https://youtube.com/shorts/8vXYZAagRTI?si=TOMvue_f8l6FavIl
newsics.com
ಅಮೆರಿಕಾ-ಇರಾನ್ ಯುದ್ಧ 26ನೇ ದಿನಕ್ಕೆ ಕಾಲಿಟ್ಟಿದೆ. ಈ ನಡುವೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಪ್ರಧಾನಿ ನರೇಂದ್ರ ಮೋದಿ ಜೊತೆ ಫೋನ್ ಮೂಲಕ ಮಾತನಾಡಿದ್ದಾರೆ.
ಈ ಮಾತುಕತೆಯ ವೇಳೆ ಮಧ್ಯಪ್ರಾಚ್ಯ ಕದನದ ಬಗ್ಗೆಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜತೆ ಪ್ರಧಾನಿ ನರೇಂದ್ರ ಮೋದಿ ಜೊತೆ ಮಾತನಾಡಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಪ್ರಧಾನಿ ಪಶ್ಚಿಮ ಏಷ್ಯಾದಲ್ಲಿ ಆದಷ್ಟು ಬೇಗ ಉದ್ವಿಗ್ನತೆ ಕಮ್ಮಿ ಮಾಡಲು ಮತ್ತು ಶಾಂತಿಯನ್ನು ಪುನಃಸ್ಥಾಪಿಸಲು ಭಾರತ ಬೆಂಬಲ ನೀಡುತ್ತದೆ ಎಂದಿದ್ದಾರೆ.
ಇರಾನ್ ವಿರುದ್ಧ ಮತ್ತೆರಡು ದೇಶಗಳು ಯುದ್ಧಕ್ಕೆ ಪ್ರವೇಶಿಸುವ ಸಾಧ್ಯ ತೆಯಿದೆ. ಇರಾನ್ ದಾಳಿಯಿಂದ ಸೌದಿ, ಯುಎಇ ತಾಳ್ಮೆ ಕಳೆದುಕೊಳ್ಳುತ್ತಿವೆ. ಸ್ಥಿತಿ ಹದಗೆಟ್ಟರೆ ಅವೂ ದಾಳಿ ಮಾಡಬಹುದು ಎಂದು ವರದಿಯಾಗಿದೆ.
ನಾವು ಪೂರ್ಣ ವಿಜಯಿಗಳಾಗುವವರೆಗೆ ಹೋರಾಟವನ್ನು ಮುಂದುವರೆಸುತೇವೆ’ ಎಂದು ಇರಾನ್ ಸಶಸ್ತ್ರ ಪಡೆಯ ವಕ್ತಾರ ಮೇ। ಜ। ಅಲಿ ಅಬ್ದಲ್ಲಾಪಿ ಅಲಿಯಾಬಾದಿ ಹೇಳಿದ್ದಾರೆ. ಇದಲ್ಲದೆ, ಇರಾನ್ ಸೇನಾ ಸಲಹೆಗಾರ ಮೊಹಿನ್ ರೆಜ್ಜೆ, ‘ಅವರು (ಅಮೆರಿಕ) ಕಣ್ಣು ತೆಗೆದರೆ ನಾವು ತಲೆ ತೆಗೀತೀವಿ’ ಎಂದಿದ್ದಾರೆ. ಯುದ್ಧ ಸ್ಥಗಿತಕ್ಕೆ ಅಮೆರಿಕದ ಕಡೆಯಿಂದ ಯತ್ನಗಳು ಆರಂಭವಾಗಿರುವ ನಡುವೆ ಇರಾನ್ ಕಡೆಯಿಂದ ಇಂತಹ ಹೇಳಿಕೆ ಬಂದಿರುವುದು ಉಭಯ ದೇಶಗಳ ಮುಂದಿನ ನಡೆಯ ಬಗ್ಗೆ ಕುತೂಹಲದಿಂದ ನೋಡುವಂತೆ ಮಾಡಿದೆ. ಇರಾನ್‌ನ ಪ್ರಬಲ ಸಶಸ್ತ್ರಪಡೆಗಳು ದೇಶದ ಸಮಗ್ರತೆಯನ್ನು ರಕ್ಷಿಸುವ ದೃಢನಿಶ್ಚಯ ಹೊಂದಿವೆ ಎಂದಿದ್ದಾರೆ ಅಲ್ಲಾಹಿ.
https://www.newsics.com/2026/03/25/nagaland-woman-commits-suicide-at-chikmagalur-resort/