Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > 40ರ ಆಂಟಿ ಪ್ರೇಮದಲ್ಲಿ ಬಿದ್ದು ಮನೆಬಿಟ್ಟು ಓಡಿ ಹೋದ 21ರ ಹರೆಯದ ಹುಡುಗ
ಪ್ರಮುಖಕರ್ನಾಟಕದೇಶ

40ರ ಆಂಟಿ ಪ್ರೇಮದಲ್ಲಿ ಬಿದ್ದು ಮನೆಬಿಟ್ಟು ಓಡಿ ಹೋದ 21ರ ಹರೆಯದ ಹುಡುಗ

Share
2 Min Read
SHARE

ಇತ್ತೀಚಿನ ದಿನಗಳಲ್ಲಿ ಇದು ಸಂಪೂರ್ಣ ಉಲ್ಟಾ ಆಗುತ್ತಿದೆ. ಹದಿಹರೆಯದ ಹುಡುಗರು ತಮ್ಮಗಿಂತ 10 ರಿಂದ 15 ವರ್ಷ ಹಿರಿಯರಾದ ವಿವಾಹಿತರ ಹಿಂದೆ ಬೀಳುತ್ತಿದ್ದು, ಇದರಿಂದ ಅವರ ಕುಟುಂಬಗಳು ಕಂಗಾಲಾಗುತ್ತಿವೆ. ಇದರಿಂದ ಸಾಮಾಜಿಕವಾಗಿ ಎದುರಾಗುವ ಅವಮಾನ ಟೀಕೆಗಳಿಂದಾಗಿ ಕುಟುಂಬಗಳು ಸಂಕಷ್ಟಕ್ಕೊಳಗಾಗಿವೆ. ಸಾಮಾಜಿಕ ಜಾಲತಾಣಗಳು ಈ ಹುಚ್ಚು ಪ್ರೀತಿಗೆ ನೀರೆರೆದು ಪೋಷಿಸುತ್ತಿವೆ.

ದಿನಗಳ ಹಿಂದಷ್ಟೇ ಮೂರು ಮಕ್ಕಳ ತಾಯಿ, ವಿವಾಹಿತ ಮಹಿಳೆಯೊಬ್ಬಳ ಪ್ರೀತಿಯಲ್ಲಿ ಬಿದ್ದ 25 ವರ್ಷದ ಹುಡುಗನನ್ನು ಆಕೆಯ ಮನೆಯವರು ಮರಕ್ಕೆ ಕಟ್ಟಿ ಹೊಡೆದು ಸಾಯಿಸಿದ ಘಟನೆಯೊಂದು ಪಂಜಾಬ್‌ನಲ್ಲಿ ನಡೆದಿತ್ತು. ಈ ಘಟನೆ ಮಾಸುವ ಮೊದಲೇ ಉತ್ತರಪ್ರದೇಶದ ಅಮ್ರೋಹಾದಲ್ಲಿ ಇದೇ ರೀತಿಯ ಘಟನೆಯೊಂದು ಬೆಳಕಿಗೆ ಬಂದಿದೆ. ಮೊದಲೆಲ್ಲಾ ಹೆಣ್ಣು ಮಕ್ಕಳು ಪ್ರೀತಿಸಿ ಮನೆಬಿಟ್ಟು ಓಡಿ ಹೋಗುತ್ತಿದ್ದರು. ಆದರೆ ಈ ಪ್ರಕರಣದಲ್ಲಿ 21 ವರ್ಷದ ಹುಡುಗನೋರ್ವ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕ ಪ್ರೀತಿಯನ್ನು ಹಿಂಬಾಲಿಸಿ ಮನೆ ಬಿಟ್ಟು ಓಡಿ ಹೋಗಿದ್ದಾನೆ.

ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕ 40 ವರ್ಷದ ಮಹಿಳೆ
ಇದು ವಿಚಿತ್ರ ಎನಿಸಿದರು ಸತ್ಯ. ಸಾಮಾಜಿಕ ಜಾಲತಾಣದಲ್ಲಿ 40ರ ಹರೆಯದ ವಿಧವೆ ಮಹಿಳೆಯ ಪ್ರೇಮ ಜಾಲಕ್ಕೆಬಿದ್ದ 21ರ ಹರೆಯದ ಹುಡುಗನೋರ್ವ ಮನೆಬಿಟ್ಟು ಓಡಿ ಹೋಗಿದ್ದು, ಇದರಿಂದ ಆತನ ಕುಟುಂಬ ಕಂಗಾಲಾಗಿದೆ. ಮಗ ನಾಪತ್ತೆಯಾದ ದಿನದಿಂದ ಆತನಿಗಾಗಿ ಹುಡುಕಾಟ ನಡೆಸಿದ ಆತನ ಕುಟುಂಬ ಕಡೆಗೆ ಬಂದು ತಲುಪಿದ್ದು, ಆಗ್ರಾದ 40 ವರ್ಷದ ಮಹಿಳೆಯ ಮನೆಗೆ.

