https://youtube.com/shorts/qIu1k1AjcVg?si=asT_CsSQI4v14g8C
newsics.com
ಅಮೆರಿಕ-ಇಸ್ರೇಲ್-ಇರಾನ್ ಯುದ್ಧದ ವ್ಯಾಪ್ತಿ ವಿಸ್ತರಿಸುತ್ತಿರುವಂತೆ ಕಾಣುತ್ತಿದೆ. ಇದೀಗ ಸಂಘರ್ಷವು ಮತ್ತೊಂದು ಮಜಲಿಗೆ ತಿರುಗಿದೆ. ಇದರಿಂದ ಬಾಬ್ ಅಲ್ ಮಂಡೇಬ್’ ತೈಲ ಹಾಗೂ ಸರಕು ಸಾಗಣೆಯ ಪ್ರಮುಖ ಜಲಮಾರ್ಗವೂ ಮುಚ್ಚುವ ಸಾಧ್ಯತೆ ಇದೆ.
ಲೆಬನಾನ್ ಮತ್ತು ಇರಾಕ್‌ನಲ್ಲಿರುವ ಇರಾನ್‌ನ ಶಿಯಾ ಮಿತ್ರರಾಷ್ಟ್ರಗಳು ಈಗಾಗಲೇ ಪ್ರಾದೇಶಿಕ ಸಂಘರ್ಷದಲ್ಲಿ ಸೇರಿಕೊಂಡಿವೆ. ಈಗ, ಹೌತಿ ಹಸ್ತಕ್ಷೇಪದಿಂದ, ಬಾಬ್ ಎಲ್ ಮಂಡೇಬ್ ಸ್ಟ್ರೇಟ್ ಜಲಸಂಧಿ ಮುಚ್ಚುವ ಅಪಾಯವಿದೆ. ಬಾಬ್ ಎಲ್-ಮಂಡೇಬ್ ವಿಶ್ವದ ಪ್ರಮುಖ ಕಡಲ ಚೆಕ್‌ಪಾಯಿಂಟ್‌ಗಳಲ್ಲಿ ಒಂದಾಗಿದೆ, ಇದು ಯೆಮೆನ್ (ಅರೇಬಿಯನ್ ಪರ್ಯಾಯ ದ್ವೀಪ) ಮತ್ತು ಜಿಬೌಟಿ/ಎರಿಟ್ರಿಯಾ (ಆಫ್ರಿಕಾದ) ನಡುವೆ ಇದೆ. ಇದು ಕೆಂಪು ಸಮುದ್ರವನ್ನು ಅಡೆನ್ ಕೊಲ್ಲಿ ಮತ್ತು ಹಿಂದೂ ಮಹಾಸಾಗರಕ್ಕೆ ಸಂಪರ್ಕಿಸುತ್ತದೆ.
ಇದು ರೆಡ್ ಸೀ ಅಥವಾ ಕೆಂಪು ಸಮುದ್ರದಲ್ಲಿರುವ ಒಂದು ಕಿರಿದಾದ ಜಲಮಾರ್ಗ. ಈಜಿಪ್ಟ್ನ ಸೂಜ್ ಕೆನಾಲ್ಗೆ ಹೋಗಬೇಕಾದರೆ ಈ ಜಲಸಂಧಿ ಮೂಲಕವೇ ಹಡಗುಗಳು ಸಾಗಬೇಕು. ಕುತೂಹಲ ಎಂದರೆ ಈ ಬಾಬ್ ಎಲ್ ಮಂಡೇಬ್ ಎಂದರೆ ಅರೇಬಿಕ್ ಭಾಷೆಯಲ್ಲಿ ಕಣ್ಣೀರ ದ್ವಾರ. ಇದರ ಆಜುಬಾಜಿನಲ್ಲಿರುವ ದೇಶಗಳಲ್ಲಿ ಯೆಮೆನ್ ಕೂಡ ಒಂದು. ಈ ವಿಚಾರವೇ ಈಗ ಜಾಗತಿಕ ಭೀತಿಗೆ ಕಾರಣವಾಗಿರುವುದು.
ಯೆಮೆನ್ನಲ್ಲಿ ಇರಾನ್ ಬೆಂಬಲಿತ ಹೌತಿ ಬಂಡುಕೋರರ ಸಂಘಟನೆಯ ಉಪಸ್ಥಿತಿ ಇದೆ. ಇರಾನ್ ಸೂಚನೆ ಕೊಟ್ಟರೆ ಹೌತಿ ಬಂಡುಕೋರರು ಈ ಜಲಸಂಧಿಯಲ್ಲಿ ದಾಳಿ ಶುರು ಹಚ್ಚಿಕೊಳ್ಳಬಹುದು. ಬಾಬೆಲ್ ಮಂಡೆಬ್ ಜಲಸಂಧಿ ಬಹಳ ಮುಖ್ಯವಾದ ಟ್ರೇಡಿಂಗ್ ರೂಟ್ನಲ್ಲಿ ಇದೆ. ಇದಕ್ಕೆ ತಡೆ ಬಿದ್ದರೆ ಹಾರ್ಮುಜ್ ಜಲಸಂಧಿಗಿಂತಲೂ ಪರಿಣಾಮ ಘೋರವಾಗಿರುತ್ತದೆ.
ಹಾರ್ಮುಜ್ ಜಲಸಂಧಿಯಲ್ಲಿ ಬಹುತೇಕ ನೌಕೆಗಳು ತೈಲ ಸಾಗಣೆ ಮಾಡುತ್ತವೆ. ಆದರೆ, ಬಾಬೆಲ್ ಮಂಡೇಬ್ ಜಲಸಂಧಿ ಇನ್ನೂ ದೊಡ್ಡ ವ್ಯಾಪಾರ ಮಾರ್ಗಕ್ಕೆ ಬರುತ್ತದೆ. ತೈಲವಷ್ಟೇ ಅಲ್ಲ, ಹಲವು ಸರಕುಗಳ ಸಾಗಣೆಯಾಗುತ್ತದೆ.
ಇದು ಸೂಯೆಜ್ ಕಾಲುವೆಗೆ ಇರುವ ಏಕೈಕ ಸಮುದ್ರ ಮಾರ್ಗವಾಗಿದೆ ಮತ್ತು ಜಾಗತಿಕ ಕಡಲ ವ್ಯಾಪಾರದ ಶೇ 10-15 ರಷ್ಟು ಇದರ ಮೂಲಕ ಹಾದುಹೋಗುತ್ತದೆ. ಇರಾನ್ ಈಗಾಗಲೇ ಹಾರ್ಮುಜ್ ಜಲಸಂಧಿಯ ಮೇಲೆ ದಿಗ್ಬಂಧನವನ್ನು ವಿಧಿಸಿದೆ. ಹೌತಿಗಳು ಇದನ್ನು ಸಹ ಮುಚ್ಚಿದರೆ, ಅದು ದೊಡ್ಡ ಆರ್ಥಿಕ ಬಿಕ್ಕಟ್ಟನ್ನು ಉಂಟುಮಾಡಬಹುದು.