Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Horse riding ಪೆಟ್ರೋಲ್ ಸಿಗದೆ ಕುದುರೆ ಏರಿ ಬಂದ ಬ್ಯಾಂಕ್ ಉದ್ಯೋಗಿ!
ದೇಶಪ್ರಮುಖ

Horse riding ಪೆಟ್ರೋಲ್ ಸಿಗದೆ ಕುದುರೆ ಏರಿ ಬಂದ ಬ್ಯಾಂಕ್ ಉದ್ಯೋಗಿ!

Share
2 Min Read
SHARE

newsics.com

ಭೋಪಾಲ್​ (ಮಧ್ಯಪ್ರದೇಶ): ಏನೂ ಸಮಸ್ಯೆ ಇಲ್ಲ ಎಂದು ಕೇಂದ್ರ ಸರ್ಕಾರ ಎಷ್ಟೇ ಸಮಜಾಯಿಸಿ ನೀಡಿದರೂ, ಮಧ್ಯಪ್ರಾಚ್ಯ ಸಂಘರ್ಷದಿಂದ ದೇಶದಲ್ಲಿ ಇಂಧನ ಕೊರತೆ ಉಂಟಾಗಿರುವುದಂತೂ ಸತ್ಯ.

ಪೆಟ್ರೋಲ್​ ಪಂಪ್​ಗಳ ಮುಂದೆ ಜನರು ಸರತಿ ಸಾಲಿನಲ್ಲಿ ನಿಂತು ಇಂಧನ ತುಂಬಿಸಿಕೊಳ್ಳುತ್ತಿದ್ದಾರೆ. ಕೆಲವೆಡೆ ಸಿಗದ ಕಾರಣ ವಾಹನ ಬಳಕೆಯನ್ನು ನಿಲ್ಲಿಸುವಂತಾಗಿದೆ. ಹೀಗೆ, ಪೆಟ್ರೋಲ್​ ಲಭ್ಯವಿಲ್ಲದ ಕಾರಣ ಬ್ಯಾಂಕ್​ ಉದ್ಯೋಗಿಯೊಬ್ಬ ಕುದುರೆ ಏರಿ ಕೆಲಸಕ್ಕೆ ಹಾಜರಾಗಿದ್ದಾನೆ.

ಖಾಸಗಿ ಬ್ಯಾಂಕಿನ ಕಲೆಕ್ಷನ್​ ಏಜೆಂಟ್ ಗೋಪಾಲ್ ಠಾಕೂರ್ ಎಂಬುವರು ಬೈಕ್‌ ಬಿಟ್ಟು ತಮ್ಮಲ್ಲಿದ್ದ ಕುದುರೆಯನ್ನು ಏರಿ ಆಫೀಸ್​ಗೆ ಬಂದಿದ್ದಾರೆ. ಟಿಪ್​ಟಾಪ್​ ಆಗಿ ರೆಡಿಯಾಗಿದ್ದ ಗೋಪಾಲ್​ ಅವರು ಕುದುರೆ ಮೇಲೆ ಸವಾರಿ ಮಾಡಿಕೊಂಡು ಹೋಗುತ್ತಿರುವುದನ್ನು ಜನರು ವಿಡಿಯೋ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.

ದೇವಾಸ್​ ಜಿಲ್ಲೆಯ ರಾಧಾಗಂಜ್ ನಿವಾಸಿಯಾಗಿರುವ ಠಾಕೂರ್ ಅವರು ಜವಾಹರ್ ನಗರ ಶಾಖೆಯ ತಮ್ಮ ಕಚೇರಿಗೆ ಬೈಕ್​ನಲ್ಲಿ ಬರುತ್ತಾರೆ. ಪೆಟ್ರೋಲ್​ ಹಾಸಿಕೊಳ್ಳಲು ಉದ್ದನೆಯ ಸಾಲಿನಲ್ಲಿ ನಿಲ್ಲಬೇಕು. ಇದರಿಂದ ಸಮಯಕ್ಕೆ ಸರಿಯಾಗಿ ಆಫೀಸ್​​ಗೆ ಹೋಗಲು ಸಾಧ್ಯವಿಲ್ಲ ಎಂದರಿತ ಅವರು, ಖರ್ಚು ಮತ್ತು ಟ್ರಾಫಿಕ್​ ಸಮಸ್ಯೆ ಇಲ್ಲದ ಕುದುರೆ ಸವಾರಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ತಮ್ಮ ಮನೆಯಿಂದ ಮೂರು ಕಿಲೋ ಮೀಟರ್​ ದೂರ ಕುದುರೆಯಲ್ಲಿ ಬಂದಿದ್ದಾರೆ. ದಾರಿ ನಡುವೆ ಇದನ್ನು ಕಂಡ ಜನರು ಅಚ್ಚರಿಗೊಂಡಿದ್ದಾರೆ. ಇನ್ನು ಕೆಲವರು ವಿಡಿಯೋ ಮಾಡಿಕೊಂಡು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಆಫೀಸ್​ ತಲುಪಿದ ಬಳಿಕ ಸಹೋದ್ಯೋಗಿಗಳು ಕೂಡ ಅಚ್ಚರಿ ವ್ಯಕ್ತಪಡಿಸಿ ನಗೆ ಬೀರಿದ್ದಾರೆ.

