Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > 30ಕ್ಕೂ ಹೆಚ್ಚು ಅಪ್ರಾಪ್ತೆಯರ ಮೇಲೆ ಲೈಂಗಿಕ ದೌರ್ಜನ್ಯ: ಖಾಸಗಿ ವಿಡಿಯೋ ಬಳಸಿ ಸಂತ್ರಸ್ತ ಬಾಲಕಿಯರಿಗೆ ಬ್ಲ್ಯಾಕ್‌ಮೇಲ್
ದೇಶಪ್ರಮುಖ

30ಕ್ಕೂ ಹೆಚ್ಚು ಅಪ್ರಾಪ್ತೆಯರ ಮೇಲೆ ಲೈಂಗಿಕ ದೌರ್ಜನ್ಯ: ಖಾಸಗಿ ವಿಡಿಯೋ ಬಳಸಿ ಸಂತ್ರಸ್ತ ಬಾಲಕಿಯರಿಗೆ ಬ್ಲ್ಯಾಕ್‌ಮೇಲ್

Share
2 Min Read
SHARE

newsics.com

ಗೋವಾ :  ಕರ್ನಾಟಕದಲ್ಲಿ ಪ್ರಜ್ವಲ್ ರೇವಣ್ಣ ಪ್ರಕರಣ ಭಾರಿ ಕೋಲಾಹಲ ಸೃಷ್ಟಿಸಿತ್ತು. ಹಲವು ಮಹಿಳೆಯರ ಮೇಲೆ ಅತ್ಯಾ**ರ ಎಸಗಿ ವಿಡಿಯೋ ರೆಕಾರ್ಡ್ ಮಾಡಿದ್ದ ಪ್ರಕರಣ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು.

ಇದೇ ರೀತಿ ಬಿಜೆಪಿ ಮುಖಂಡನೊಬ್ಬನ ಪುತ್ರನ ಪ್ರಕರಣ ಬಯಲಾಗಿದೆ. 30 ಅಪ್ರಾಪ್ತ ಬಾಲಕಿಯರನ್ನು ಬಲವಂತವಾಗಿ ಕಾಮತೃಷೆಗೆ ಬಳಸಿಕೊಂಡಿದ್ದಾನೆ. ಈ ಕೃತ್ಯವನ್ನೇ ಈತನೇ ವಿಡಿಯೋ ಮಾಡಿ ಬಳಿಕ ಬ್ಲಾಕ್‌ಮೇಲ್ ಮಾಡುವ, ಬೆದರಿಸುವ ತಂತ್ರ ಪ್ರಯೋಗಿಸಿ ಕಳೆದ ಮೂರು ವರ್ಷದಿಂದ ರಾಜಾರೋಷವಾಗಿ ತಿರುಗಾಡುತ್ತಿದ್ದ ಕಾಮುಕ ಆರೋಪಿಯನ್ನು ಅರೆಸ್ಟ್ ಮಾಡಿದ ಘಟನೆ ಗೋವಾದಲ್ಲಿ ನಡೆದಿದೆ..

ಬಂಧಿತ ಯುವಕನನ್ನು 20 ವರ್ಷದ ಸೋಹಮ್ ಸುಶಾಂತ್ ನಾಯ್ಕ್ ಎಂದು ಗುರುತಿಸಲಾಗಿದೆ. ಈ ಪ್ರಕರಣದ ವಿವರವಾದ ತನಿಖೆಗಾಗಿ ಈ ಪ್ರಕರಣವನ್ನು ಈಗ ಗೋವಾದ ಅಪರಾಧ ಶಾಖೆಗೆ ವರ್ಗಾಯಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಮೂರು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಸಂತ್ರಸ್ತರ ಹೇಳಿಕೆಗಳನ್ನು ದಾಖಲಿಸಲಾಗಿದ್ದು, ಆರೋಪಿಗಳು ಹಾಗೂ ಸಂತ್ರಸ್ತರು ಇಬ್ಬರೂ ಘಟನೆ ನಡೆದ ಸಮಯದಲ್ಲಿ ಅಪ್ರಾಪ್ತರಾಗಿದ್ದರು ಎಂಬುದು ತನಿಖೆಯಿಂದ ತಿಳಿದು ಬಂದಿದೆ. ಪ್ರಕರಣವು ಮೂರು ವರ್ಷಗಳ ಹಿಂದೆ ಕಾಲೇಜಿನಲ್ಲಿ ಓದುತ್ತಿದ್ದಾಗ ನಡೆದಿದೆ ಎನ್ನಲಾಗಿದೆ. ಆರೋಪಿ ಸೋಹಮ್ ಸುಶಾಂತ್ ನಾಯ್ಕ್ ಕಾಕೋರಾದ ಮಧೇಗಲ್ ನಿವಾಸಿ ಮತ್ತು ಕರ್ಚೋರೆಮ್ ಕಾಕೋರಾ ಮುನ್ಸಿಪಲ್ ಕೌನ್ಸಿಲ್‌ನ ಕೌನ್ಸಿಲರ್ ಒಬ್ಬರ ಪುತ್ರನಾಗಿದ್ದಾನೆ.

