https://youtube.com/shorts/qIu1k1AjcVg?si=asT_CsSQI4v14g8C
newsics.com
ಬಂಗಾಳಿ ಖ್ಯಾತ ನಟ ರಾಹುಲ್ ಅರುಣೋದಯ್ ಬ್ಯಾನರ್ಜಿ ಒಡಿಶಾದ ತಲ್ಸಾರಿ ಬೀಚ್‌ನಲ್ಲಿ ಚಿತ್ರೀಕರಣ ನಡೆಸುತ್ತಿದ್ದರು, ಈ ವೇಳೆ ಸಮುದ್ರದ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಇನ್ನು ನಟ ರಾಹುಲ್ ಅರುಣೋದಯ್ ಬ್ಯಾನರ್ಜಿ ವೆಸ್ಟ್ ಬೆಂಗಾಲ್‌ನ ದಿಘಾ ಬಳಿಯ ತಲ್ಸಾರಿ ಬೀಚ್‌ನಲ್ಲಿ “ಭೋಲೆ ಬಾಬಾ ಪಾರ್ ಕರೇಗಾ” ಧಾರಾವಾಹಿಯ ಚಿತ್ರೀಕರಣದಲ್ಲಿದ್ದರು ಎಂದು ವರದಿಯಾಗಿದೆ. ಭಾನುವಾರ ಚಿತ್ರೀಕರಣದ ಸಮಯದಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಹಾಗೆಯೇ ನಟ ರಾಹುಲ್ ಅವರಿಗೆ ಕೇವಲ 43 ವರ್ಷ ವಯಸ್ಸಾಗಿತ್ತು ಎಂದು ಹೇಳಲಾಗುತ್ತಿದೆ.
ಘಟನೆ ಸಂಭವಿಸಿದ ಸಮಯದಲ್ಲಿ ಸ್ಥಳದಲ್ಲಿದ್ದ ತಂತ್ರಜ್ಞರು ಅವರನ್ನು ಹೊರತೆಗೆದು ತಕ್ಷಣ ಆಸ್ಪತ್ರೆಗೆ ಸಾಗಿಸಿದ್ದಾರೆ ಆದರೆ ಚಿಕಿತ್ಸೆ ಫಲಕಾರಿಯಾಗದೆ ನಟ ರಾಹುಲ್ ಕೊನೆಯುಸಿರೆಳೆದಿದ್ದಾರೆ..
ರಾಹುಲ್ ಅವರಿಗೆ ನಟನೆಯ ನಂಟು ಶುರುವಾಗಿದ್ದು ಬಾಲ್ಯದಿಂದಲೇ. ಕೇವಲ ಮೂರು ವರ್ಷದವರಿದ್ದಾಗ, ಅವರು ತಮ್ಮ ತಂದೆಯ ನಾಟಕ ತಂಡದ ಮೂಲಕ ರಂಗಪ್ರವೇಶ ಮಾಡಿದರು. ಅವರ ತಂದೆ ವಿಶ್ವನಾಥ್ ಬ್ಯಾನರ್ಜಿ ನಾಟಕ ತಂಡದ ನಿರ್ದೇಶಕರಾಗಿದ್ದರು. ರಾಹುಲ್ ತಮ್ಮ ಜೀವನದಲ್ಲಿ ಸುಮಾರು 450ಕ್ಕೂ ಹೆಚ್ಚು ರಂಗ ನಾಟಕಗಳಲ್ಲಿ ನಟಿಸಿದ್ದಾರೆ.
ಲವ್ ಸರ್ಕಸ್’, ‘ಶೋನೋ ಮಾನ್ ಬೋಲಿ ತೋಮಯ್’ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದರು. ಕಿರುತೆರೆಯಲ್ಲೂ ಅವರು ಅಷ್ಟೇ ಯಶಸ್ಸು ಗಳಿಸಿದ್ದರು.
ವೈಯಕ್ತಿಕ ಜೀವನದಲ್ಲಿ, ರಾಹುಲ್ ತಮ್ಮ ಸಹನಟಿ ಪ್ರಿಯಾಂಕಾ ಸರ್ಕಾರ್ ಅವರನ್ನು ಮದುವೆಯಾಗಿದ್ದರು. ಈ ದಂಪತಿಗೆ ಸಹಜ್ ಬ್ಯಾನರ್ಜಿ ಎಂಬ ಓರ್ವ ಮಗನಿದ್ದಾನೆ. 2017ರಲ್ಲಿ ಇಬ್ಬರೂ ವಿಚ್ಛೇದನ ಪಡೆದಿದ್ದರೂ, 2023ರಲ್ಲಿ ಮತ್ತೆ ಒಟ್ಟಿಗೆ ವಾಸಿಸಲು ಆರಂಭಿಸಿದ್ದರು. ರಾಹುಲ್ ಬ್ಯಾನರ್ಜಿ ಅವರ ಅಕಾಲಿಕ ನಿಧನದಿಂದ ಬಂಗಾಳಿ ಚಿತ್ರರಂಗದಲ್ಲಿ ಶೋಕದ ಛಾಯೆ ಆವರಿಸಿದೆ.