https://youtube.com/shorts/7-1-Ue0Sh8o?si=UJX_wGWxwj6xGzu4
newsics.com
ಚಿಕ್ಕಮಗಳೂರು: ಸರಿಯಾದ ಮದುವೆ ಸಂಬಂಧ ಕೂಡಿಬರುತ್ತಿಲ್ಲ ಎಂಬ ಕಾರಣಕ್ಕೆ ಮನನೊಂದು ಇಬ್ಬರು ಯುವಕರು ನೇಣಿಗೆ ಶರಣಾಗಿರುವ ಘಟನೆಗಳು ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ನಡೆದಿವೆ. ಮೃತರನ್ನು ಕುಮಾರ್ (26) ಮತ್ತು ಶಂಕರ್ ತಳವಾರ್ (25) ಎಂದು ಗುರುತಿಸಲಾಗಿದೆ.
ಮದುವೆ ಸಂಬಂಧಗಳು ಕೂಡಿಬರುತ್ತಿಲ್ಲ ಎಂಬ ಹತಾಶೆಯಿಂದ ರಾಜ್ಯದ ಇಬ್ಬರು ಯುವಕರು ನೇಣಿಗೆ ಶರಣಾಗಿದ್ದಾರೆ. ಚಿಕ್ಕಮಗಳೂರಿನ ಕಡೂರಿನಲ್ಲಿ ಶಿರಾ ಮೂಲದ ಕುಮಾರ್ (26) ಹಾಗೂ ವಿಜಯಪುರದ ನಿಡಗುಂದಿಯಲ್ಲಿ ಶಂಕರ್ ತಳವಾರ್ (25) ಎಂಬುವವರು ಮದುವೆಗೆ ಹೆಣ್ಣು ಸಿಗದಿದ್ದಕ್ಕೆ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳಾಗಿದ್ದಾರೆ.
ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ ಎಂಬ ಕೊರಗು ಇಬ್ಬರು ಯುವಕರನ್ನು ಬಲಿಪಡೆದಿದೆ. ಪೋಷಕರು ಎಷ್ಟೇ ಹುಡುಕಿದರೂ ಸಂಬಂಧಗಳು ನಿಶ್ಚಯವಾಗದಿದ್ದಕ್ಕೆ ಮನನೊಂದ ಇಬ್ಬರು ಯುವಕರು ಮರಕ್ಕೆ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾರೆ.
ರಾಜ್ಯದ ಚಿಕ್ಕಮಗಳೂರು ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಮದುವೆಗೆ ಸೂಕ್ತ ಸಂಬಂಧಗಳು ಸಿಗುತ್ತಿಲ್ಲ ಎಂಬ ಕಾರಣಕ್ಕೆ ಮನನೊಂದು ಇಬ್ಬರು ಯುವಕರು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆಗಳು ವರದಿಯಾಗಿವೆ.
https://www.newsics.com/2026/04/04/effect-of-war-torrent-gas-hikes-cng-price-by-rs-2-50-per-kg/