https://youtube.com/shorts/7-1-Ue0Sh8o?si=UJX_wGWxwj6xGzu4
newsics.com
ವಿಶಾಖಪಟ್ಟಣಂ : ಶತ್ರು ರಾಷ್ಟ್ರಗಳ ನಿದ್ದೆಗೆಡಿಸಲು ಭಾರತೀಯ ನೌಕಾಪಡೆಗೆ ಬ್ರಹ್ಮಾಸ್ತ್ರದಂತಹ ಬಲ ಸಿಗಲಿದೆ. ಸ್ವದೇಶಿ ನಿರ್ಮಿತ ಅಣ್ವಸ್ತ್ರ ಚಾಲಿತ ಜಲಾಂತರ್ಗಾಮಿ ಐಎನ್‌ಎಸ್ ಅರಿಧಮನ್ ಅನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶೀಘ್ರದಲ್ಲೇ ಅಧಿಕೃತವಾಗಿ ನೌಕಾಪಡೆಗೆ ಸೇರ್ಪಡೆಗೊಳಿಸಲಿದ್ದಾರೆ.
ಈ ಐತಿಹಾಸಿಕ ಕ್ಷಣಕ್ಕೂ ಮುನ್ನ ಎಕ್ಸ್ (X) ನಲ್ಲಿ ಪೋಸ್ಟ್ ಮಾಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್,’ಅರಿಧಮನ್’ ಎನ್ನುವುದು ಕೇವಲ ಶಬ್ದವಲ್ಲ, ಅದು ಭಾರತದ ಮಹಾಶಕ್ತಿ” ಎಂದು ಬಣ್ಣಿಸಿದ್ದಾರೆ. ಭಾರತದ ಕಡಲ ತೀರದ ಭದ್ರತೆಯನ್ನು ಇದು ಹತ್ತಾರು ಪಟ್ಟು ಹೆಚ್ಚಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದು ಭಾರತದ ಮೂರನೇ ಸ್ವದೇಶಿ ನಿರ್ಮಿತ ಪರಮಾಣು ಬ್ಯಾಲಿಸ್ಟಿಕ್ ಜಲಾಂತರ್ಗಾಮಿ (SSBN) ಆಗಿದೆ. ಖಾಸಗಿ ವಲಯದ ದೈತ್ಯ ಕಂಪನಿ ಎಲ್‌ಆಂಡ್‌ಟಿ (L&T) ಸಹಯೋಗದೊಂದಿಗೆ ವಿಶಾಖಪಟ್ಟಣಂನ ಸೀಕ್ರೆಟ್ ಶಿಪ್ ಬಿಲ್ಡಿಂಗ್ ಸೆಂಟರ್‌ನಲ್ಲಿ ಇದನ್ನು ನಿರ್ಮಿಸಲಾಗಿದೆ. ಸಮುದ್ರದ ಆಳದಲ್ಲಿ ತಿಂಗಳುಗಟ್ಟಲೆ ನಿರಂತರವಾಗಿ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ಇದರಲ್ಲಿದ್ದು, ಈಗಾಗಲೇ ಕಠಿಣ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರೈಸಿದೆ.
ಈ ಹಿಂದೆ ಐಎನ್‌ಎಸ್ ಅರಿಹಂತ್ (2016) ಮತ್ತು ಐಎನ್‌ಎಸ್ ಅರಿಘಾತ್ (2024) ನೌಕಾಪಡೆಗೆ ಸೇರಿದ್ದವು. ಈಗ ಅರಿಧಮನ್ ಸೇರ್ಪಡೆಯೊಂದಿಗೆ ಭಾರತದ ನ್ಯೂಕ್ಲಿಯರ್ ಟ್ರೈಡ್ (ಜಲ, ನೆಲ, ಆಕಾಶದಿಂದ ಅಣ್ವಸ್ತ್ರ ದಾಳಿ ನಡೆಸುವ ಶಕ್ತಿ) ಮತ್ತಷ್ಟು ಭದ್ರವಾಗಿದೆ.
ಮುಂಬೈನ ಮಜಗಾಂವ್ ಡಾಕ್ ಶಿಪ್‌ಬಿಲ್ಡರ್ಸ್ ಲಿಮಿಟೆಡ್ ನಿರ್ಮಿಸಿರುವ ಈ 6,670 ಟನ್ ತೂಕದ ಹಡಗಿನಲ್ಲಿ ಶೇ. 75ಕ್ಕಿಂತ ಹೆಚ್ಚು ಸ್ವದೇಶಿ ಬಿಡಿಭಾಗಗಳನ್ನು ಬಳಸಲಾಗಿದೆ. ಈ ಎರಡು ಬೃಹತ್ ಶಕ್ತಿಗಳ ಸೇರ್ಪಡೆಯಿಂದಾಗಿ ಹಿಂದೂ ಮಹಾಸಾಗರದಲ್ಲಿ ಚೀನಾ ಮತ್ತು ಪಾಕಿಸ್ತಾನದ ಉಪಟಳಕ್ಕೆ ಬ್ರೇಕ್ ಬೀಳಲಿದ್ದು, ಭಾರತವು ಸಮುದ್ರದ ಅಧಿಪತಿಯಾಗಿ ಹೊರಹೊಮ್ಮಲಿದೆ.