Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಸಮುದ್ರದ ಮಧ್ಯೆ ಇರಾನ್ ಟೋಲ್, ಒಂದು ಹಡಗಿಗೆ 18 ಕೋಟಿ ಶುಲ್ಕ : ಇದರ ಹಿಂದಿರೋ ಅಸಲಿ ಆಟವೇನು?
ದೇಶಪ್ರಮುಖವಿದೇಶ

ಸಮುದ್ರದ ಮಧ್ಯೆ ಇರಾನ್ ಟೋಲ್, ಒಂದು ಹಡಗಿಗೆ 18 ಕೋಟಿ ಶುಲ್ಕ : ಇದರ ಹಿಂದಿರೋ ಅಸಲಿ ಆಟವೇನು?

Share
2 Min Read
SHARE

https://youtube.com/shorts/8vXYZAagRTI?si=TOMvue_f8l6FavIl

newsics.com

ಯುದ್ಧಪೀಡಿತ ಹೋರ್ಮುಜ್‌ ಜಲಸಂಧಿ ಮೂಲಕ ಹಾದು ಹೋಗುವ ಕೆಲ ವಾಣಿಜ್ಯ ಹಡಗುಗಳಿಂದ 18.8 ಕೋಟಿ ರು. ಶುಲ್ಕ ವಸೂಲಿ ಮಾಡಲು ಇರಾನ್‌ ನಿರ್ಧರಿಸಿದೆ. ಈ ಮೂಲಕ ಈ ಅಂತಾರಾಷ್ಟ್ರೀಯ ಹಡಗುಮಾರ್ಗದ ಮೇಲೆ ತನ್ನ ನಿಯಂತ್ರಣವನ್ನು ಇನ್ನಷ್ಟು ಬಿಗಿಗೊಳಿಸಲು ಇರಾನ್‌ ಮುಂದಾಗಿದೆ.

ಪಶ್ಚಿಮ ಏಷ್ಯಾದ ಬಲಿಷ್ಠ ರಾಷ್ಟ್ರ ಇರಾನ್ ಈಗ ವಿಶ್ವದ ಅತ್ಯಂತ ಪ್ರಮುಖ ಹಡಗು ಮಾರ್ಗವಾದ ‘ಹಾರ್ಮುಜ್ ಜಲಸಂಧಿ’ಯಲ್ಲಿ ಸಾಗುವ ಹಡಗುಗಳಿಗೆ ಭಾರಿ ಮೊತ್ತದ ತೆರಿಗೆ ವಿಧಿಸಲು ಮುಂದಾಗಿದೆ. ಒಂದು ಹಡಗಿಗೆ ಇರಾನ್ ಕೇಳುತ್ತಿರೋ ಮೊತ್ತ ಬರೋಬ್ಬರಿ 2 ಮಿಲಿಯನ್ ಡಾಲರ್, ಅಂದರೆ ನಮ್ಮ ಭಾರತದ ರೂಪಾಯಿ ಲೆಕ್ಕದಲ್ಲಿ ಸುಮಾರು 18 ಕೋಟಿ ರೂಪಾಯಿ! ಒಂದು ಹಡಗು ಆ ದಾರಿಯಲ್ಲಿ ಸುಮ್ಮನೆ ಹಾದು ಹೋಗಲು ಇಷ್ಟೊಂದು ದೊಡ್ಡ ಮೊತ್ತ ಕೊಡಬೇಕು ಅಂದ್ರೆ ಅದು ಜಾಗತಿಕ ವ್ಯಾಪಾರದ ಮೇಲೆ ಎಂತಹ ಪರಿಣಾಮ ಬೀರಬಹುದು?

