Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > ಶುಭೋದಯ… ಇಂದಿನ ಪಂಚಾಂಗ, 15-08-2024 ಗುರುವಾರ, 78ನೇ ಸ್ವಾತಂತ್ರ್ಯೋತ್ಸವ
ಈ ದಿನಪಂಚಾಂಗ

ಶುಭೋದಯ… ಇಂದಿನ ಪಂಚಾಂಗ, 15-08-2024 ಗುರುವಾರ, 78ನೇ ಸ್ವಾತಂತ್ರ್ಯೋತ್ಸವ

Share
5 Min Read
SHARE

newsics.com

ಶುಭೋದಯ

ನಿತ್ಯ ಪಂಚಾಂಗ

15 ಆಗಸ್ಟ್ 2024, ಗುರುವಾರ

ದಿನ ವಿಶೇಷ:

* ಸ್ವಾತಂತ್ರ್ಯ ದಿನಾಚರಣೆ

* ಸಂಗೊಳ್ಳಿ ರಾಯಣ್ಣ ಜನ್ಮದಿನ

* ಮಹರ್ಷಿ ಅರವಿಂದ ಜಯಂತಿ

—

ಗತಶಾಲಿ – 1946
ಗತಕಲಿ – 5125
ಸಂವತ್ಸರ – ಕ್ರೋಧಿ
ಅಯನ – ದಕ್ಷಿಣಾಯನ
ದಿನಾಂಕ – 15/08/2024
ತಿಂಗಳು – ಆಗಸ್ಟ್
ಬಣ್ಣ – ಹಸಿರು
ವಾರ – ಗುರುವಾರ

ತಿಥಿ – ದಶಮಿ 10:26:15
ಪಕ್ಷ – ಶುಕ್ಲ
ನಕ್ಷತ್ರ – ಜ್ಯೇಷ್ಠ 12:51:52
ಯೋಗ – ವೈಧೃತಿ 14:57:19
ಕರಣ – ಗರಜ 10:26:15
ಕರಣ – ವಾಣಿಜ 22:08:51

ತಿಂಗಳು (ಅಮಾವಾಸ್ಯಾಂತ್ಯ) ಶ್ರಾವಣ
ತಿಂಗಳು (ಹುಣ್ಣಿಮಾಂತ್ಯ) ಶ್ರಾವಣ
ಚಂದ್ರ ರಾಶಿ ‌‌‌‌‌ ‌‌ – ವೃಶ್ಚಿಕ till 12:51:52
ಚಂದ್ರ ರಾಶಿ ‌‌‌ – ಧನು from 12:51:52
ಸೂರ್ಯ ರಾಶಿ – ಕರ್ಕಾಟಕ
ಋತು – ವರ್ಷ

ಸೂರ್ಯೋದಯ – 06:08:33
ಸೂರ್ಯಾಸ್ತ – 18:39:19
ಹಗಲಿನ ಅವಧಿ – 12:30:46
ರಾತ್ರಿಯ ಅವಧಿ – 11:29:20
ಚಂದ್ರೋದಯ – 14:49:44
ಚಂದ್ರಾಸ್ತ – 26:19:23*

ರಾಹು ಕಾಲ – 13:58 – 15:32 ಅಶುಭ
ಯಮಗಂಡ ಕಾಲ – 06:09 – 07:42 ಅಶುಭ
ಗುಳಿಕ ಕಾಲ – 09:16 – 10:50
ಅಭಿಜಿತ್ – 11:59 – 12:49 ಶುಭ
ದುರ್ಮುಹೂರ್ತ – 10:19 – 11:09 ಅಶುಭ
ದುರ್ಮುಹೂರ್ತ – 15:19 – 16:09 ಅಶುಭ

***

ರಾಹು ಕಾಲ
ಭಾನುವಾರ – 4.30 ರಿಂದ 6.00
ಸೋಮವಾರ – 7.30 ರಿಂದ 9.00
ಮಂಗಳವಾರ – 3.00 ರಿಂದ 4.30
ಬುಧವಾರ – 12.00 ರಿಂದ 1.30
ಗುರುವಾರ – 1.30 ರಿಂದ 3.00
ಶುಕ್ರವಾರ – 10.30 ರಿಂದ 12.00
ಶನಿವಾರ – 9.00 ರಿಂದ 10.30