ಗಂಟೆಗಟ್ಟಲೆ ಸಾಲಿನಲ್ಲಿ ನಿಲ್ಲಬೇಕಿದೆ:

ಆಫೀಸಿಗೆ ಕುದುರೆ ಏರಿ ಬಂದ ಬಗ್ಗೆ ಗೋಪಾಲ್​ ಠಾಕೂರ್ ಮಾತನಾಡಿ, “ಪೆಟ್ರೋಲ್​ ಪಂಪ್​ಗಳು ಜನರಿಂದ ತುಂಬಿವೆ. ಉದ್ದನೆಯ ಸಾಲಿನಲ್ಲಿ ಗಂಟೆಗಟ್ಟಲೆ ನಿಲ್ಲಬೇಕು. ಇದರಿಂದ ಸಮಯಕ್ಕೆ ಸರಿಯಾಗಿ ಆಫೀಸಿಗೆ ಹೋಗಲು ಸಾಧ್ಯವಿಲ್ಲ ಎಂದರಿತು, ಕುದುರೆ ಏರಿ ಬಂದೆ. ಸಂಚಾರದಟ್ಟಣೆ, ಇಂಧನ ಖರ್ಚು ಮತ್ತು ಆಫೀಸಿಗೆ ಗೈರಾಗುವುದನ್ನು ತಪ್ಪಿಸಿದೆ” ಎಂದರು.

ಇರಾನ್, ಅಮೆರಿಕ ಮತ್ತು ಇಸ್ರೇಲ್ ಯುದ್ಧದ ಪರಿಣಾಮವಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂಧನ ಕೊರತೆಯ ಬಗ್ಗೆ ವ್ಯಾಪಕ ವದಂತಿ ಹರಡಿ ಜನರು ಪೆಟ್ರೋಲ್​ ಬಂಕ್​ಗಳ ಮುಂದೆ ಜಮಾಯಿಸುವಂತೆ ಮಾಡಿದೆ.

ಬಂಕ್​ಗಳ ಮುಂದೆ ರಾತ್ರಿಪೂರ್ತಿ ಜನರು ಸರತಿ ಸಾಲಿನಲ್ಲಿ ನಿಂತು ಸಿಕ್ಕ ಸಿಕ್ಕ ವಸ್ತುಗಳಲ್ಲಿ ಇಂಧನ ತುಂಬಿಸಿಕೊಂಡು ಹೋಗಿದ್ದಾರೆ. ಕೆಲವೆಡೆ ದೊಡ್ಡ ಸಾಲು ನಿಯಂತ್ರಿಸಲು ಪೊಲೀಸರು ಹರಸಾಹಪಟ್ಟಿದ್ದಾರೆ. ಇಂಧನ ಕೊರತೆ ಉಂಟಾಗಿಲ್ಲ, ದಾಸ್ತಾನು ಸಾಕಷ್ಟಿದೆ. ಭೀತಿಗೆ ಒಳಗಾಗಬೇಡಿ ಎಂದು ಸರ್ಕಾರ ಮತ್ತು ತೈಲ ಕಂಪನಿಗಳು ಹೇಳುತ್ತಿದ್ದರೂ ಜನರು ಮಾತ್ರ ಬಂಕ್​ಗಳತ್ತ ದೌಡಾಯಿಸಿ ಬರುತ್ತಿದ್ದಾರೆ.