ನಕ್ಷೆಯಲ್ಲಿ ನೋಡಿದರೆ ಹಾರ್ಮುಜ್ ಜಲಸಂಧಿ ಒಂದು ಸಣ್ಣ ನೀರಿನ ಪಥದಂತೆ ಕಾಣುತ್ತದೆ. ಆದರೆ, ಇದು ಜಗತ್ತಿನ ಪಾಲಿಗೆ ‘ಜೀವನಾಡಿ’ ಇದ್ದಂತೆ. ಅರಬ್ಬಿ ಸಮುದ್ರ ಮತ್ತು ಪರ್ಷಿಯನ್ ಗಲ್ಫ್ ನಡುವೆ ಇರುವ ಈ ಕಿರಿದಾದ ದಾರಿಯ ಮೂಲಕವೇ ಜಗತ್ತಿನ ಒಟ್ಟು ತೈಲ (Oil) ಮತ್ತು ಅನಿಲದ (LNG) ಶೇಕಡಾ 20 ಕ್ಕಿಂತ ಹೆಚ್ಚು ಭಾಗ ಸಾಗಾಟವಾಗುತ್ತದೆ.

 

ಸರಳವಾಗಿ ಹೇಳಬೇಕೆಂದರೆ, ಸೌದಿ ಅರೇಬಿಯಾ, ಯುಎಇ, ಕುವೈತ್ ಮತ್ತು ಇರಾಕ್‌ನಂತಹ ದೇಶಗಳು ತಮ್ಮ ತೈಲವನ್ನು ಹೊರಜಗತ್ತಿಗೆ ಕಳುಹಿಸಬೇಕಾದರೆ ಇದೇ ಹಾರ್ಮುಜ್ ಮೂಲಕವೇ ಹಡಗುಗಳು ಬರಬೇಕು. ಒಂದು ವೇಳೆ ಈ ದಾರಿ ಬಂದ್ ಆದರೆ ಅಥವಾ ಇಲ್ಲಿ ಸಂಚಾರ ದುಬಾರಿಯಾದರೆ, ಇಡೀ ವಿಶ್ವದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರುತ್ತದೆ. ಇಂತಹ ಜಾಗದ ಮೇಲೆ ಈಗ ಇರಾನ್ ತನ್ನ ಸಂಪೂರ್ಣ ಹಿಡಿತ ಸಾಧಿಸಿದೆ.

ಇರಾನ್‌ನ ಸಂಸತ್ ಸದಸ್ಯರು ಮತ್ತು ಉನ್ನತ ಅಧಿಕಾರಿಗಳು ಇತ್ತೀಚೆಗೆ ಒಂದು ವಿವಾದಾತ್ಮಕ ಪ್ರಸ್ತಾವನೆಯನ್ನು ಮುಂದಿಟ್ಟಿದ್ದಾರೆ. ಅದರ ಪ್ರಕಾರ, ಹಾರ್ಮುಜ್ ಜಲಸಂಧಿಯನ್ನು ಬಳಸುವ ವಿದೇಶಿ ಹಡಗುಗಳು ಇರಾನ್‌ಗೆ ‘ಸೆಕ್ಯೂರಿಟಿ ಟ್ಯಾಕ್ಸ್’ ಅಥವಾ ‘ಟ್ರಾನ್ಸಿಟ್ ಫೀ’ ಪಾವತಿಸಬೇಕು. ಇರಾನ್ ನೀಡುತ್ತಿರುವ ಕಾರಣವೇನೆಂದರೆ, “ನಾವು ಈ ಪ್ರದೇಶದಲ್ಲಿ ಭದ್ರತೆಯನ್ನು ಕಾಪಾಡುತ್ತಿದ್ದೇವೆ, ಈ ದಾರಿಯನ್ನು ಸುರಕ್ಷಿತವಾಗಿರಿಸಲು ನಾವು ಹಣ ಖರ್ಚು ಮಾಡುತ್ತಿದ್ದೇವೆ, ಹಾಗಾಗಿ ಇಲ್ಲಿ ಸಾಗುವ ಹಡಗುಗಳು ನಮಗೆ ಶುಲ್ಕ ನೀಡಬೇಕು” ಎಂಬುದು.