ಗುಳಿಕ ಕಾಲ
ಭಾನುವಾರ – 3.00 ರಿಂದ 4.30
ಸೋಮವಾರ – 1.30 ರಿಂದ 3.00
ಮಂಗಳವಾರ – 12.00 ರಿಂದ 1.30
ಬುಧವಾರ – 10.30 ರಿಂದ 12.00
ಗುರುವಾರ – 9.00 ರಿಂದ 10.30
ಶುಕ್ರವಾರ – 7.30 ರಿಂದ 9.00
ಶನಿವಾರ – 6.00 ರಿಂದ 7.30

ಯಮಗಂಡ ಕಾಲ
ಭಾನುವಾರ – 12.00 ರಿಂದ 1.30
ಸೋಮವಾರ – 10.30 ರಿಂದ 12.00
ಮಂಗಳವಾರ – 9.00 ರಿಂದ 10.30
ಬುಧವಾರ – 7.30 ರಿಂದ 9.00
ಗುರುವಾರ – 6.00 ರಿಂದ 7.30
ಶುಕ್ರವಾರ – 3.00 ರಿಂದ 4.30
ಶನಿವಾರ – 1.30 ರಿಂದ 3.00

***

***

ಈ ದಿನದ ಮಾತು

ಮನುಷ್ಯನು ಜೀವನದಿಂದ ಕಲಿಯಬಹುದಾದ ಪ್ರಮುಖ ಪಾಠವೆಂದರೆ, ಈ ಜಗತ್ತಿನಲ್ಲಿ ನೋವಷ್ಟೇ ಇದೆ ಎಂಬುದಲ್ಲ. ಆ ನೋವುಗಳನ್ನೂ ಸಂತೋಷವಾಗಿ ಪರಿವರ್ತಿಸಿಕೊಳ್ಳುವ ಸಾಮರ್ಥ್ಯ ಅವನಿಗೆ ನಿಶ್ಚಿತವಾಗಿ ಇದೆ ಎಂಬುದು.
– ರವೀಂದ್ರನಾಥ ಠಾಕೂರ್

***

ಈ ದಿನದ ಸುಭಾಷಿತ

ಸಾಧವೋ ಯಾದೃಶಾ ಲೋಕೇ
ಸಾಗರಾಶ್ಚ ನ ತಾದೃಶಾಃ |
ಸಾಧವೋ ಯಾಂತಿ ಮರ್ಯಾದಾಂ
ಯುಗಾಂತೇಽಪಿ ನ ಸಾಗರಾಃ ||
(ವ್ಯಾಸ ಸುಭಾಷಿತ)

ಈ ಪ್ರಪಂಚದಲ್ಲಿ ಸಾಧುಗಳಿದ್ದಂತೆ ಸಾಗರಗಳು ಇರುವುದಿಲ್ಲ. ಪ್ರಳಯಕಾಲದಲ್ಲೂ ಸಾಧುಗಳು ಮರ್ಯಾದೆಯನ್ನು (ಮೇರೆಯನ್ನು) ಮೀರುವುದಿಲ್ಲ. ಆದರೆ ಸಾಗರಗಳು ಮೀರುತ್ತವೆ.

***

ಇಂದಿನ ಇತಿಹಾಸ

ಆಗಸ್ಟ್ 15 : ಭಾರತದ ಸ್ವಾತಂತ್ರ್ಯ ದಿನಾಚರಣೆ

ಭಾರತದ ಸ್ವಾತಂತ್ರ್ಯ ದಿನವನ್ನು ಪ್ರತಿ ವರ್ಷ ಆಗಸ್ಟ್ 15 ರಂದು ಆಚರಿಸಲಾಗುತ್ತದೆ. ಬ್ರಿಟೀಷರ ಆಡಳಿತದಿಂದ ಭಾರತ ದೇಶ 1947ಆಗಸ್ಟ್ 15 ರಂದು ಸ್ವತಂತ್ರವಾಯಿತು. ಪ್ರತಿ ವರ್ಷ ಭಾರತದಾದ್ಯಂತ ಈ ದಿನವನ್ನು ಸ್ವಾತಂತ್ರ್ಯ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಈ ದಿನ ಇಡೀ ದೇಶದಲ್ಲಿ ರಾಷ್ಟ್ರೀಯ ರಜಾದಿನವನ್ನಾಗಿ ಆಚರಿಸಲಾಗುತ್ತದೆ. ದೇಶದ ಹಲವೆಡೆ ತ್ರಿವರ್ಣ ಧ್ವಜವನ್ನು ಹಾರಿಸಿ ಸಿಹಿ ಹಂಚಲಾಗುತ್ತದೆ. ಈ ಆಚರಣೆಯ ಪ್ರಮುಖ ಸಮಾರಂಭ ದೆಹಲಿಯ ಕೆಂಪು ಕೋಟೆಯಲ್ಲಿ ನಡೆಯತ್ತದೆ. ಈ ಸಮಾರಂಭದಲ್ಲಿ, ಭಾರತದ ಪ್ರಧಾನ ಮಂತ್ರಿಗಳು ರಾಷ್ಟ್ರೀಯ ಧ್ವಜವನ್ನು ಹಾರಿಸಿ ಭಾರತದ ರಾಷ್ಟ್ರಗೀತೆ “ಜನ ಗಣ ಮನ”ವನ್ನು ಹಾಡಿ ನಂತರ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡುತ್ತಾರೆ.

