Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > 2nd PUC result ಪ್ರಕಟ: ರಾಜ್ಯಕ್ಕೆ ಉಡುಪಿ ಪ್ರಥಮ; ಕೊನೆಯ ಸ್ಥಾನ ಯಾವ ಜಿಲ್ಲೆಗೆ?
ಕರ್ನಾಟಕ

2nd PUC result ಪ್ರಕಟ: ರಾಜ್ಯಕ್ಕೆ ಉಡುಪಿ ಪ್ರಥಮ; ಕೊನೆಯ ಸ್ಥಾನ ಯಾವ ಜಿಲ್ಲೆಗೆ?

Share
2 Min Read
SHARE

ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶದಲ್ಲಿ ದಾಖಲೆ ಮಟ್ಟದಲ್ಲಿ ಏರಿಕೆ ಕಂಡಿದ್ದು, ಕಳೆದ ವರ್ಷಕ್ಕಿಂತ ಶೇ. 12 ರಷ್ಟು ಹೆಚ್ಚು ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಇದು ಐತಿಹಾಸಿಕ ದಿನ ಸಚಿವರು ಹರ್ಷ ವ್ಯಕ್ತಪಡಿಸಿದರು.

ಈ ವರ್ಷ ಶೇ.86ರಷ್ಟು ಮಕ್ಕಳು ಉತ್ತೀರ್ಣರಾಗಿದ್ದಾರೆ. ಅಂದರೆ 7,10,363 ವಿದ್ಯಾರ್ಥಿಗಳ ಪೈಕಿ 6.10 ಲಕ್ಷ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಕಳೆದ ವರ್ಷ ಶೇ.73.45ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರು. ಇದರೊಂದಿಗೆ ಈ ಬಾರಿ ಪಿಯುಸಿ ಫಲಿತಾಂಶದಲ್ಲಿ ಭಾರೀ ಸುಧಾರಣೆ ಕಂಡು ಬಂದಿದೆ.

ಈ ಸಲವೂ ಬಾಲಕಿಯರೇ ಮೇಲುಗೈ ಸಾಧಿಸಿದ್ದು, ಶೇಕಡಾ 88.70 ರಷ್ಟು ಬಾಲಕಿಯರು ಉತ್ತೀರ್ಣರಾಗಿದ್ದಾರೆ. ಶೇಕಡಾ 83.65ರಷ್ಟು ಬಾಲಕರು ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಮಧು ಬಂಗಾರಪ್ಪ ಅವರು ಮಾಹಿತಿ ನೀಡಿದರು.

9 ವಿದ್ಯಾರ್ಥಿಗಳಿಗೆ 590ಕ್ಕಿಂತ ಅಧಿಕ ಅಂಕ

ವಾಣಿಜ್ಯ ವಿಭಾಗದಲ್ಲಿ 9 ವಿದ್ಯಾರ್ಥಿಗಳು 590ಕ್ಕಿಂತ ಅಧಿಕ ಅಂಕ ಗಳಿಸಿದ್ದಾರೆ. ಒಂದೇ ಕಾಲೇಜಿನ 9 ವಿದ್ಯಾರ್ಥಿಗಳು ವಾಣಿಜ್ಯ ವಿಭಾಗದಲ್ಲಿ ಈ ಸಾಧನೆ ಮಾಡಿದ್ದಾರೆ.

ಬೆಂಗಳೂರಿನ ರಾಜಾಜಿನಗರದ ASC ಕಾಲೇಜಿನ 9 ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ.

ಉಡುಪಿಗೆ ಮೊದಲ ಸ್ಥಾನ

ಈ ಬಾರಿಯ ಪಿಯುಸಿ ಫಲಿತಾಂಶದಲ್ಲಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳು ಪ್ರಥಮ ಸ್ಥಾನ ಪಡೆದಿವೆ. ಈ ಬಾರಿಯೂ ಈ ಎರಡು ಜಿಲ್ಲೆಗಳು ಅತ್ಯಧಿಕ ಪಾಸ್ ಪ್ರಮಾಣ ದಾಖಲಿಸಿವೆ.

ಶೇಕಡಾ 96.39 ಫಲಿತಾಂಶ ಪಡೆದು ಉಡುಪಿ ಜಿಲ್ಲೆ ರಾಜ್ಯಕ್ಕೆ ಮತ್ತೆ ಪ್ರಥಮ ಸ್ಥಾನ ಪಡೆದುಕೊಂಡರೆ, ಉತ್ತರ ಕನ್ನಡ ಜಿಲ್ಲೆ ಶೇಕಡಾ 96.35 ಫಲಿತಾಂಶದೊಂದಿಗೆ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದಿದೆ.

ಬೆಂಗಳೂರು ನಗರ ಮತ್ತು ಮೈಸೂರು ಜಿಲ್ಲೆಗಳೂ ಉತ್ತಮ ಸಾಧನೆ ತೋರಿದ್ದು, ಹಾಸನ ಹಾಗೂ ಯಾದಗಿರಿ ಜಿಲ್ಲೆಗಳು ಶೇಕಡಾ 71.21 ಫಲಿತಾಂಶದೊಂದಿಗೆ ರಾಜ್ಯಕ್ಕೆ ಕೊನೆಯ ಸ್ಥಾನದಲ್ಲಿವೆ.

