newsics.com
ಟಾಲಿವುಡ್‌ನಲ್ಲಿ ಟಿಲ್ಲು ಚಿತ್ರದ ಸೀಕ್ವೆಲ್ ಮೂಲಕ ಹುಡುಗರಿಗೆ ಮತ್ತೊಂದು ಮುಖವನ್ನು ತೋರಿಸಿದ ಸೌತ್ ಬ್ಯೂಟಿ ಅನುಪಮಾ ಪರಮೇಶ್ವರನ್ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದಾರೆ.

ಬ್ಲ್ಯಾಕ್ ಕಲರ್ ಬ್ಲೌಸ್ನಲ್ಲಿ ಬ್ಯಾಕ್ ಬ್ಯೂಟಿ ತೋರಿಸಿ ಪಡ್ಡೆ ಹೈಕಳ ಮನಸಿನಲ್ಲಿ ಕಚಗುಳಿ ಇಡುತ್ತಿದ್ದಾರೆ ಈ ಸುಂದರಿ. ಅವರ ಲೇಟೆಸ್ಟ್ ಸೀರೆ ಫೋಟೋಗಳಂತೂ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಫೊಟೋ ನೋಡಿದ ನೆಟ್ಟಿಗರು ಫಿದಾ ಆಗಿ ಬಿಟ್ಟಿದ್ದಾರೆ.
ನಟಿ ಆಕರ್ಷಕವಾದಂತ ಡೀಪ್ ನೆಕ್ ಬ್ರಾಕ್ ಬ್ಯಾಕ್ ಬ್ಲೌಸ್ ಧರಿಸಿಕೊಂಡು ಬಣ್ಣದ ಸೀರೆ ಉಟ್ಟಿದ್ದಾರೆ. ನಿರಾಭರಣ ಸುಂದರಿಯಾಗಿ ಮಿಂಚಿದ ಅನುಪಮಾ ಒಂದು ಸಣ್ಣ ಸ್ಟೆಡ್ ಮಾತ್ರ ಧರಿಸಿದ್ದರು. ಅಷ್ಟೇ ಅಲ್ಲದೆ ಪುಟ್ಟ ಬಿಂದಿಯನ್ನು ಹಣೆಗಿಟ್ಟಿದ್ದರು. ಸಿಂಪಲ್ ನ್ಯಾಚುರಲ್ ನ್ಯೂಡ್ ಮೇಕಪ್ ಅವರ ಸೌಂದರ್ಯವನ್ನು ಮತ್ತಷ್ಟು ಸರಳವಾಗಿ ಸುಂದರವಾಗಿ ಕಾಣುವಂತೆ ಮಾಡಿದೆ.
ಸದಾ ಹಾಟ್ ಫೋಟೋಗಳನ್ನು ಶೇರ್ ಮಾಡುವ ಈ ಮುದ್ದಾದ ಹುಡುಗಿ ಈ ಬಾರಿ ಸ್ಲೀವ್ ಲೆಸ್ ಕಪ್ಪು ಬ್ಲೌಸ್ ಧರಿಸಿ ಸೀರೆಯುಟ್ಟು ಸಂಚಲನ ಮೂಡಿಸಿದ್ದಾರೆ. ಈ ಚೆಲುವೆಯ ಫೋಟೋಗಳು ಕೇವಲ 18 ಗಂಟೆಗಳಲ್ಲಿ 10 ಲಕ್ಷ ವೀಕ್ಷಣೆಗಳನ್ನು ಪಡೆದಿವೆ. ಯುವಕರಂತೂ ಫೋಟೋ ಮೆಚ್ಚಿಕೊಂಡು ಲೈಕ್ಸ್ ಕೊಡುತ್ತಿದ್ದಾರೆ.