ಜೂನ್ 03, 1947 ರಂದು ಅಂದಿನ ಗವರ್ನರ್ ಜನರಲ್ ಆಗಿದ್ದ ಲಾರ್ಡ್ ಮೌಂಟ್‌ಬ್ಯಾಟನ್, ಬ್ರಿಟಿ‍ಶ್ ಭಾರತ ಸಾಮ್ರಾಜ್ಯವನ್ನು ಭಾರತ ಮತ್ತು ಪಾಕಿಸ್ತಾನ ಎಂಬ ಎರಡು ರಾಷ್ಟ್ರಗಳಾಗಿ ವಿಭಜಿಸುವುದಾಗಿ ಘೋಷಿಸಿದರು. ಇದರ ನಂತರ ಭಾರತದ ಸ್ವಾತ್ರಂತ್ರ್ಯ ಕಾಯಿದೆ ೧೯೪೭ ರ ಅನ್ವಯ ಆಗಸ್ಟ್ ೧೫, ೧೯೪೭ ರಂದು ಭಾರತವನ್ನು ಸ್ವತಂತ್ರ ರಾಷ್ಟ್ರವನ್ನಾಗಿ ಘೋಷಿಸಲಾಯಿತು.

ಅಂದಿನ ಮದ್ಯರಾತ್ರಿ, (12.15ರ) ನಂತರ ಜವಾಹರ್‌ಲಾಲ್ ನೆಹರು ಅವರು ದೇಶದ ಪ್ರಥಮ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಅಂದು ಅವರು ರಾಷ್ಟ್ರವನ್ನುದ್ದೇಶಿಸಿ, ಟ್ರಿಸ್ಟ್ ವಿಥ್ ಡೆಸ್ಟಿನಿ ಭಾಷಣ (‘ಭಾಗ್ಯದೊಡನೆ ಒಪ್ಪಂದ’ ಭಾಷಣ) ಮಾಡಿದರು.

🌹 ಪ್ರಮುಖ ಘಟನೆಗಳು 🌹

* ನೆಪೋಲಿಯನ್ ಬೋನಪಾರ್ತ್ – ನೆಪೋಲಿಯನ್ ಬೋನಪಾರ್ತ್ (ಅಥವಾ) ನೆಪೋಲಿಯನ್ ಬೊನಪಾರ್ಟೆ ಅವರು ಆಗಸ್ಟ್ 15, 1769 ರಂದು ಜನಿಸಿದರು. ಫ್ರಾನ್ಸ್ ದೇಶದ ಸೈನ್ಯ ಮತ್ತು ರಾಜಕೀಯ ನಾಯಕ. ಈತನ ಕಾರ್ಯಗಳಿಂದಾಗಿ 19ನೇ ಶತಮಾನದಲ್ಲಿ ಯುರೋಪ್‍ನ ರಾಜಕೀಯ ಇತಿಹಾಸವೇ ಬದಲಾಯಿತು. ನೆಪೋಲಿಯನ್ ನು ಫ್ರೆಂಚಿನ ಇತಿಹಸದಲ್ಲಿ 1789ರ ಕ್ರಾಂತಿಯ ಶಿಶುವಗಿ ಹೊರ ಹೊಮ್ಮಿದರು. ಪ್ರಪಂಚವನ್ನೆ ಗೆಲ್ಲಬೇಕೆಂಬ ಆಸೆಯಿಂದ ಇವರು ವಿಶ್ವದಲ್ಲಿ ಯುದ್ಧಗಳನ್ನು ನಡೆಸಿದರು. ಕೊನೆಗೆ ವಾಟೆರ್ಲೂ ಯುದ್ಧದಲ್ಲಿ ಸೋಲನ್ನು ಅನುಭವಿಸಿ ಸೈಂಟ್ ಹೆಲೆನ ಎಂಬ ದ್ವೀಪದಲ್ಲಿ ತಮ್ಮ ಕೊನೆಯ ದಿನಗಳನ್ನು ಅನುಭವಿಸಿದರು. ಮೇ 05, 1821 ರಂದು ನಿಧನರಾದರು.

