newsics.com
ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ತನ್ನ ಪತ್ನಿ ಪ್ರೆಸ್ಸಿಲ್ಲಾ ಚಾನ್ ಅವರ ಬೃಹತ್ ಪ್ರತಿಮೆಯೊಂದನ್ನು ಮನೆಯ ಹಿತ್ತಲಿನಲ್ಲಿ ನಿರ್ಮಾಣ ಮಾಡಿದ್ದಾರೆ.
ಸ್ವತಃ ತನ್ನದೇ ಬೃಹತ್ ಪ್ರತಿಮೆಯ ಮುಂದೆಯೇ ನಿಂತಿರುವ ಚಾನ್ ಪ್ರೆಸ್ಸಿಲ್ಲಾ ಅವರ ಫೋಟೋವನ್ನು ಫೇಸ್‌ಬುಕ್ ಸಂಸ್ಥಾಪಕ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ವೈರಲ್ ಆಗಿದೆ.

ಇದು ಪ್ರೆಸ್ಸಿಲ್ಲಾಗಿಂತಲೂ ಬಹಳ ಅಡ್ಡ ಅಗಲ ಎತ್ತರವನ್ನು ಹೊಂದಿದೆ. ಇನ್ನು ಪ್ರಸಿದ್ಧ ಕಲಾವಿದ ಡೇನಿಯಲ್ ಅರ್ಶಮ್ ಅವರಿಗೆ ಈ ಪ್ರತಿಮೆ ಮಾಡುವುದಕ್ಕೆ ಝುಕರ್‌ಬರ್ಗ್ ಮನವಿ ಮಾಡಿದ್ದರು. ಡೇನಿಯಲ್ ಅರ್ಶಮ್ ಅವರು ನ್ಯೂಯಾರ್ಕ್‌ನಲ್ಲಿ ನೆಲೆಸಿರುವ ವಾಸ್ತುಶಿಲ್ಪ, ಪ್ರತಿಮೆ ನಿರ್ಮಾಣ ಹಾಗೂ ಪ್ರದರ್ಶನ ಕಲೆಯಲ್ಲಿ ಪಳಗಿದವರಾಗಿದ್ದಾರೆ.
ನೀವು ನನ್ನ ಪತ್ನಿಯ ಪ್ರತಿಮೆಯನ್ನು ನಿರ್ಮಾಣ ಮಾಡುವ ಮೂಲಕ ರೋಮನ್ ಸಂಪ್ರದಾಯವನ್ನು ಮತ್ತೆ ತಂದಿದ್ದೀರಿ, ಇದಕ್ಕಾಗಿ ನಿಮಗೆ ಧನ್ಯವಾದಗಳು ಡೇನಿಯಲ್ ಅರ್ಶಮ್ ಎಂದು ಮಾರ್ಕ್ ಜುಕರ್‌ಬರ್ಗ್ ಇನ್ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದು, ಜೊತೆಗೆ ಈ ಹೊಸ ಪ್ರತಿಮೆಯ ಮುಂದೆ ಪತ್ನಿ ಪ್ರೆಸ್ಸಿಲ್ಲಾ ನಿಂತಿರುವ ಫೋಟೋವನ್ನು ಶೇರ್ ಮಾಡಿದ್ದಾರೆ