Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಗರ್ಲ್​ಫ್ರೆಂಡ್ ಕೈಯಿಂದಲೇ ಹತ್ಯೆಯಾದ 18 ಮಕ್ಕಳ ತಂದೆ
ದೇಶಪ್ರಮುಖ

ಗರ್ಲ್​ಫ್ರೆಂಡ್ ಕೈಯಿಂದಲೇ ಹತ್ಯೆಯಾದ 18 ಮಕ್ಕಳ ತಂದೆ

Share
2 Min Read
SHARE

https://youtube.com/shorts/8vXYZAagRTI?si=TOMvue_f8l6FavIl

newsics.com

ಉತ್ತರ ಪ್ರದೇಶದ ಪ್ರತಾಪ್‌ಗಢದಲ್ಲಿ ಮಾಜಿ ಗ್ರಾಮ ಮುಖ್ಯಸ್ಥರಾದ ಗುಲ್ಶನ್ ಅವರನ್ನು ಅವರ ಪ್ರೇಯಸಿ ಸುಮನ್ ಮತ್ತು ಆಕೆಯ ಸಹಚರರು ಹತ್ಯೆ ಮಾಡಿದ್ದಾರೆ. 18 ಮಕ್ಕಳ ತಂದೆಯಾಗಿದ್ದ ಗುಲ್ಶನ್ ಶವವನ್ನು ಕಾಲುವೆಯಲ್ಲಿ ಚೀಲದಲ್ಲಿ ಪತ್ತೆ ಮಾಡಲಾಗಿದೆ.

ಕೊಲೆಯಾದ ವ್ಯಕ್ತಿಯನ್ನು ಮುಸ್ತಕಾ ಗುಲ್ಶನ್ ಅಲಿಯಾಸ್ ಮುನ್ನಾ (50) ಎಂದು ಗುರುತಿಸಲಾಗಿದೆ. ಈತ ಸ್ಥಳೀಯವಾಗಿ ಮಾಜಿ ಗ್ರಾಮ ಪ್ರಧಾನನಾಗಿ ಗುರುತಿಸಿಕೊಂಡಿದ್ದನು. ವಿಶೇಷವೆಂದರೆ ಮುನ್ನಾ ಸಂಸಾರ ಬಹಳ ದೊಡ್ಡದಾಗಿತ್ತು. ಇಬ್ಬರು ಪತ್ನಿಯರಾದ ಕಿಸ್ಮತುಲ್ ನಿಶಾ ಮತ್ತು ಅಂಬಿಯಾ ಬಾನೊ ಅವರೊಂದಿಗೆ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ಪ್ರತಿಯೊಬ್ಬ ಪತ್ನಿಯಿಂದ ತಲಾ ಒಂಬತ್ತರಂತೆ ಒಟ್ಟು 18 ಮಕ್ಕಳನ್ನು ಈತ ಹೊಂದಿದ್ದನು. ಹತ್ತು ವರ್ಷಗಳ ಅಂತರದಲ್ಲಿ ಇಬ್ಬರನ್ನೂ ಮದುವೆಯಾಗಿದ್ದ ಈತನಿಗೆ ಆರು ಜನ ಗಂಡು ಮಕ್ಕಳೂ ಸೇರಿ ದೊಡ್ಡ ಕುಟುಂಬವಿತ್ತು.

ಈ ಕೊಲೆಯನ್ನು ಮೃತ ವ್ಯಕ್ತಿಯ ಗೆಳತಿ ಸುಮನ್ ಮತ್ತು ಆಕೆಯ ಸಹಚರರು ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತನಿಖಾಧಿಕಾರಿಗಳ ಪ್ರಕಾರ, ಗುಲ್ಶನ್ ತಲೆಗೆ ರಾಡ್‌ನಿಂದ ಹಲ್ಲೆ ನಡೆಸಲಾಗಿದ್ದು, ಇದು ಅವರ ಸಾವಿಗೆ ಕಾರಣ ಎನ್ನಲಾಗಿದೆ.

ಇಷ್ಟು ದೊಡ್ಡ ಕುಟುಂಬವಿದ್ದರೂ ಮುನ್ನಾ ಅವರಿಗೆ ಸುಮನ್ ಎಂಬ ಮಹಿಳೆಯೊಂದಿಗೆ ಅನೈತಿಕ ಸಂಬಂಧವಿತ್ತು. ಕಳೆದ ಕೆಲವು ಸಮಯದಿಂದ ಸುಮನ್ ಮತ್ತು ಮುನ್ನಾ ನಡುವೆ ಭಿನ್ನಾಭಿಪ್ರಾಯ ಮೂಡಿತ್ತು. ಪೊಲೀಸರ ಪ್ರಕಾರ, ಮುನ್ನಾ ಪದೇ ಪದೇ ಸುಮನ್ ಅವರಿಗೆ ಕಿರುಕುಳ ನೀಡುತ್ತಿದ್ದನು ಮತ್ತು ತನ್ನನ್ನು ಭೇಟಿಯಾಗುವಂತೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದನು. ಇದರಿಂದ ರೋಸಿಹೋಗಿದ್ದ ಸುಮನ್, ಮುನ್ನಾ ಅನಿಷ್ಟವನ್ನು ತೊಡೆದುಹಾಕಲು ನಿರ್ಧರಿಸಿದ್ದಳು.