* ಆಗಸ್ಟ್ 15, 1519 ರಂದು ಪನಾಮಾ ನಗರ ಸ್ಥಾಪನೆ.

* ನಾಗತಿಹಳ್ಳಿ ಚಂದ್ರಶೇಖರ್ – ಚಿತ್ರ ನಿರ್ದೇಶಕ, ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ್ ಬಹುಮುಖ ಪ್ರತಿಭೆ. ಸಾಂಸ್ಕೃತಿಕ ಲೋಕ, ಶಿಕ್ಷಣ, ಬರವಣಿಗೆ, ಪತ್ರಿಕಾ ಅಂಕಣಗಳು, ಸಿನಿಮಾ, ಕಿರುತೆರೆ ಹೀಗೆ ಅವರು ವಿವಿಧ ಕ್ಷೇತ್ರಗಳಲ್ಲಿ ತೊಡಗಿಕೊಂಡು ಹೆಸರು ಮಾಡಿದವರು. ಮಂಡ್ಯ ಜಿಲ್ಲೆಯ ನಾಗತಿಹಳ್ಳಿ ಎಂಬಲ್ಲಿ ಆಗಸ್ಟ್ 15, 1958 ರ ವರ್ಷದಲ್ಲಿ ಚಂದ್ರಶೇಖರ್ ಜನಿಸಿದರು. ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್, ಪುಟ್ಟಣ್ಣ ಕಣಗಾಲ್ ಪ್ರಶಸ್ತಿ, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿ ನಿಯುಕ್ತರಾದರು.

ದಿನ ಭವಿಷ್ಯ… 15-08-2024 ಗುರುವಾರ, ಸಿಂಹ- ಬಂಧುಮಿತ್ರರೊಂದಿಗೆ ಭಿನ್ನಾಭಿಪ್ರಾಯ, ಮೀನ- ಆಪ್ತ ಮಿತ್ರರೊಂದಿಗೆ ಜಾಗರೂಕರಾಗಿರಿ, ಇಂದಿನ ನಿಮ್ಮ ರಾಶಿ ಭವಿಷ್ಯದಲ್ಲೇನಿದೆ?

TAGGED:Good Morning Today's Almanac 15-08-2024 Thursday 78th Independence Day newsics ಇಂದಿನ ಪಂಚಾಂಗ
Share This Article
Facebook Twitter Copy Link Print
Previous Article ಕುಕ್ಕರ್ ಸ್ಫೋಟ: ಯುವಕ ಸಾವು, ಮತ್ತೊಬ್ಬರ ಸ್ಥಿತಿ ಗಂಭೀರ
Next Article ದಿನ ಭವಿಷ್ಯ… 15-08-2024 ಗುರುವಾರ, ಸಿಂಹ- ಬಂಧುಮಿತ್ರರೊಂದಿಗೆ ಭಿನ್ನಾಭಿಪ್ರಾಯ, ಮೀನ- ಆಪ್ತ ಮಿತ್ರರೊಂದಿಗೆ ಜಾಗರೂಕರಾಗಿರಿ, ಇಂದಿನ ನಿಮ್ಮ ರಾಶಿ ಭವಿಷ್ಯದಲ್ಲೇನಿದೆ?

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 21 ಜುಲೈ 2026, ಇಂದಿನ ನಿಮ್ಮ ಗ್ರಹಗತಿ ಹೇಗಿದೆ?

2 Min Read
ಪಂಚಾಂಗಜ್ಯೋತಿಷ್ಯಪ್ರಮುಖ

Astrology ನಾಳೆ ಶಿವಯೋಗ, ಸಿದ್ಧಿಯೋಗ: ಈ ಐದು ರಾಶಿಗಳ ಜನರಿಗೆ‌ ಬಂಪರ್ ಅದೃಷ್ಟ

4 Min Read
ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 19-07-2026, ಭಾನುವಾರ, ಇಂದು ನಿಮ್ಮ ಗ್ರಹಗತಿ ಹೇಗಿದೆ?

5 Min Read
ಈ ದಿನ

Ashada Friday Significance ಆಷಾಢ ಶುಕ್ರವಾರದ ವಿಶೇಷತೆ: ಪೂಜೆ, ಮಹತ್ವ ಮತ್ತು ಆಧ್ಯಾತ್ಮಿಕ ಫಲಗಳು

1 Min Read

Social Networks

Facebook-f Instagram Twitter
Welcome Back!

Sign in to your account

Lost your password?