newsics.com
ಬೆಂಗಳೂರು : ಬಡ ಹಾಗೂ ಸಾಮಾನ್ಯ ವರ್ಗದ ಜನರು ಹೆಚ್ಚಾಗಿ ಸೇವಿಸುವ ಮದ್ಯದ ದರವನ್ನು ಗಣನೀಯವಾಗಿ ಹೆಚ್ಚಿಸಲು ಸರ್ಕಾರ ಮುಂದಾಗಿದೆ.
ಮುಂದಿನ ವಾರದಿಂದಲೇ ಹೊಸ ದರಗಳು ಜಾರಿಗೆ ಬರುವ ಸಾಧ್ಯತೆಯಿದ್ದು, ಈ ಕುರಿತು ಸರ್ಕಾರ ಈಗಾಗಲೇ ಕರಡು ಅಧಿಸೂಚನೆಯನ್ನು ಪ್ರಕಟಿಸಿದೆ.
ಕಳೆದ ಬಜೆಟ್ನಲ್ಲಿ ಘೋಷಿಸಿದಂತೆ ರಾಜ್ಯದ ಆದಾಯವನ್ನು ಹೆಚ್ಚಿಸುವ ಉದ್ದೇಶದಿಂದ ಸರ್ಕಾರ ಮದ್ಯದ ಮೇಲೆ ಹೊಸ ತೆರಿಗೆ ವ್ಯವಸ್ಥೆಯನ್ನು ಜಾರಿಗೊಳಿಸುತ್ತಿದೆ. ಈ ಹೊಸ ವ್ಯವಸ್ಥೆಯನ್ವಯ, ಮದ್ಯದಲ್ಲಿರುವ ಆಲ್ಕೊಹಾಲ್ ಪ್ರಮಾಣವನ್ನು ಆಧರಿಸಿ ತೆರಿಗೆ ವಿಧಿಸಲಾಗುತ್ತದೆ. ಇದರಿಂದಾಗಿ ಜನ ಸಾಮಾನ್ಯರು ಹೆಚ್ಚಾಗಿ ಬಳಸುವ ‘ಎಕಾನಮಿ’ ಬ್ರ್ಯಾಂಡ್ಗಳ ಬೆಲೆ ಏರಿಕೆಯಾಗುವುದು ಖಚಿತವಾಗಿದೆ.
ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ಬ್ರ್ಯಾಂಡ್ಗಳ ಬೆಲೆಯಲ್ಲಿ ಸುಮಾರು 10 ರಿಂದ 25 ರೂಪಾಯಿಗಳಷ್ಟು ಏರಿಕೆಯಾಗುವ ನಿರೀಕ್ಷೆಯಿದೆ. ಒರಿಜಿನಲ್ ಚಾಯ್ಸ್ನ 180 ಎಂಎಲ್ಗೆ ಪ್ರಸ್ತುತ 95 ರೂಪಾಯಿ ದರವಿದ್ದು, ಹೊಸ ದರ ಅಂದಾಜು 115 ರೂಪಾಯಿ ಆಗಲಿದೆ. ಅದೇ ರೀತಿಯಲ್ಲಿ, ಒಟಿ (ಓಲ್ಡ್ ಟ್ಯಾವರಿನ್) 180 ಎಂಎಲ್ಗೆ ಪ್ರಸ್ತುತ 80 ರೂಪಾಯಿ ದರ ಇದ್ದು, ಹೊಸ ದರ 100 ರೂಪಾಯಿ ಆಗಲಿದೆ. ಇನ್ನು ಬಡ ಜನರಲ್ಲಿ ಜನಪ್ರಿಯವಾಗಿರುವ ರಾಜಾ ವಿಸ್ಕಿಯ 180 ಎಂಎಲ್ನ ಹೊಸ ಬೆಲೆ 95 ರೂಪಾಯಿ ಆಗಲಿದೆ. ಪ್ರಸ್ತುತ ಇದಕ್ಕೆ 70 ರೂಪಾಯಿ ಬೆಲೆ ಇದೆ. ಇನ್ನು ಹಯ್ವಾರ್ಡ್ಸ್ಗೆ 100 ರೂಪಾಯಿ ಬೆಲೆ ಇದ್ದು,ಹೊಸ ದರ 120 ರೂಪಾಯಿ ಆಗಲಿದೆ.