newsics.com
ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ವಿಮಾನ ದುರಂತವೊಂದು ತಪ್ಪಿದೆ. ಲ್ಯಾಂಡಿಂಗ್ ವೇಳೆ ವಿಮಾನ ಏಕಾಏಕಿ ಕಂಟ್ರೋಲ್ ತಪ್ಪಿದೆ.
ಹುಬ್ಬಳ್ಳಿಯಲ್ಲಿ ಹವಾಮಾನ ವೈಪರೀತ್ಯದಿಂದ ಲ್ಯಾಂಡಿಂಗ್ ಮಾಡಲಾಗದೆ ನಿರಂತರ ನಾಲ್ಕು ಗಂಟೆ ಕಾಲ ಆಗಸದಲ್ಲೇ ವಿಮಾನ ಹಾರಾಡಿದೆ. 40 ಹೆಚ್ಚು ಪ್ರಯಾಣಿಕರು ಘೋರ ದುರಂತದಿಂದ ಪಾರಾಗಿದ್ದಾರೆ. ಅಂಗೈಯಲ್ಲಿ ಜೀವ ಹಿಡಿದು ಕುಳಿತುಕೊಂಡಿದ್ದಾರೆ. ಲ್ಯಾಂಡಿಂಗ್ ವೇಳೆ ಏಕಾಏಕಿ ವಿಮಾನ ಕಂಟ್ರೋಲ್ ತಪ್ಪಿದ್ದು, ವಿಮಾನದೊಳಗೆ ಪ್ರಯಾಣಿಕರು ಜೀವ ಭಯದಿಂದ ತತ್ತರಿಸಿ ಹೋಗಿದ್ದು ಕೂಗಾಟ ಚೀರಾಟ ನಡೆಸಿದ್ದಾರೆ. ಕಂಟ್ರೋಲ್ ತಪ್ಪಿದೆ.
ಫ್ಲೈ 91 ಏರ್ಲೈನ್ಸ್ ವಿಮಾನ ಹೈದರಾಬಾದ್ ನಿಂದ ಹುಬ್ಬಳ್ಳಿಗೆ ಬರುತ್ತಿತ್ತು. ಹುಬ್ಬಳ್ಳಿಯಲ್ಲಿ ಲ್ಯಾಂಡಿಂಗ್ ವೇಳೆ ಏಕಾಏಕಿ ಕಂಟ್ರೋಲ್ ತಪ್ಪಿದೆ. 4.30ಕ್ಕೆ ಹುಬ್ಬಳ್ಳಿಯಲ್ಲಿ ಲ್ಯಾಂಡಿಂಗ್ ಆಗಬೇಕಿತ್ತು. ಹುಬ್ಬಳ್ಳಿಯಲ್ಲಿ ಲ್ಯಾಂಡ್ ಆಗಬೇಕಿದ್ದ ವಿಮಾನ ಶಿವಮೊಗ್ಗ, ಹಳಿಯಾಳ, ಹಾವೇರಿ ದಾವಣಗೆರೆ ಭಾಗದಲ್ಲಿ 4 ಗಂಟೆ ಸುತ್ತಾಟ ನಡೆಸಿದೆ. 4 ಗಂಟೆ ಹಾರಾಟ ನಡೆಸಿ ಬೆಂಗಳೂರಿನಲ್ಲಿ ಸೇಫಾಗಿ ಲ್ಯಾಂಡ್ ಮಾಡಲಾಗಿದೆ. ತಾಂತ್ರಿಕ ದೋಷದಿಂದ ಹೀಗಾಗಿದೆ ಎನ್ನಲಾಗಿದೆ.