https://youtube.com/shorts/mi9ZHeAq9YU?si=AFQw5PdOpVrb1FjB
newsics.com
ಮಧ್ಯಪ್ರಾಚ್ಯ ದೇಶಗಳಲ್ಲಿ ನಡೆಯುತ್ತಿರುವ ಯುದ್ಧದ ಕಾರ್ಮೋಡ ಈಗ ಭಾರತದ ವಾಹನ ಸವಾರರ ಜೇಬಿಗೆ ತಟ್ಟಲು ಶುರುವಾಗಿದೆ. ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಏರುಪೇರಾಗುತ್ತಿರುವ ಬೆನ್ನಲ್ಲೇ, ಖಾಸಗಿ ತೈಲ ಕಂಪನಿಯಾದ ‘ನಯಾರಾ ಎನರ್ಜಿ’ ಪೆಟ್ರೋಲ್, ಡೀಸೆಲ್ ದರವನ್ನು ಏರಿಕೆ ಮಾಡುವ ಮೂಲಕ ಬಿಗ್ ಶಾಕ್ ನೀಡಿದೆ.
ದೇಶದ ಅತಿದೊಡ್ಡ ಖಾಸಗಿ ಇಂಧನ ಚಿಲ್ಲರೆ ಮಾರಾಟ ಸಂಸ್ಥೆಯಾದ ‘ನಯಾರಾ ಎನರ್ಜಿ’ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಹೆಚ್ಚಿಸಿದೆ. ಕಂಪನಿಯು ಪೆಟ್ರೋಲ್ ಬೆಲೆಯನ್ನು ಪ್ರತಿ ಲೀಟರ್’ಗೆ 5.30 ರೂ. ಮತ್ತು ಡೀಸೆಲ್ ಬೆಲೆಯನ್ನು ಪ್ರತಿ ಲೀಟರ್’ಗೆ 3 ರೂ. ಏರಿಕೆ ಮಾಡಿದೆ.
ದೇಶಾದ್ಯಂತ 6,500ಕ್ಕೂ ಹೆಚ್ಚು ಪೆಟ್ರೋಲ್ ಬಂಕ್ಗಳು: ನಯಾರಾ ಎನರ್ಜಿ ಸಂಸ್ಥೆಯು ವಾರ್ಷಿಕ 20 ಮಿಲಿಯನ್ ಟನ್ ಸಾಮರ್ಥ್ಯದೊಂದಿಗೆ ಭಾರತದ ಎರಡನೇ ಅತಿದೊಡ್ಡ ಸಿಂಗಲ್ ಸೈಟ್ ರಿಫೈನರಿಯಾದ ‘ವಡಿನಾರ್ ಆಯಿಲ್ ರಿಫೈನರಿ’ಯನ್ನು ನಿರ್ವಹಿಸುತ್ತಿದೆ. ನಯಾರಾ ಕಂಪನಿಯು ದೇಶಾದ್ಯಂತ 6,500ಕ್ಕೂ ಹೆಚ್ಚು ಪೆಟ್ರೋಲ್ ಬಂಕ್ಗಳನ್ನು ಹೊಂದಿದೆ. ಕಳೆದ ವರ್ಷವಷ್ಟೇ 4,50,000 ಟನ್ ಸಾಮರ್ಥ್ಯದ ಪಾಲಿಪ್ರೊಪಿಲೀನ್ ಪ್ಲಾಂಟ್ನೊಂದಿಗೆ ಪೆಟ್ರೋಕೆಮಿಕಲ್ಸ್ ಕ್ಷೇತ್ರಕ್ಕೆ ಕಂಪನಿ ಪ್ರವೇಶಿಸಿತ್ತು. ನಯಾರಾ ಎನರ್ಜಿಯನ್ನು ಈ ಹಿಂದೆ ‘ಎಸ್ಸಾರ್ ಆಯಿಲ್’ (Essar Oil) ಎಂದು ಕರೆಯಲಾಗುತ್ತಿತ್ತು.