ಗೆಳೆಯರೊಂದಿಗೆ ಪಾರ್ಟಿ, ಸುತ್ತಾಟ , ಅಪ್ರಾಪ್ತ ಬಾಲಕಿಯನ್ನು ಬೆದರಿಸಿ ತನ್ನ ಕಾಮತೃಷೆಗೆ ಬಳಸಿಕೊಳ್ಳುತ್ತಿರುವುದೇ ಈತನ ಹವ್ಯಾಸವಾಗಿತ್ತು. ಕಳೆದ ಮೂರು ವರ್ಷದಿಂದ ಈತ ಇದನ್ನೇ ವೃತ್ತಿಯಾಗಿ ಸ್ವೀಕರಿಸಿದ್ದ. ಕಳೆದ ವಾರ ಮದ್ಯದ ನಶೆಯಲ್ಲಿ ಗೆಳೆಯರಿಗೆ ತನ್ನ ಕೆಲ ವಿಡಿಯೋಗಳನ್ನು ಫಾರ್ವಡ್ ಮಾಡಿದ್ದ. ಹೀಗೆ ಫಾರ್ವಡ್ ಮಾಡಿದ ಬೆನ್ನಲ್ಲೇ ವಿಡಿಯೋಗಳು ವ್ಯಾಟ್ಸಾಪ್ ಮೂಲಕ ಹರಿದಾಡಲು ಆರಂಭಗೊಂಡಿತ್ತು. ಇದು ಸಾರ್ವಜನಿಕ ವಲಯದಲ್ಲಿ ಆತಂಕ ತಂದಿತ್ತು. ಹಲವು ಅಪ್ರಾಪ್ತ ಬಾಲಕಿಯರು ಈತನ ಕಾಮಕ್ಕೆ ಬಲಿಯಾಗಿದ್ದರು

ಅಪ್ರಾಪ್ತೆಯರ ಲೈಂಗಿಕ ಶೋಷಣೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾದ ನಂತರ ಆತನನ್ನು ಬಂಧಿಸಲಾಗಿದೆ. ಸ್ಥಳೀಯರು ಪೊಲೀಸ್ ಠಾಣೆಯ ಹೊರಗೆ ಜಮಾಯಿಸಿ ತಕ್ಷಣ ಆತನ ವಿರುದ್ಧಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದರು. ಆರಂಭದಲ್ಲಿ ಈತನ ವಿರುದ್ಧ ಒಂದು ಪ್ರಕರಣ ದಾಖಲಾಗಿತ್ತು. ನಂತರದ ಹೇಳಿಕೆಗಳ ಆಧಾರದ ಮೇಲೆ ಇನ್ನೂ ಎರಡು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ದಕ್ಷಿಣ ಗೋವಾ ಎಸ್‌ಪಿ ಸಂತೋಷ್ ದೇಸಾಯಿ ತಿಳಿಸಿದ್ದಾರೆ. ರಾಜ್ಯದ ಪರವಾಗಿ ಮೊದಲ ಎಫ್‌ಐಆರ್ ದಾಖಲಿಸಲಾಗಿದೆ. ಪ್ರಸ್ತುತ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಇತರ ಹಲವರನ್ನು ಸಹ ವಿಚಾರಣೆ ನಡೆಸಲಾಗುತ್ತಿದೆ.