21ರ ಹರೆಯದ ಅಮ್ರೋಹಾದ ಯುವಕನಿಗೆ ಸೋಶಿಯಲ್ ಮೀಡಿಯಾದಲ್ಲಿ ಆಗ್ರಾದ ನಿವಾಸಿಯಾಗಿದ್ದ 40 ವರ್ಷದ ಮಹಿಳೆಯ ಪರಿಚಯವಾಗಿದ್ದು, ಪರಿಚಯ ಸ್ವಲ್ಪ ಸಮಯದಲ್ಲೇ ಗಾಢವಾದ ಪ್ರೇಮಕ್ಕೆ ತಿರುಗಿದ್ದು, ಬಿಟ್ಟಿರಲಾರದ ಬಂಧವಾಗಿ ಬದಲಾಗಿದೆ. ಮಹಿಳೆಯ ಜೊತೆಗಿನ ಪ್ರೇಮ ಸಂಬಂಧದಲ್ಲಿ ಭಾವನಾತ್ಮಕವಾಗಿ ತೀವ್ರವಾಗಿ ತೊಡಗಿಸಿಕೊಂಡಿದ್ದ ಪರಿಣಾಮ 21ರ ಹರೆಯದ ತರುಣ ಮನೆಯಲ್ಲಿ ಪೋಷಕರಿಗೂ ಹೇಳದೇ ಮನೆಬಿಟ್ಟು ಓಡಿ ಬಂದಿದ್ದು, ಮಹಿಳೆಯ ಜೊತೆ ವಾಸ ಮಾಡುವುದಕ್ಕೆ ಶುರು ಮಾಡಿದ್ದಾನೆ.

ಆದರೆ ಮನೆಯಿಂದ ಮಗ ಹಠಾತ್ ನಾಪತ್ತೆಯಾಗಿದ್ದರಿಂದ ಆತಂಕಗೊಂಡ ಆತನ ತಾಯಿ ಪೊಲೀಸರಿಗೆ ದೂರು ನೀಡಿ ಮಗನಿಗಾಗಿ ಹುಡುಕಾಟ ನಡೆಸಿದಾಗ ಆತ ಅಂತಿಮವಾಗಿ ಆಗ್ರಾದಲ್ಲಿ 40ರ ಹರೆಯದ ಮಹಿಳೆಯ ಜೊತೆ ಪತ್ತೆಯಾಗಿದ್ದಾನೆ. ಯುವಕನ ತಾಯಿ ಮಗನನ್ನು ಪ್ರೇಮಜಾಲದಲ್ಲಿ ಬೀಳಿಸಿದ ಮಹಿಳೆಯ ಮನೆ ತಲುಪಿದಾಗ ಅಲ್ಲಿ ದೊಡ್ಡ ಗಲಾಟೆ ನಡೆದಿದೆ. ಇದು ಎರಡು ಕುಟುಂಬಗಳನ್ನು ತೀವ್ರ ಆಘಾತಕ್ಕೀಡು ಮಾಡಿದೆ.

ವರದಿಗಳ ಪ್ರಕಾರ ಅವರಿಬ್ಬರು ದೇಗುಲವೊಂದರಲ್ಲಿ ಯಾರಿಗೂ ಹೇಳದೇ ಯಾರ ಒಪ್ಪಿಗೆಯನ್ನು ಪಡೆಯದೇ ಮದುವೆಯಾಗಿದ್ದಾರೆ ಎನ್ನಲಾಗಿದೆ. ಯುವಕನ ಪಾಲಿಗೆ ಇದು ಪ್ರೇಮವಾದರೆ ಆತನ ಪೋಷಕರ ಪಾಲಿಗೆ ಇದು ನುಂಗಲಾರದ ತುತ್ತಾಗಿದೆ. ಅವರು ಮಗನ ಈ ಸಂಬಂಧವನ್ನು ಒಪ್ಪಿಕೊಳ್ಳಲಾಗದೇ ಚಡಪಡಿಸುತ್ತಿದ್ದಾರೆ.