ಮಾರ್ಚ್ 18 ರಂದು ಸುಮನ್ ತನ್ನ ತವರು ಮನೆಗೆ ಬಂದಿದ್ದಾಗ, ಮುನ್ನಾ ಅಲ್ಲಿಗೂ ಅವಳನ್ನು ಭೇಟಿಯಾಗಲು ಹೋಗಿದ್ದನು. ಈ ವೇಳೆ ಇಬ್ಬರ ನಡುವೆ ಜೋರಾಗಿ ಜಗಳ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿದಾಗ ಸುಮನ್ ತನ್ನ ಸಹಚರರೊಂದಿಗೆ ಸೇರಿ ಮುನ್ನಾ ತಲೆಗೆ ಕಬ್ಬಿಣದ ಸಲಾಕೆಯಿಂದ ಬಲವಾಗಿ ಹೊಡೆದಿದ್ದಾಳೆ. ತೀವ್ರ ರಕ್ತಸ್ರಾವದಿಂದ ಮುನ್ನಾ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸಾಕ್ಷ್ಯ ನಾಶಪಡಿಸಲು ಆರೋಪಿಗಳು ಶವವನ್ನು ಗೋಣಿ ಚೀಲದಲ್ಲಿ ತುಂಬಿ ಹತ್ತಿರದ ಕಾಲುವೆಯ ಬಳಿ ಎಸೆದಿದ್ದರು.

ಸದ್ಯ ಪ್ರಮುಖ ಆರೋಪಿ ಸುಮನ್ ಪೊಲೀಸರ ವಶದಲ್ಲಿದ್ದು, ಕೊಲೆಯಲ್ಲಿ ಭಾಗಿಯಾಗಿದ್ದ ಇತರ ಸಹಚರರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

https://www.newsics.com/2026/03/25/euthanasia-mother-witnesses-ranas-final-moments-of-agony/

TAGGED:Father of 18 murdered by girlfriend
Share This Article
Facebook Twitter Copy Link Print
Previous Article ದಯಾಮರಣ: ರಾಣಾ ನರಕಯಾತನೆಯ ಅಂತಿಮ ಕ್ಷಣಕ್ಕೆ ಸಾಕ್ಷಿಯಾದ ತಾಯಿ
Next Article ಜ್ಯೂನಿಯರ್ ವೈದ್ಯನ ಪ್ರೇಮ ಪಾಶಕ್ಕೆ ಸಿಲುಕಿ 12 ವರ್ಷಗಳ ಜೀವಂತ ಶವವಾಗಿದ್ದ ವೈದ್ಯೆ ಸಾವು

Popular Posts

ನಟ ದರ್ಶನ್ ಪತ್ನಿ, ವಿಜಯಲಕ್ಷ್ಮಿ ಬಾಸ್ ಚಿತ್ರದ ವಿರುದ್ಧ ಕಾನೂನು ಹೋರಾಟಕ್ಕೆ ಇಳಿದಿದ್ದು ಯಾಕೆ?

2 Min Read

ಅಯೋಧ್ಯೆಯ ರಾಮ ಮಂದಿರ ದೇಣಿಗೆ ವಿವಾದ ; 1250 ಚಿನ್ನ, ವಜ್ರಗಳಿಂದ ಅಲಂಕರಿಸಿದ ಇಟ್ಟಿಗೆಗಳು ನಾಪತ್ತೆ!

2 Min Read

Modi -Trump face off 16 ತಿಂಗಳ ಬಳಿಕ ಮೋದಿ- ಟ್ರಂಪ್‌ ಮುಖಾಮುಖಿ: ಮಾತಾಡಿದ್ದೇನು? ಹೇಳಿದ್ದೇನು?

3 Min Read

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 17-6-2026, ಬುಧವಾರ, ಇಂದು‌ ಹೇಗಿದೆ ನಿಮ್ಮ ಅದೃಷ್ಟ?

4 Min Read

You Might Also Like

ಕರ್ನಾಟಕಪ್ರಮುಖ

Elephant in garbage dump ಎಂಎಂ ಹಿಲ್ಸ್‌ನ ಕಸದ ರಾಶಿಯಲ್ಲಿ ಆಹಾರ ಅರಸುತ್ತಿದೆ ಈ ಆನೆ! ವೈರಲ್ ವಿಡಿಯೋ ನೋಡಿ

1 Min Read
ಪ್ರಮುಖ

ಕಲಿಯುಗದ ಅಂತಿಮ ಹಂತ ಪ್ರಾರಂಭವಾಗಿದೆಯೇ?; ನಿಜವಾಗ್ತಿದೆ 500 ವರ್ಷಗಳ ಹಿಂದಿನ ಭವಿಷ್ಯವಾಣಿ.

2 Min Read
ಮನರಂಜನೆಪ್ರಮುಖ

ನನ್ನ ಪತ್ನಿ ನನ್ನ ಜೊತೆ ಮಲಗಲು ರೆಡಿಯಿರಲಿಲ್ಲ ಎಂದ ಖ್ಯಾತ ನಟ!

1 Min Read
ಕರ್ನಾಟಕಪ್ರಮುಖ

Alert from Police ಅನುಮತಿಯಿಲ್ಲದೆ ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತಿಯ ಖಾಸಗಿ ಚಿತ್ರ ಹಂಚಿದರೆ ಕಠಿಣ ಕ್ರಮ: ರಾಜ್ಯ ಪೊಲೀಸರಿಂದ ಮಾರ್ಗಸೂಚಿ

3 Min Read

Social Networks

Facebook-f Instagram Twitter
Welcome Back!

Sign in to your account

Lost your password?