Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಪ್ರಮುಖ > ಕಷ್ಟದ ದಿನಗಳನ್ನು ಮೆಲುಕು ಹಾಕಿದ ಆ್ಯಂಕರ್​ ಅನುಶ್ರೀ
ಪ್ರಮುಖಮನರಂಜನೆ

ಕಷ್ಟದ ದಿನಗಳನ್ನು ಮೆಲುಕು ಹಾಕಿದ ಆ್ಯಂಕರ್​ ಅನುಶ್ರೀ

Share
1 Min Read
SHARE

ಖ್ಯಾತ ನಿರೂಪಕಿ ಅನುಶ್ರೀ ತಮ್ಮ 20 ವರ್ಷಗಳ ವೃತ್ತಿ ಜೀವನದ ಆರಂಭದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ದಕ್ಷಿಣ ಕನ್ನಡದವರಾದ ಕಾರಣ ಸರಿಯಾಗಿ ಕನ್ನಡ ಮಾತನಾಡಲು ಬಾರದೆ, ‘ಹಾರ್ದಿಕ’ ಪದ ಉಚ್ಚರಿಸಲಾಗದೆ ಅವಮಾನ ಅನುಭವಿಸಿ, ಆರ್ಥಿಕ ಸಂಕಷ್ಟದಲ್ಲಿದ್ದ ದಿನಗಳನ್ನು ಮೆಲುಕು ಹಾಕಿದ್ದಾರೆ.

ನಾನು ಬೆಂಗಳೂರಿಗೆ ಬಂದಾಗಿತ್ತು. ಒಂದಷ್ಟು ಕಡೆ ಆಫರ್​ ಸಿಕ್ಕಿದ್ದವು. ಅಲ್ಲಿ ತುಳು ಮಾತನಾಡುವ ಕಾರಣ ಕನ್ನಡ ಸರಿಯಾಗಿ ಬರುತ್ತಿರಲಿಲ್ಲ. ಒಂದು ಚಾನೆಲ್​ನಲ್ಲಿ ಆಫರ್​ ಕೊಟ್ಟರು. ಆದರೆ ಹಾರ್ದಿಕ ಸ್ವಾಗತ ಹೇಳಲು ಬರದೇ ಒದ್ದಾಡಿಬಿಟ್ಟೆ. ಎಷ್ಟು ಟೇಕ್​ ತೆಗೆದುಕೊಂಡರೂ ದಿ ಬದಲು ತಿ ಆಗಿ ಅಪಾರ್ಥ ಆಗುತ್ತಿತ್ತು. ನೋಡುವಷ್ಟು ನೋಡಿ ಮುಖ್ಯಸ್ಥರು ನನ್ನನ್ನುಮನೆಗೆ ಕಳುಹಿಸಿಬಿಟ್ಟರು ಎಂದು ನೆನಪಿಸಿಕೊಂಡಿದ್ದಾರೆ ಅನುಶ್ರೀ.

ಕೈಯಲ್ಲಿ ಕಾಸಿರಲಿಲ್ಲ. ಪಿಜಿಯಲ್ಲಿ ಇದ್ದೆ. ಅದರ ಬಾಡಿಗೆಗೂ ದುಡ್ಡು ಇರಲಿಲ್ಲ. ಮೂರು ತಿಂಗಳು ದುಡ್ಡೇ ಕೊಡಲಿಲ್ಲ. ಮುಂದಿನ ತಿಂಗಳು ಕೊಡದೇ ಹೋದರೆ ಬಿಟ್ಟುಹೋಗುವಂತೆ ಹೇಳಿದಾಗಲೇ ನನ್ನ ಬುಡಕ್ಕೆ ಬಂದಿದ್ದು ಎಂದು ನೋವಿನ ದಿನಗಳ ಬಗ್ಗೆ ನಟಿ ಹೇಳಿಕೊಂಡಿದ್ದಾರೆ.