ಇತ್ತ ಯುವಕನಿಗೆ ಇದು ನಿಜವಾದ ಪ್ರೀತಿಯೇ ಅಥವಾ ತಾತ್ಕಾಲಿಕ ಆಕರ್ಷಣೆಯೋ ತಿಳಿಯದಾಗಿದೆ. ಅವರ ನಡುವಿನ 19 ವರ್ಷದ ವಯಸ್ಸಿನ ಅಂತರ ಹಾಗೂ ಅವರ ರಹಸ್ಯ ಮದುವೆ ಕುಟುಂಬವನ್ನು ಆಘಾತಕ್ಕೆ ದೂಡಿದೆ. ಆನ್‌ಲೈನ್ ಚಾಟಿಂಗ್ ಹಾಗೂ ಪ್ರೀತಿಗೂ ವಾಸ್ತವ ಬದುಕಿಗೂ ಅಜಗಜಾಂತರ ವ್ಯತ್ಯಾಸವಿದ್ದು, ಆನ್‌ಲೈನ್‌ನಲ್ಲಿ ಸಿಕ್ಕವಳಿಗಾಗಿ ಕುಟುಂಬ ತೊರೆದ ಯುವಕನ ಈ ಸ್ಟೋರಿ ಈಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

TAGGED:A 21-year-old boy ran away from home after falling in love with a 40-year-old aunt.
Share This Article
Facebook Twitter Copy Link Print
Previous Article ಮಗು ಬೇಕಂದ್ರೆ ನಿನ್ನ ಹೆಂಡ್ತಿನ ನನ್ನ ಜತೆ ಕಳ್ಸು ಎಂದ ಟಿಸಿಎಸ್ ಬಾಸ್: ಐಟಿ ಉದ್ಯೋಗಿ ಹೇಳಿದ್ದೇನು?
Next Article ನಟ ದಳಪತಿ ವಿಜಯ್ ವಿರುದ್ಧ ಬೀದಿಗಿಳಿದು ಪ್ರತಿಭಟಿಸಿದ ನಟಿ! ಯಾಕೆ ಹೀಗೆ? ವಿಡಿಯೋ ನೋಡಿ

Popular Posts

Flood ಮೇಘಸ್ಫೋಟಕ್ಕೆ ಭೀಕರ ಪ್ರವಾಹ; ಒಂದೇ ದಿನ 21 ಬಲಿ, ಸಂಕಷ್ಟದಲ್ಲಿ 5.64 ಲಕ್ಷ ಜನ

2 Min Read

BP Harish ಬಿಜೆಪಿ ಶಾಸಕ ಬಿ.ಪಿ. ಹರೀಶ್‌ ಮೇಲೆ ಕಾಂಗ್ರೆಸ್‌ ಕಾರ್ಯಕರ್ತರಿಂದ ಮೊಟ್ಟೆ ಏಟು

1 Min Read

NHAI Local Pass ಇನ್ಮುಂದೆ ಕಚೇರಿಗೆ ಅಲೆಯಬೇಕಿಲ್ಲ; ಮೊಬೈಲ್‌ನಲ್ಲೇ ಸಿಗಲಿದೆ NHAI ಡಿಜಿಟಲ್ ಲೋಕಲ್ ಟೋಲ್ ಪಾಸ್

3 Min Read

Jammu Kashmir ಭೀಕರ ಉಗ್ರರ ದಾಳಿ; ಕರ್ತವ್ಯದಲ್ಲಿದ್ದ ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಹುತಾತ್ಮ

1 Min Read

You Might Also Like

ಪ್ರಮುಖಕರ್ನಾಟಕಮನರಂಜನೆ

Jana Nayagan ‘ಜನ ನಾಯಗನ್’ ಪ್ರೀಮಿಯರ್ ಶೋಗೆ ಬೆಂಗಳೂರಲ್ಲಿ1000, ಹೊಸೂರಿನಲ್ಲಿ180

1 Min Read
ಕರ್ನಾಟಕಪ್ರಮುಖ

Karnataka Drought Issue | ಎಲ್ ನಿನೋ ಎಚ್ಚರಿಕೆ: ಕರ್ನಾಟಕದಲ್ಲಿ ಮತ್ತೆ ಬರದ ಭೀತಿ? ರೈತರಿಗೆ ತಜ್ಞರ ಮಹತ್ವದ ಸಲಹೆ

2 Min Read
Crimeಕರ್ನಾಟಕ

Shivajinagara Footpath Issue | ಶಿವಾಜಿನಗರ ಒತ್ತುವರಿ ತೆರವು ವೇಳೆ ಅಧಿಕಾರಿಗಳ ಮೇಲೆ ಹಲ್ಲೆ: ಬಂಧಿತರಿಂದ ಪೊಲೀಸರ ಮುಂದೆ ಕ್ಷಮೆಯಾಚನೆ

2 Min Read
ದೇಶವೈರಲ್

Sharad Pawar Met Modi | ಶರದ್ ಪವಾರ್–ಸುಪ್ರಿಯಾ ಸುಳೆ ಪ್ರಧಾನಿ ಮೋದಿ ಭೇಟಿ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?