https://youtube.com/shorts/w77Qj39UtDA?si=G-t7V0TrkmzYuWQ5
newsics.com
ರಾಜ್ಯದ ವಾಹನಗಳ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ ಅರ್ಥಾತ್ ಪಿಯುಸಿಸಿ ಮಾಹಿತಿಯನ್ನು ಕೇಂದ್ರ ಸರ್ಕಾರದ ವಾಹನ್ ಪೋರ್ಟಲ್‌ನೊಂದಿಗೆ ಸಂಯೋಜಿಸಲು ಕರ್ನಾಟಕ ಮುಂದಾಗಿದ್ದು, ಈ ಮೂಲಕ ವಾಹನ ಸವಾರರು ಟ್ರಾಫಿಕ್ ಫೈನ್‌ನಲ್ಲಿ ಸಾವಿರಾರು ರೂಪಾಯಿಗಳವರೆಗೆ ಉಳಿಸಬಹುದಾಗಿದೆ.
ಇಲ್ಲಿಯವರೆಗೆ ಕರ್ನಾಟಕದ ವಾಹನಗಳು ಪಿಯುಸಿಸಿ ಪ್ರಮಾಣಪತ್ರವನ್ನು ಹೊಂದಿದ್ದರೂ ಸಹ ಅವುಗಳ ಮಾಹಿತಿ ಕೇಂದ್ರ ಸರ್ಕಾರದ ವಾಹನ್ ಪೋರ್ಟಲ್‌ನಲ್ಲಿ ಕಾಣಿಸುತ್ತಿರಲಿಲ್ಲ. ಇದರಿಂದಾಗಿ ಕರ್ನಾಟಕ ನೋಂದಣಿಯ ವಾಹನಗಳು ಮಹಾರಾಷ್ಟ್ರ, ಗೋವಾ, ಕೇರಳ ಅಥವಾ ತಮಿಳುನಾಡಿನಂತಹ ರಾಜ್ಯಗಳಿಗೆ ಹೋದಾಗ ಅಲ್ಲಿನ ಟ್ರಾಫಿಕ್ ಪೊಲೀಸರು ಆನ್‌ಲೈನ್‌ನಲ್ಲಿ ಮಾಹಿತಿಯನ್ನು ಪರಿಶೀಲಿಸಿ, ಅಲ್ಲಿ ಸಿಗದೆ ಹೋದರೆ, ಸರಿ ಸುಮಾರು 10,000 ರೂಪಾಯಿಗಳವರೆಗೆ ಫೈನ್ ಹಾಕುತ್ತಿದ್ದರು.
ಈಗ ರಾಜ್ಯ ಸರ್ಕಾರವು ಏಪ್ರಿಲ್ 1, 2026ರಿಂದ ಪಿಯುಸಿಸಿ ಮಾಹಿತಿಯನ್ನು ನೇರವಾಗಿ ಕೇಂದ್ರ ಸರ್ಕಾರದ ವಾಹನ್ ಪೋರ್ಟಲ್‌ಗೆ ಲಿಂಕ್ ಮಾಡುವ ಕ್ರಮ ಕೈಗೊಂಡಿದೆ. ಇದರ ಮೂಲಕ ವಾಹನಗಳ ಮಾಲಿನ್ಯ ಪ್ರಮಾಣಪತ್ರಗಳ ಮಾಹಿತಿ ದೇಶದಾದ್ಯಂತ ಲಭ್ಯವಾಗಲಿದ್ದು, ಡಿಜಿಟಲ್ ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸುತ್ತದೆ.
ಮನಿ ಕಂಟ್ರೋಲ್ ವರದಿ ಮಾಡಿರುವಂತೆ, ಹಳೆಯ PUCC ಪ್ರಮಾಣಪತ್ರಗಳನ್ನು ಹಂತ ಹಂತವಾಗಿ ಕೇಂದ್ರ ಸರ್ಕಾರದ ವಾಹನ್ ಪೋರ್ಟಲ್‌ಗೆ ಸೇರಿಸುವ ಕಾರ್ಯ ನಡೆಯಲಿದೆ. ಆದರೆ, ಹೊಸ ಪ್ರಮಾಣಪತ್ರಗಳು ಸ್ವಯಂಚಾಲಿತವಾಗಿಯೇ ವಾಹನ್ ಪೋರ್ಟಲ್‌ನಲ್ಲಿ ಅಪ್‌ಡೇಟ್ ಆಗಲಿವೆ. ಇದರಿಂದ ವಾಹನ ಮಾಲೀಕರು ತಮ್ಮ ವಾಹನದ ಮಾಹಿತಿಗಳನ್ನು ಬೇರೆ ಬೇರೆ ಕಡೆ ತೋರಿಸಬೇಕಾದ ಅಗತ್ಯ ಇರುವುದಿಲ್ಲ.
https://www.newsics.com/2026/04/02/ksrtc-extends-bus-pass-validity-of-school-students-till-april-10/