ಹಸಿವು ಏನು ಬೇಕಾದರೂ ಕಲಿಸುತ್ತದೆ ಎನ್ನುವುದಕ್ಕೆ ನಾನೇ ಸಾಕ್ಷಿ. ಕನ್ನಡವನ್ನು ಕಲಿಯಲೇಬೇಕು. ನಿರೂಪಣಾ ಕ್ಷೇತ್ರದಲ್ಲಿ ಛಾಪು ಮೂಡಿಸಲೇಬೇಕು ಎಂದು ಪಣ ತೊಟ್ಟೆ. ಅಲ್ಲಿ ಇದ್ದವರ ಬಳಿಯೆಲ್ಲಾ ಕನ್ನಡ ಮಾತನಾಡಿದೆ. ಅಂಗಡಿಯವರು, ತರಕಾರಿಯವರು ಹೀಗೆ ಎಲ್ಲರ ಬಳಿಯೂ ಕನ್ನಡ ಮಾತನಾಡಿ ಕಷ್ಟಪಟ್ಟು ಕಲಿತೆ ಎಂದಿದ್ದಾರೆ.

ಕೊನೆಗೆ, ಅದ್ಯಾವ ಪರಿಯಲ್ಲಿ ಬದಲಾಗಿ ಬಿಟ್ಟೆ ಎಂದರೆ, ನನ್ನ ಮಾತು ಕೇಳಿ ಅವರೇ ಆಶ್ವರ್ಯಗೊಂಡರು. ಆಗ ಎರ್ರಾಬಿರ್ರಿ ಮಾತನಾಡುತ್ತಿದ್ದುದು ನಾನೇನಾ ಎನ್ನುವಷ್ಟರಮಟ್ಟಿಗೆ ಬದಲಾಗಿ ಬಿಟ್ಟೆ. ಆ್ಯಂಕರಿಂಗ್​ ನನಗೆ ಒಲಿಯಿತು. ಅದರಲ್ಲಿಯೇ ಮುಂದೆ ಬಂದೆ ಎಂದು ನೆನಪಿಸಿಕೊಂಡಿದ್ದಾರೆ ಆ್ಯಂಕರ್​ ಅನುಶ್ರೀ.

TAGGED:Anchor Anushree reminisces about difficult days
Share This Article
Facebook Twitter Copy Link Print
Previous Article 3 ತಿಂಗಳ ಮಗುವನ್ನು ಒತ್ತೆಯಾಳಾಗಿರಿಸಿಕೊಂಡ ಮಂಗ; ವೈರಲ್ ವಿಡಿಯೋ ನೋಡಿ
Next Article ಮೋದಿ ನೀಡಿದ 10 ರೂ. ನೋಟಿಗೆ ಭಾರಿ ಡಿಮ್ಯಾಂಡ್

Popular Posts

Pub catches fire ಪಬ್‌ನಲ್ಲಿ ಭಾರೀ ಬೆಂಕಿ: ಇಬ್ಬರು ಸಜೀವ ದಹನ, 7‌ ಮಂದಿ ಸ್ಥಿತಿ ಗಂಭೀರ

1 Min Read

Letter to RSS ಆರೆಸ್ಸೆಸ್‌ಗೆ ಪತ್ರ ಬರೆದ ಗೃಹಸಚಿವ ಪ್ರಿಯಾಂಕ್ ಖರ್ಗೆ! ಮೋಹನ್ ಭಾಗ್ವತ್‌ಗೆ ಕೇಳಿದ ಪ್ರಶ್ನೆಗಳೇನು?

4 Min Read

Smriti Mandhana ಬೆಂಗಳೂರಲ್ಲಿ ಸ್ಮೃತಿ ಮಂಧಾನಗೆ ಬಾಡಿ ಶೇಮಿಂಗ್! ಸ್ಟಾರ್ ಬ್ಯಾಟರ್ ಹೇಳಿದ್ದೇನು?

1 Min Read

Grihajyoti restart ಗೃಹಜ್ಯೋತಿ ಪರಿಷ್ಕರಣೆಯೂ ಆರಂಭ! ಇನ್ಮುಂದೆ ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್

3 Min Read

You Might Also Like

ಕರ್ನಾಟಕದೇಶಪ್ರಮುಖಮನರಂಜನೆ

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read
ಕರ್ನಾಟಕದೇಶಪ್ರಮುಖಮನರಂಜನೆ

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read
ಕರ್ನಾಟಕಪ್ರಮುಖಮನರಂಜನೆ

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read
ಕರ್ನಾಟಕದೇಶಪ್ರಮುಖಮನರಂಜನೆ

Rashmika-Vijay ಕೊಟ್ಟ ಮಾತು ಉಳಿಸಿಕೊಂಡ ರಶ್ಮಿಕಾ-ವಿಜಯ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?