https://youtube.com/shorts/9OUTrzsAEaE?si=-GbS-QxOxuzBuJvH
newsics.com
ಉದ್ಯೋಗ ಅತ್ಯವಶ್ಯಕ. ಆದರೆ ಈಗಿನ ಕಾಲದಲ್ಲಿ ಎಷ್ಟೇ ಓದಿಕೊಂಡಿದ್ದರೂ ಕೈ ತುಂಬಾ ಸಂಬಳ ಸಿಗುವ ಒಂದೊಳ್ಳೆ ಉದ್ಯೋಗ ಗಿಟ್ಟಿಸಿಕೊಳ್ಳುವುದು ತುಂಬಾನೇ ಕಷ್ಟ. ತಾವು ಓದಿರುವುದಕ್ಕೆ ತಕ್ಕ ಉದ್ಯೋಗವಿಲ್ಲದೇ ಸಿಕ್ಕ ಕೆಲಸವನ್ನೇ ಅನಿವಾರ್ಯ ಕಾರಣಕ್ಕಾಗಿ ಮಾಡುವವರೇ ಹೆಚ್ಚು.
ಹೀಗಿರುವಾಗ ತಿಂಗಳಿಗೆ ಒಂದು ಲಕ್ಷ ರುಪಾಯಿ ಸಂಬಳ ಪಡೆಯುತ್ತಾ ಜೀವನ ಸಾಗಿಸುತ್ತಿದ್ದ ಟ್ಯಾಕ್ಸ್ ಲಾಯರ್ ಒಂದು ಹಂತದಲ್ಲಿ ಯಾವುದೇ ಬ್ಯಾಕ್‌ಅಪ್ ಇಲ್ಲದೇ ತಾವು ದುಡಿಯುತ್ತಿದ್ದ ಕೆಲಸ ಬಿಟ್ಟು ಆ ಮೇಲೆ ಫ್ರೀಲ್ಯಾನ್ಸರ್ ಆಗಿ ಬದುಕು ಕಟ್ಟಿಕೊಂಡು ತಿಂಗಳಿಗೆ ಸುಮಾರು ಎರಡು ಲಕ್ಷ ರುಪಾಯಿ ದುಡಿಮೆ ಮಾಡಲಾರಂಭಿಸಿದ್ದಾರೆ.
ಮೆಹರ್ ವರ್ಮಾ ಎನ್ನುವ ಯುವತಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಖಾಸಗಿ ವೃತ್ತಿ ಬದುಕು ಹೇಗಿತ್ತು ಎನ್ನುವುದನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಕಾನೂನು ಸಂಸ್ಥೆಯೊಂದರಲ್ಲಿ ದೀರ್ಘಕಾಲ ಕೆಲಸ ಮಾಡುವುದರಿಂದ ಹಿಡಿದು ಕಂಟೆಂಟ್ ಕ್ರಿಯೆಟ್ ಹಾಗೂ ಕಥೆ ಹೇಳುವವರೆಗಿನ ಪಯಣವನ್ನು ಮೆಲುಕು ಹಾಕಿದ್ದಾರೆ.
ಫೆಬ್ರವರಿ 2024 ರಲ್ಲಿ, ನಾನು ಕಾನೂನು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೆ, ತಿಂಗಳಿಗೆ ಸುಮಾರು ₹1 ಲಕ್ಷ ಸಂಪಾದಿಸುತ್ತಿದ್ದೆ. ಕಾಗದದ ಮೇಲೆ, ಎಲ್ಲವೂ ಸರಿಯಾಗಿ ಕಾಣುತ್ತಿತ್ತು. ಆದರೆ ನಾನು ಖುಷಿಯಾಗಿರಲಿಲ್ಲ. ದೀರ್ಘ ಸಮಯ, ನಿಜವಾದ ವೀಕೆಂಡ್‌ಗಳೇ ಇರಲಿಲ್ಲ. ರಾತ್ರಿ 9-10 ಗಂಟೆಗೆ ಮನೆಗೆ ಬಂದು ಇನ್ನೂ ಕೆಲಸ ಮಾಡುತ್ತಿದ್ದೆ. ನಾನು ನಿರಂತರವಾಗಿ ದಣಿದಿದ್ದೆ, ನಿರಂತರವಾಗಿ ಒತ್ತಡಕ್ಕೊಳಗಾಗಿದ್ದೆ ಮತ್ತು ಪ್ರಾಮಾಣಿಕವಾಗಿ ಹೇಳಬೇಕೆಂದರೆ ಹೆಚ್ಚಿನ ದಿನಗಳಲ್ಲಿ ನಾನು ಭಯಭೀತಳಾಗಿದ್ದೆ ಎಂದು ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಟ್ಯಾಕ್ಸ್ ಲಾಯರ್ ಕೆಲಸ ಬಿಟ್ಟು ಕೇವಲ 14 ತಿಂಗಳಲ್ಲಿ ಇದೀಗ ಮೆಹರ್ ವರ್ಮಾ ತಿಂಗಳಿಗೆ ಎರಡು ಲಕ್ಷ ರುಪಾಯಿ ಆದಾಯ ಗಳಿಸಲಾರಂಭಿಸಿದ್ದಾರೆ. ಆಕೆಯ ಪ್ರಕಾರ, ಆರ್ಥಿಕ ಸ್ವಾವಲಂಭನೆ ಮಾತ್ರವೇ ನನ್ನ ಗುರಿಯಲ್ಲ. ದಿನಕ್ಕೆ 12-14 ಗಂಟೆ ದುಡಿಯುವುದೇ ಸಕ್ಸಸ್ ಅಲ್ಲ. ನಾನೀಗ ದಿನಕ್ಕೆ ಆರು ಗಂಟೆ ಕೆಲಸ ಮಾಡುತ್ತೇನೆ. ಉಳಿದ ಸಮಯದಲ್ಲಿ ಕೆಫೆಗೆ ಹೋಗುತ್ತೇನೆ, ಜಿಮ್‌ಗೆ ಹೋಗುತ್ತೇನೆ, ಕುಟುಂಬದ ಜಯ ಕಾಲ ಕಳೆಯುತ್ತೇನೆ. ನಿಜ ಹೇಳಬೇಕೆಂದರೆ ನಾನು ಈಗ ನನ್ನ ಜೀವನವನ್ನು ಎಂಜಾಯ್ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.
“ನಾನು ನನ್ನ ಕೆಲಸದಲ್ಲಿ ಚೆನ್ನಾಗಿ ಸಂಪಾದಿಸುತ್ತಿದ್ದಾಗಲೂ, ನಾನು ಯಶಸ್ವಿಯಾಗಿದ್ದೇನೆ ಎಂದು ಅನಿಸುತ್ತಿರಲಿಲ್ಲ. ಆದರೆ ನಾನು ಕಂಟೆಂಟ್ ಕ್ರಿಯೇಷನ್‌ನಲ್ಲಿ ತಿಂಗಳಿಗೆ ₹60-70 ಸಾವಿರ ಗಳಿಸುತ್ತಿದ್ದಾಗ ನಾನು ಯಶಸ್ವಿಯಾದೆ ಅನಿಸಲಾರಂಭಿಸಿತು. ಯಾಕಂದರೆ ನನಗೆ ಆಗ ಫ್ಲೆಕ್ಸಿಬಿಲಿಟಿಯಿತ್ತು ಎಂದು ಮೆಹರ್ ವರ್ಮಾ ಹೇಳಿದ್ದಾರೆ.
https://www.instagram.com/reel/DWRzUUiD7d9/?igsh=MTFmYXhnYmVsYnhvZA==