newsics.com
ಇಂದು ರಾಜ್ಯದ ದಾವಣಗೆರೆ ದಕ್ಷಿಣ ಕ್ಷೇತ್ರ ಹಾಗೂ ಬಾಗಲಕೋಟೆ ಮತಕ್ಷೇತ್ರದಲ್ಲಿ ಉಪಚುನಾವಣೆ ಮತದಾನ ನಡೆಯುತ್ತಿದೆ.
ದಾವಣಗೆರೆ ದಕ್ಷಿಣದಲ್ಲಿ ಹಿರಿಯ ರಾಜಕಾರಣಿ ಶಾಮನೂರು ಶಿವಶಂಕರಪ್ಪ ಅವರ ನಿಧನ ಹಾಗೂ ಬಾಗಲಕೋಟೆಯಲ್ಲಿ ಹೆಚ್.ವೈ.ಮೇಟಿ ಅವರ ನಿಧನದಿಂದ ತೆರವಾದ ಸ್ಥಾನಗಳಿಗೆ ಉಪಸಮರ ನಡೆಯುತ್ತಿದೆ.
ಬಾಗಲಕೋಟೆಯಲ್ಲಿ ಮಧ್ಯಾಹ್ನ 1 ಗಂಟೆವರೆಗೆ ಶೇ.43.75ರಷ್ಟು ಮತದಾನ ಆಗಿದೆ.
ದಾವಣಗೆರೆ ದಕ್ಷಿಣದಲ್ಲಿ 1 ಗಂಟೆ ವೇಳೆಗೆ ಶೇಕಡಾ 37.17ರಷ್ಟು ವೋಟಿಂಗ್ ಆಗಿದೆ.
ಒಟ್ಟು 2,31,674 ಮತದಾರರ ಪೈಕಿ 85,882 ಜನರಿಂದ ಮತ ಚಲಾವಣೆಯಾಗಿದೆ.
ಕಳೆದ ಬಾರಿಗಿಂತ ಈ ಸಲ ಬಿರುಸಿನ ಮತದಾನವಾಗಿದೆ.
ಇನ್ಮುಂದೆ ರಾಜ್ಯದಲ್ಲಿ ಚಾರಣಿಗರ ಸುರಕ್ಷತೆಗೆ ಇ-ಟ್ರ್ಯಾಕಿಂಗ್ ಆ್ಯಪ್, ವಿಮೆ ಕಡ್ಡಾಯ.!
Rashid Khan retirement ಟೆಸ್ಟ್ ಕ್ರಿಕೆಟ್ ಗೆ ವಿದಾಯ ಹೇಳಿದ ರಶೀದ್ ಖಾನ್