ಆದರೆ ಇದರ ಹಿಂದೆ ರಾಜಕೀಯ ಕಾರಣಗಳೂ ಇವೆ. ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ಸಂಘರ್ಷದ ಹಿನ್ನೆಲೆಯಲ್ಲಿ ಇರಾನ್ ತನ್ನ ಶಕ್ತಿಯನ್ನು ಪ್ರದರ್ಶಿಸಲು ಈ ಮಾರ್ಗವನ್ನು ಬಳಸಿಕೊಳ್ಳುತ್ತಿದೆ. “ಯುದ್ಧದ ಖರ್ಚು ವೆಚ್ಚಗಳನ್ನು ನಿಭಾಯಿಸಲು ನಮಗೆ ಹಣ ಬೇಕು, ಹಾಗಾಗಿ ನಾವು ಈ ಟೋಲ್ ವಿಧಿಸುತ್ತಿದ್ದೇವೆ” ಎಂದು ಇರಾನ್‌ನ ಕೆಲವು ಸಂಸದರು ಬಹಿರಂಗವಾಗಿಯೇ ಹೇಳುತ್ತಿದ್ದಾರೆ.

https://www.newsics.com/2026/03/25/modi-calls-all-party-meeting-on-west-asia-crisis-makes-important-announcement-today/

 

 

TAGGED:charges Rs 18 crore per shipIran tolls in the middle of the sea
Share This Article
Facebook Twitter Copy Link Print
Previous Article ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಕುರಿತು ಸರ್ವಪಕ್ಷಗಳ ಸಭೆ ಕರೆದ ಮೋದಿ, ಇಂದು ಮಹತ್ವದ ಘೋಷಣೆ
Next Article ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ

Popular Posts

Modi -Trump face off 16 ತಿಂಗಳ ಬಳಿಕ ಮೋದಿ- ಟ್ರಂಪ್‌ ಮುಖಾಮುಖಿ: ಮಾತಾಡಿದ್ದೇನು? ಹೇಳಿದ್ದೇನು?

3 Min Read

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 17-6-2026, ಬುಧವಾರ, ಇಂದು‌ ಹೇಗಿದೆ ನಿಮ್ಮ ಅದೃಷ್ಟ?

4 Min Read

Elephant in garbage dump ಎಂಎಂ ಹಿಲ್ಸ್‌ನ ಕಸದ ರಾಶಿಯಲ್ಲಿ ಆಹಾರ ಅರಸುತ್ತಿದೆ ಈ ಆನೆ! ವೈರಲ್ ವಿಡಿಯೋ ನೋಡಿ

1 Min Read

ಕಲಿಯುಗದ ಅಂತಿಮ ಹಂತ ಪ್ರಾರಂಭವಾಗಿದೆಯೇ?; ನಿಜವಾಗ್ತಿದೆ 500 ವರ್ಷಗಳ ಹಿಂದಿನ ಭವಿಷ್ಯವಾಣಿ.

2 Min Read

You Might Also Like

ಮನರಂಜನೆಪ್ರಮುಖ

ನನ್ನ ಪತ್ನಿ ನನ್ನ ಜೊತೆ ಮಲಗಲು ರೆಡಿಯಿರಲಿಲ್ಲ ಎಂದ ಖ್ಯಾತ ನಟ!

1 Min Read
ಕರ್ನಾಟಕಪ್ರಮುಖ

Alert from Police ಅನುಮತಿಯಿಲ್ಲದೆ ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತಿಯ ಖಾಸಗಿ ಚಿತ್ರ ಹಂಚಿದರೆ ಕಠಿಣ ಕ್ರಮ: ರಾಜ್ಯ ಪೊಲೀಸರಿಂದ ಮಾರ್ಗಸೂಚಿ

3 Min Read
ಕರ್ನಾಟಕಪ್ರಮುಖ

ಧರ್ಮಸ್ಥಳ ಕೇಸ್ ತನಿಖೆ ನಡೆಸುತ್ತಿದ್ದ ‘SIT’ ಎಸ್.ಪಿ ಪ್ರಯಾಣಿಸುತ್ತಿದ್ದ ಕಾರು ಪಲ್ಟಿ

2 Min Read
ಪ್ರಮುಖ

ರೈತರಿಗೆ ಬಿಗ್‌ ಗಿಫ್ಟ್‌ ಕೊಟ್ಟ ಸಿಎಂ ವಿಜಯ್‌; 75,000 ರೂ. ವರೆಗಿನ ಬೆಳೆ ಸಾಲ ಮನ್ನಾ 

1 Min Read

Social Networks

Facebook-f Instagram Twitter
Welcome Back!

Sign in to your account

Lost your password?