https://youtube.com/shorts/7-1-Ue0Sh8o?si=UJX_wGWxwj6xGzu4
newsics.com
ನವದೆಹಲಿ: ಮನೆ ಕಟ್ಟುವವರಿಗೆ ಹಾಗೂ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿರುವವರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ದೇಶದ ಪ್ರಮುಖ ಸಿಮೆಂಟ್ ತಯಾರಿಕಾ ಕಂಪನಿಗಳು ನಾಳೆಯಿಂದ (ಏಪ್ರಿಲ್ 5) ಸಿಮೆಂಟ್ ದರವನ್ನು ಗಣನೀಯವಾಗಿ ಹೆಚ್ಚಿಸಲು ನಿರ್ಧರಿಸಿವೆ.
ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಯುದ್ಧ ಮತ್ತು ಬಿಕ್ಕಟ್ಟುಗಳು ನೇರವಾಗಿ ಕಟ್ಟಡ ನಿರ್ಮಾಣ ವಲಯದ ಮೇಲೆ ಪರಿಣಾಮ ಬೀರಿದೆ.
ಯುದ್ಧದ ಕಾರಣದಿಂದಾಗಿ ಇಂಧನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದ್ದು, ಉತ್ಪಾದನಾ ವೆಚ್ಚ ಹೆಚ್ಚಾಗಿದೆ.ಕಳೆದ 3-6 ತಿಂಗಳಲ್ಲಿ ಪೆಟ್ ಕೋಕ್ ಮತ್ತು ಕಲ್ಲಿದ್ದಲು ಬೆಲೆ ಜಾಗತಿಕವಾಗಿ ಶೇ. 30ರಷ್ಟು ಏರಿಕೆಯಾಗಿದೆ.ಸಿಮೆಂಟ್ ಚೀಲಗಳ ಬೆಲೆಯೂ ಪ್ರತಿ ಚೀಲಕ್ಕೆ ಸುಮಾರು 15 ರೂ.ಗಳಷ್ಟು ಅಧಿಕವಾಗಿದೆ.
ಮಾರ್ಚ್ ತಿಂಗಳಲ್ಲಿ ಸಿಮೆಂಟ್ ಬೇಡಿಕೆ ಕುಸಿದಿದ್ದು, ಜೂನ್ ತ್ರೈಮಾಸಿಕದಲ್ಲಿ ಕಂಪನಿಗಳ ಲಾಭಾಂಶ ಕಡಿಮೆಯಾಗುವ ಆತಂಕ ಎದುರಾಗಿದೆ. ಇದನ್ನು ಸರಿದೂಗಿಸಲು ಬೆಲೆ ಏರಿಕೆಯ ಹಾದಿ ಹಿಡಿದಿವೆ.
https://www.newsics.com/2026/04/04/shraddhas-beauty-is-like-a-fire-in-the-youth/