್ಟೆಲ್ಲಾ ಎಡವಟ್ಟು ಆಯ್ತು ಅನ್ನೋದು ಯಾರಿಗೂ ಗೊತ್ತಿಲ್ಲ ಅಂತ ಹೇಳಿದ್ದಾರೆ. ಇವತ್ತು ದರ್ಶನ್ ಜೈಲಿನಲ್ಲಿ ಕೊಳೀತಾ ಇರೋದಕ್ಕೆ ಈ ಮ್ಯಾನೇಜರ್ ಮಲ್ಲಿ ಕೂಡ ಕಾರಣ..!

https://www.newsics.com/2026/04/24/there-is-no-restriction-on-women-going-to-mosques-to-offer-namaz-aimplb-clarifies-to-supreme-court/

TAGGED:Not Pavithra Gowda.. not Renukaswamy..! This is the indirect reason why actor Darshan went to jail.
Share This Article
Facebook Twitter Copy Link Print
Previous Article ಮಹಿಳೆಯರು ಮಸೀದಿಗೆ ತೆರಳಿ ನಮಾಜ್ ಮಾಡಲು ಯಾವುದೇ ನಿರ್ಬಂಧವಿಲ್ಲ : ಸುಪ್ರೀಂ ಕೋರ್ಟ್ ಗೆ AIMPLB ಸ್ಪಷ್ಟನೆ
Next Article Bengaluru Metro ಬೆಂಗಳೂರು ಟ್ರಾಫಿಕ್‌ಗೆ ಕಡಿವಾಣ ಹಾಕಲು ಖಾಸಗಿ ಕಂಪನಿ ಹೊಸ ಪ್ಲಾನ್ : ಮೆಟ್ರೋ ಬಳಸುವ ಉದ್ಯೋಗಿಗಳಿಗೆ ಸಿಗಲಿದೆ ತಿಂಗಳಿಗೆ 2,000 ರೂ!

Popular Posts

ಜಂತರ್ ಮಂತರ್ ಸುತ್ತ 1.5 ಕಿಮೀ ವ್ಯಾಪ್ತಿಯಲ್ಲಿ ಮೊಬೈಲ್ ಇಂಟರ್ನೆಟ್ ಸೇವೆ ಬಂದ್!

1 Min Read

Sexual abuse of minors ಗೋಕಾಕ್ ಕೋಚಿಂಗ್ ಸೆಂಟರ್ ಶಿಕ್ಷಕನಿಂದ ಅಪ್ರಾಪ್ತೆಯರ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿ ಬಂಧನ,

1 Min Read

Smart phones expensive ದುಬಾರಿಯಾಗಲಿವೆ ಮೊಬೈಲ್, ಲ್ಯಾಪ್‌ಟಾಪ್! ಮತ್ತೆ ಶೇ.10-15ರಷ್ಟು ಹೆಚ್ಚಳ ಸಾಧ್ಯತೆ

1 Min Read

Newborn baby killed ಹೆಣ್ಣುಮಗುವೆಂಬ ಕಾರಣಕ್ಕೆ 13 ದಿನಗಳ ಹಸುಗೂಸನ್ನು ಸಂಪ್‌ಗೆಸೆದು ಕೊಂದ ತಂದೆ!

1 Min Read

You Might Also Like

ಕರ್ನಾಟಕದೇಶಪ್ರಮುಖ

Blackmail by young woman ಹಣಕ್ಕಾಗಿ‌ ಬೆತ್ತಲಾದ ಬೆಂಗಳೂರು ಯುವತಿ! ಯುವ ಕ್ರಿಕೆಟಿಗನನ್ನೂ ನಗ್ನಗೊಳಿಸಿ ಬ್ಲ್ಯಾಕ್‌ಮೇಲ್!

2 Min Read
ವಿದೇಶಮನರಂಜನೆ

India – Zimbabwe Cricket Match ಇಂದಿನಿಂದ ಭಾರತ-ಜಿಂಬಾಬ್ವೆ ಟಿ20 ಸರಣಿ ಆರಂಭ

2 Min Read
ದೇಶಪ್ರಮುಖ

Commonwealth Games 2026 | ಕಾಮನ್‌ವೆಲ್ತ್ ಗೇಮ್ಸ್ 2026: ಭಾರತದ ಪದಕಗಳ ಭರವಸೆ ಯಾವ ಕ್ರೀಡೆಗಳಲ್ಲಿ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read
ಕರ್ನಾಟಕಪ್ರಮುಖ

Clean Bangalore Drive | ಸ್ವಚ್ಛ ಬೆಂಗಳೂರು’ ಅಭಿಯಾನ: ಕಸ ಮುಕ್ತ, ಸುಂದರ ರಾಜಧಾನಿ ನಿರ್ಮಾಣಕ್ಕೆ ಸರ್ಕಾರದ ಮಹತ್ವದ ಹೆಜ್ಜೆ

3 Min Read

Social Networks

Facebook-f Instagram Twitter
Welcome Back!

Sign in to your account

Lost your password?