ತನಿಖೆಯನ್ನು ಪರಿಶೀಲಿಸಿದ ಉಪ ಪೊಲೀಸ್ ಮಹಾನಿರ್ದೇಶಕಿ ವರ್ಷಾ ಶರ್ಮಾ, ಸಂತ್ರಸ್ತರ ಹೇಳಿಕೆಯ ಆಧಾರದ ಮೇಲೆ ಹೆಚ್ಚುವರಿ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಆರೋಪಿಯ ಮೊಬೈಲ್ ಫೋನ್ ಅನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಹೇಳಿದರು.

 

https://www.newsics.com/2026/03/27/bus-accident-mother-burns-after-throwing-son-out-of-window/

TAGGED:Sexual assault on more than 30 minors
Share This Article
Facebook Twitter Copy Link Print
Previous Article ಬಸ್‌ ದುರಂತ: ಮಗನನ್ನು ಕಿಟಕಿಯಿಂದ ಹೊರದೂಡಿ ಬೆಂಕಿಗೆ ಆಹುತಿಯಾದ ತಾಯಿ!
Next Article ಡೀಸೆಲ್ ಮೇಲಿನ ಸುಂಕ ಶೂನ್ಯ: ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ

Popular Posts

ನಾಳೆ NEET-UG ಮರುಪರೀಕ್ಷೆ: ಇಂದು ದೇಶವ್ಯಾಪಿ ಮೆಗಾ ಮಾಕ್‌ಡ್ರಿಲ್‌, 15,000 ಅರೆಸೈನಿಕ ಸಿಬ್ಬಂದಿಯಿಂದ ಭದ್ರತೆ

1 Min Read

ಕುಂಭಮೇಳದಲ್ಲಿ ವೈರಲ್ ಆಗಿದ್ದ ಯುವತಿಗೆ ಕೇರಳ ಹೈಕೋರ್ಟ್ ರಕ್ಷಣೆ; ಪತಿಯ ವಿರುದ್ಧದ ಅಪಹರಣ ಪ್ರಕರಣದ ನಡುವೆಯೇ ಮಹತ್ವದ ಆದೇಶ

2 Min Read

ಐಟಿ ಷೇರುಗಳಲ್ಲಿ ಭಾರಿ ಕುಸಿತ: ಕೆಲವೇ ನಿಮಿಷಗಳಲ್ಲಿ ಹೂಡಿಕೆದಾರರಿಗೆ ₹2 ಲಕ್ಷ ಕೋಟಿ ನಷ್ಟ!

1 Min Read

ರಾಷ್ಟ್ರಪತಿ ದ್ರೌಪದಿ ಮುರ್ಮು ಜೀವನ ಆಧಾರಿತ ಡಾಕ್ಯುಮೆಂಟರಿ ಮಾಡಲು ಮುಂದಾದ ಆಮಿರ್ ಖಾನ್

2 Min Read

You Might Also Like

ಕರ್ನಾಟಕಪ್ರಮುಖ

ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಫೇಸ್ 3 ಯೋಜನೆ : 3,627 ಮರಗಳ ಮಾರಣಹೋಮಕ್ಕೆ ಶೀಘ್ರವೇ ಮುಹೂರ್ತ ಫಿಕ್ಸ್.!

1 Min Read
ಪ್ರಮುಖಕರ್ನಾಟಕಮನರಂಜನೆ

ಕರಾವಳಿ – ಮಲೆನಾಡು ಪ್ರವಾಸೋದ್ಯಮ ಬ್ರಾಂಡ್‌ ಅಂಬಾಸಿಡರ್‌ ಆಗಿ ರಿಷಬ್‌ ಶೆಟ್ಟಿ ನೇಮಕ

2 Min Read
ಪ್ರಮುಖಪ್ರಮುಖ

ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ, ಖಾಸಗಿ ಭಾಗಕ್ಕೆ ಮರದ ತುಂಡು ತುಂಬಿ ವಿಕೃತಿ

2 Min Read
ಕರ್ನಾಟಕಪ್ರಮುಖ

Effect of Cross Voting ಶಿಸ್ತಿನ ಪಕ್ಷ ಎಂದೇ ಖ್ಯಾತಿ ಪಡೆದಿರುವ ಬಿಜೆಪಿಯಲ್ಲಿ ಏನಾಗಿದೆ?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?