ಅತಿ ಹೆಚ್ಚು ಅಂಕ ಪಡೆದ ಟಾಪರ್ ಗಳು

ವಾಣಿಜ್ಯ‌ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ದಿಶಾ ಅವರು 600 ಅಂಕಗಳಿಗೆ 600 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ಇನ್ನು ಕಲಾ ವಿಭಾಗದಲ್ಲಿ ಬಳ್ಳಾರಿ ಜಿಲ್ಲೆಯ ಕೊಟ್ಟೂರಿನ ಇಂದು ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರಾದ ಅರ್ಚನಾ ಮತ್ತು ಸಂಗೀತ ಅವರು 600 ಅಂಕಗಳಿಗೆ 598 ಪಡೆದು ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಶಮನ್ಯು ಎಸ್. ಶೆಟ್ಟಿ ಅವರು 600 ಅಂಕಗಳಿಗೆ 598 ಅಂಕ ಪಡೆದು ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದಾರೆ.

TAGGED:2nd PUC Result Announced: Udupi First for State; Last position for which district?
Share This Article
Facebook Twitter Copy Link Print
Previous Article 2nd PUC ರಿಸಲ್ಟ್ ಪ್ರಕಟ: ಯಾವ ಜಿಲ್ಲೆ ಫಸ್ಟ್, ಯಾವುದು ಲಾಸ್ಟ್?
Next Article ಸಾವಿನ ಶೋಕದಲ್ಲೂ ಛಲ ಬಿಡದೆ ಸ್ಟೇಟ್ ಟಾಪರ್ ಆದ ದಿಶಾ!

Popular Posts

NEET ಪರೀಕ್ಷೆ ಹಿನ್ನೆಲೆ: ಟೆಲಿಗ್ರಾಂ ಆ್ಯಪ್‌ಗೆ ತಾತ್ಕಾಲಿಕ ನಿರ್ಬಂಧ ಹೇರಿದ ಕೇಂದ್ರ ಸರ್ಕಾರ

2 Min Read

ಸ್ಕಾಲರ್​​ಶಿಪ್​ ಕೊಡೋಕೆ ರಶ್ಮಿಕಾ ಪ್ರಯಣಿಸಿದ ಕಾರು ಯಾವುದು?;! 5 ಸ್ಟಾರ್ ಹೋಟೆಲ್​​ ರೂಮ್​ನಂತಿರುವ ಇದರ ಬೆಲೆ ಎಷ್ಟು?

2 Min Read

300 ವರ್ಷದ ಹಿಂದಿನ ಆತ್ಮದ ಜೊತೆ ಮದುವೆ!; ವಿವಾಹ ನಡೆದಿದ್ದು ಹೇಗೆ?

2 Min Read

ಆಭರಣ ಪ್ರಿಯರಿಗೆ ಬಿಗ್​ ಶಾಕ್​​ ಕೊಟ್ಟ ಕೇಂದ್ರ ಸರ್ಕಾರ

3 Min Read

You Might Also Like

ಕರ್ನಾಟಕಪ್ರಮುಖ

ಶಿವಂ ಅಸೋಸಿಯೇಟ್ ವಂಚನೆ ಕೇಸ್; ಶಿವಾನಂದ ನೀಲಣ್ಣವರ್ ಜೈಲಿಂದ ರಿಲೀಸ್

1 Min Read
ಕರ್ನಾಟಕಪ್ರಮುಖಮನರಂಜನೆ

ಯೂಟ್ಯೂಬ್ ವ್ಲಾಗ್ಸ್‌, ರೀಲ್ಸ್, ಬ್ರ್ಯಾಂಡ್ ಪ್ರಮೋಟ್ ಮಾಡುವ ಸೋನುಗೆ ಬರುವ ಆದಾಯ ಎಷ್ಟು?; ಟ್ರೋಲರ್ಸ್ ಗಳಿಗೆ ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ಕೊಟ್ಟ ಸೋನು ಶ್ರೀನಿವಾಸ್ ಗೌಡ

2 Min Read
ಕರ್ನಾಟಕಪ್ರಮುಖ

Voter ID ಗ್ಯಾರಂಟಿ ಯೋಜನೆಗಳ ಲಾಭ ಪಡೆಯಲು ವೋಟರ್ ಐಡಿ ಕಡ್ಡಾಯ ಎಂದ ಸಿಎಂ ಡಿಕೆ

2 Min Read
ಕರ್ನಾಟಕಪ್ರಮುಖ

ಗೃಹಲಕ್ಷ್ಮಿ ಯೋಜನೆಯಲ್ಲಿ ಏನೆಲ್ಲಾ ಚೇಂಜ್ ಆಗ್ತಿದೆ; ಅರ್ಜಿ ಸಲ್ಲಿಸಲು ಏನು ಮಾಡ್ಬೇಕು?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?