https://youtube.com/shorts/8vXYZAagRTI?si=TOMvue_f8l6FavIl
newsics.com
ಪಶ್ಚಿಮ ಏಷ್ಯಾದಲ್ಲಿ ಉಲ್ಬಣಗೊಳ್ಳುತ್ತಿರುವ ಬಿಕ್ಕಟ್ಟಿನ ಕುರಿತು ಚರ್ಚೆ ಮಾಡಲು ಕೇಂದ್ರ ಸರ್ಕಾರ ಸರ್ವ ಪಕ್ಷ ಸಭೆ ಕರೆದಿದೆ. ಮಧ್ಯಪ್ರಾಚ್ಯ ದೇಶಗಳ ಉದ್ವಿಗ್ನತೆಯಿಂದಾಗಿ ಎಲ್ಪಿಜಿ ಬಿಕ್ಕಟ್ಟು ಮತ್ತು ಮಾರುಕಟ್ಟೆಯಲ್ಲಿನ ಅಸ್ಥಿರತೆಯ ವರದಿಗಳ ನಡುವೆ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಈಗಾಗಲೇ ಕೋವಿಡ್ ರೀತಿಯ ಪರಿಸ್ಥಿತಿ ಎದುರಾಗುತ್ತಿದೆ ಎಂದಿರುವ ಮೋದಿ ಇಂದು ಸಂಜೆ ಕೆಲ ಘೋಷಣೆ ಮಾಡಲಿದ್ದಾರೆ.
ಸರ್ವ ಪಕ್ಷಗಳ ನಾಯಕರನ್ನು ತುರ್ತು ಸಭೆಗೆ ಆಹ್ವಾನಿಸಲಾಗಿದೆ. ಸಂಸತ್ತಿನಲ್ಲಿ ಮಧ್ಯಪ್ರಾಚ್ಯ ಯುದ್ದ ಪರಿಸ್ಥಿತಿ ಕುರಿತು ಮಾತನಾಡಿದ ಪ್ರಧಾನಿ ಮೋದಿ, ದೇಶ ಒಗಟ್ಟಿನಿಂದ ಪರಿಸ್ಥಿತಿ ಎದುರಿಸಬೇಕಿದೆ ಎಂದಿದ್ದರು. ಇತ್ತ ಹಲವು ಪಕ್ಷಗಳು ಕೆಲ ಸಲಹೆ ಸೂಚನೆಗಳನ್ನು ನೀಡಿತ್ತು. ಇದೀಗ ಮಧ್ಯಪ್ರಾಚ್ಯ ಯುದ್ದ ಬಿಕ್ಕಟ್ಟು ಹಾಗೂ ದೇಶದ ಮುಂದಿರುವ ಸವಾಲುಗಳ ಕುರಿತು ಸರ್ವ ಪಕ್ಷ ಸಭೆಯಲ್ಲಿ ಚರ್ಚೆಯಾಗಲಿದೆ. ವಿದೇಶಾಂಗ ಸಚಿವ ಎಸ್ ಜೈಶಂಕರ್, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಪ್ರಮುಖರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸಂಜೆ 5 ಗಂಟೆ ತುರ್ತು ಸರ್ವ ಪಕ್ಷ ಸಭೆ ನಡೆಯಲಿದೆ.
ಸಭೆ ಬಳಿಕ ಕೇಂದ್ರ ಸರ್ಕಾರ ಕೆಲ ನಿರ್ಧಾರಗಳನ್ನು ಕೈಗೊಳ್ಳಲಿದೆ. ಸರ್ವ ಪಕ್ಷ ನಾಯಕರ ಸಲಹೆ ಸೂಚನೆ, ಟೀಕೆಗಳನ್ನು ಆಲಿಸಿ ನಿರ್ಧಾರ ಕಸೈಗೊಳ್ಳಲಿದೆ. ಪ್ರಮುಖವಾಗಿ ಭಾರತ ಗ್ಯಾಸ್ ಕೊರತೆ ಎದುರಿಸುತ್ತಿದೆ. ಹೊಟೆಲ್ಗಳು ಬಾಗಿಲು ಮುಚ್ಚಿದೆ. ಹಲವು ಮನೆಗಳಲ್ಲೂ ಗ್ಯಾಸ್ ಕೊರತೆ ಎದುರಾಗಿದೆ. ಪೂರೈಕೆ ಸಮಸ್ಯೆಗಳು ತೀವ್ರಗೊಂಡಿದೆ. ಒಂದೆಡೆ ಹೊಟೆಲ್ ಮಾಲೀಕರ ಸಂಘ ಸತತವಾಗಿ ಈ ಕುರಿತು ಪತ್ರ ಬರೆಯುತ್ತಿದೆ. ಹೀಗಾಗಿ ಸಮಸ್ಯೆಗಳು ಮತ್ತಷ್ಟು ಜಟಿಲಗೊಳ್ಳುವ ಮೊದಲು ಕೆಲ ನಿರ್ಧಾರ ಘೋಷಣೆಯಾಗುವ ಸಾಧ್ಯತೆ ಇದೆ.