https://youtube.com/shorts/7-1-Ue0Sh8o?si=UJX_wGWxwj6xGzu4
newsics.com
ಶ್ರದ್ಧಾ ದಾಸ್ ತನ್ನ ಗ್ಲಾಮರ್ ಅನ್ನು ಪ್ರದರ್ಶಿಸುವಲ್ಲಿ ಎಂದಿಗೂ ವಿಫಲರಾಗುವುದಿಲ್ಲ. ಬೆಳ್ಳಿ ಪರದೆಯ ಮೇಲಾಗಲಿ ಅಥವಾ ಕ್ಯಾಮೆರಾ ಮುಂದೆಯಾಗಲಿ ತನ್ನ ಸೌಂದರ್ಯ ಪ್ರದರ್ಶಿಸುವಲ್ಲಿ ಅವರು ಯಾರಿಗೂ ಕಡಿಮೆಯಿಲ್ಲ.
ಈ ಸಂದರ್ಭದಲ್ಲಿ, ಅವರು ಇತ್ತೀಚೆಗೆ ಮತ್ತೊಮ್ಮೆ ಗ್ಲಾಮರ್ ಟ್ರೀಟ್ ನೀಡಿದರು. ಅವರ ಲೇಟೆಸ್ಟ್ ಫೋಟೋಸ್ ನೋಡಿದ ನೆಟ್ಟಿಗರು ಫಿದಾ ಆಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅವರು ಯುವಕರ ಟೆಂಪ್ರೇಚರ್ ಹೆಚ್ಚಿಸುವ ಫೋಟೋ ಹಂಚಿಕೊಳ್ಳುತ್ತಿದ್ದಾರೆ.
ಶ್ರದ್ಧಾ ದಾಸ್ ಕನ್ನಡ ಮಂದಿಗೂ ಪರಿಚಿತರಾಗಿದ್ದಾರೆ. ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿ ಭೇಷ್ ಎನಿಸಿಕೊಂಡಿದ್ದಾರೆ. 2021ರಲ್ಲಿ ತೆರೆಗೆ ಬಂದ ಕಿಚ್ಚ ಸುದೀಪ್ ನಟನೆಯ ‘ಕೋಟಿಗೊಬ್ಬ 3’ ಸಿನಿಮಾದಲ್ಲಿ ಕಂಗನಾ ಹೆಸರಿನ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದರು.
ಸಾಮಾಜಿಕ ಜಾಲತಾಣಗಳಲ್ಲಿ ಅವರು ಸೃಷ್ಟಿಸುತ್ತಿರುವ ಗ್ಲಾಮರ್ ಗಲಾಟೆಯಿಂದಾಗಿ ಅವರ ಫಾಲೋವರ್ಸ್ ಸಂಖ್ಯೆ ಹೆಚ್ಚುತ್ತಿದೆ ಮತ್ತು ನಿರ್ದೇಶಕರು ಮತ್ತು ನಿರ್ಮಾಪಕರ ಕಣ್ಣುಗಳು ಅವರ ಮೇಲೆ ಬೀಳುತ್ತಿವೆ.