Professor’s propose ಕಾಲೇಜು ಆವರಣದಲ್ಲೇ ವಿದ್ಯಾರ್ಥಿನಿಗೆ ಪ್ರೊಫೆಸರ್ ಪ್ರಪೋಸ್: ಗೃಹಸಚಿವ ಪರಮೇಶ್ವರ ಒಡೆತನದ ಕಾಲೇಜಲ್ಲಿ ವಿದ್ಯಾರ್ಥಿಗಳಿಂದ ದಾಂದಲೆ

ಅನಿಲ ಅಭಾವ: ಹೆಚ್ಚುವರಿ ಹಣ ವಸೂಲಿ ಮಾಡದಂತೆ ಹೋಟೆಲ್‌ಗಳಿಗೆ ಕೇಂದ್ರ ಸರ್ಕಾರ ಸೂಚನೆ

Lockdown info ದೇಶದಲ್ಲಿ ಲಾಕ್‌ಡೌನ್: ಕೇಂದ್ರ ಸರ್ಕಾರ ಹೇಳಿದ್ದೇನು?

 

TAGGED:Bank employee rides horse after not getting petrol!
Share This Article
Facebook Twitter Copy Link Print
Previous Article ಭಾರತ ಸೇರಿ ಮಿತ್ರ ರಾಷ್ಟ್ರಗಳಿಗೆ ಹೊರ್ಮುಜ್ ಮುಕ್ತ ಎಂದ ಇರಾನ್ ಅಧಿಕೃತ ಹೇಳಿಕೆ
Next Article 22 ರಾಜ್ಯಗಳಲ್ಲಿ ಇನ್ನೆರಡು ದಿನ ಭಾರೀ ಮಳೆ, ಹವಾಮಾನ ಇಲಾಖೆ ಸೂಚನೆ

Popular Posts

CM ವಿಜಯ್‌ ನೇತೃತ್ವದ TVK ಶಾಸಕಿಗೆ ಭಾರೀ ಅವಮಾನ; ನಡೆದಿದ್ದೇನು?

1 Min Read

ವಿದೇಶಿ ಉಗ್ರನ ಜೊತೆ ನಂಟು ಹೊಂದಿದ್ದ ಆರೋಪದಲ್ಲಿ ಯುವಕನ ಬಂಧನ

2 Min Read

Elephant attack ಆನೆ ದಾಳಿಗೆ ನಿವೃತ್ತ ಐಪಿಎಸ್ ಅಧಿಕಾರಿ‌ ಪತ್ನಿ ಬಲಿ

1 Min Read

ರಾಜ್ಯ ಸರ್ಕಾರಿ ನೌಕರರು ಬೆಳಗ್ಗೆ 10 ಗಂಟೆಯೊಳಗೆ ಕಚೇರಿಗೆ ಹಾಜರಾಗುವುದು ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ

2 Min Read

You Might Also Like

ಪ್ರಮುಖಕರ್ನಾಟಕ

Train tragedy ಚಲಿಸುತ್ತಿದ್ದ ರೈಲು ಹತ್ತಲು ಯತ್ನಿಸಿದ ಯುವಕ ಸಾವು

1 Min Read
ಕರ್ನಾಟಕದೇಶಪ್ರಮುಖ

FSSAI Vegan logo ಸಸ್ಯಾಹಾರಿ ಆಹಾರ ಪ್ಯಾಕೆಟ್‌ ಗಳ ಮೇಲೆ FSSAI ಲೋಗೋ ಕಡ್ಡಾಯ

1 Min Read
ದೇಶಪ್ರಮುಖವೈರಲ್

ಮಾಜಿ ಪ್ರೇಯಸಿಗೆ 20 ಬಾರಿ ಇರಿದು ಕೊಂದು, ತಾನೂ ಆತ್ಮಹತ್ಯೆಗೆ ಯತ್ನಿಸಿದ ಪಾಗಲ್ ಪ್ರೇಮಿ : ವೈರಲ್ ವಿಡಿಯೋ ನೋಡಿ

1 Min Read
ಕರ್ನಾಟಕದೇಶಪ್ರಮುಖ

Gold-Silver Price Today ಚಿನ್ನ ಬೆಳ್ಳಿ ದರದಲ್ಲಿ ಇಳಿಕೆ : ಇಂದಿನ ಬೆಲೆ ಎಷ್ಟು?

1 Min Read

Social Networks

Facebook-f Instagram Twitter
Welcome Back!

Sign in to your account

Lost your password?