Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಎಲ್ಲ ಹೆಣ್ಮಕ್ಕಳ ಜತೆಯೂ ಪ್ರೇಮದ ನಾಟಕ, ಸೆಕ್ಯುರಿಟಿ ಏಜನ್ಸಿ ಹೆಸರಲ್ಲಿ ಮೋಸದಾಟ!
ಕರ್ನಾಟಕದೇಶಪ್ರಮುಖ

ಎಲ್ಲ ಹೆಣ್ಮಕ್ಕಳ ಜತೆಯೂ ಪ್ರೇಮದ ನಾಟಕ, ಸೆಕ್ಯುರಿಟಿ ಏಜನ್ಸಿ ಹೆಸರಲ್ಲಿ ಮೋಸದಾಟ!

Share
2 Min Read
SHARE

 

ಬಿಗಿಯಾದ ಜೀನ್ಸ್ ಹಾಕಿದ್ರೆ ಮಕ್ಕಳಾಗಲ್ವಾ? ಸಂಶೋಧನೆ ಏನು ಹೇಳುತ್ತೆ?

newsics.com

ಸೆಕ್ಯುರಿಟಿ ಏಜೆನ್ಸಿ ಹೆಸರಲ್ಲಿ ಅಸಹಾಯಕ ಹೆಣ್ಣುಮಕ್ಕಳಿಗೆ ರಕ್ಷಣೆ ನೀಡುವ ಬದಲು ಅವರ ಬಾಳನ್ನೇ ನರಕವಾಗಿಸುತ್ತಿದ್ದ ಕಾಮುಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಪತಿಯಿಂದ ದೂರಾದ ಮತ್ತು ವಿಧವೆಯರನ್ನೇ ಟಾರ್ಗೆಟ್ ಮಾಡಿ, ಮದುವೆಯಾಗುವುದಾಗಿ ನಂಬಿಸಿ ದೈಹಿಕವಾಗಿ ಮತ್ತು ಆರ್ಥಿಕವಾಗಿ ವಂಚಿಸುತ್ತಿದ್ದ ‘ಕಿಲಾಡಿ’ ರಾಮಾಂಜಿಯನ್ನು ಪೊಲೀಸರ ಬಂಧಿಸಿದ್ದಾರೆ.

‘ಸೂರ್ಯ ಮ್ಯಾನೇಜ್ಮೆಂಟ್ ಸರ್ವಿಸ್’ ಎಂಬ ಸೆಕ್ಯುರಿಟಿ ಮತ್ತು ಹೌಸ್ ಕೀಪಿಂಗ್ ಏಜೆನ್ಸಿಯ ಎಂಡಿ ರಾಮಾಂಜಿ. ವಿವಿಧ ಅಪಾರ್ಟ್ಮೆಂಟ್‍ಗಳಲ್ಲಿ ಸೆಕ್ಯುರಿಟಿ ಕೆಲಸ ಕೊಡಿಸುತ್ತಿದ್ದ ಈತನ ಬಳಿ ಸುಮಾರು 60ಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದರು. ಕೆಲಸಕ್ಕೆ ಬರುತ್ತಿದ್ದ ಹೆಣ್ಣುಮಕ್ಕಳನ್ನೇ ಈತ ಬಲೆಗೆ ಬೀಳಿಸಿಕೊಳ್ಳುತ್ತಿದ್ದ.

ವಂಚನೆ ಮಾಡೋ ರೀತಿ ಹೀಗಿತ್ತು

ಪತಿಯಿಂದ ದೂರಾದವರು ಅಥವಾ ಪತಿಯನ್ನು ಕಳೆದುಕೊಂಡ ಮಹಿಳೆಯರೇ ಇವನ ಟಾರ್ಗೆಟ್‌ ಆಗಿದ್ದರು. ತನಗೆ ಮದುವೆಯಾಗಿಲ್ಲ, ತಾನು ಒಂಟಿ ಎಂದು ನಂಬಿಸುತ್ತಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಆದರೆ, ವಾಸ್ತವದಲ್ಲಿ ಈತನಿಗೆ ಸುಧಾ ಎಂಬಾಕೆಯೊಂದಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ನಿಮಗೆ ಬಾಳು ಕೊಡ್ತೀನಿ ಎಂದು ನಂಬಿಸಿ ಅವರ ಮನೆಯಲ್ಲೇ ಎರಡು-ಮೂರು ತಿಂಗಳು ಠಿಕಾಣಿ ಹೂಡುತ್ತಿದ್ದ. ಮದುವೆಯಾಗುವುದಾಗಿ ನಂಬಿಸಿ ಅವರ ದೈಹಿಕ ಸಂಪರ್ಕ ಬೆಳೆಸುತ್ತಿದ್ದ. ನಂತರ ಕಷ್ಟದಲ್ಲಿದ್ದೇನೆ ಎಂದು ನಂಬಿಸಿ ಅವರ ಬಳಿ ಇದ್ದ ಲಕ್ಷಾಂತರ ರೂಪಾಯಿ ಹಣ ಮತ್ತು ಒಡವೆಗಳನ್ನು ಪಡೆದು ಕೈಕೊಡುತ್ತಿದ್ದ ಎನ್ನಲಾಗಿದೆ.

ಬಲೆಗೆ ಬಿದ್ದವರು ಐವರು ಹೆಣ್ಣುಮಕ್ಕಳು!

ರಾಮಾಂಜಿಯ ಕಾಮದ ಬಲೆಗೆ ಒಟ್ಟು ಐವರು ಹೆಣ್ಣುಮಕ್ಕಳು ಬಿದ್ದಿದ್ದಾರೆ. ಸುಧಾ ಎನ್ನುವ ಹುಡುಗಿ ರಾಮಾಂಜಿಯ ಮೊದಲ ಪತ್ನಿ, ಆಕೆಗೆ ಇಬ್ಬರು ಮಕ್ಕಳಿದ್ದಾರೆ. ಇನ್ನು ಗಾರ್ಮೆಂಟ್ಸ್ ಕೆಲಸ ಮಾಡುತ್ತಿದ್ದ ಉಮಾ ಎಂಬಾಕೆಗೆ ನಂಬಿಸಿ ಬರೋಬ್ಬರಿ 10 ಲಕ್ಷ ರೂ. ಹಣ ಪಡೆದು ವಂಚಿಸಿದ್ದಾನೆ. ಏಜೆನ್ಸಿಗೆ ಕೆಲಸಕ್ಕೆ ಬಂದಿದ್ದ ಅನಿತಾ ಎನ್ನುವಾಕೆಯ ಬಾಳಿನಲ್ಲೂ ಚೆಲ್ಲಾಟವಾಡಿದ್ದಾನೆ. ಆ ಬಳಿಕ ಕೆಲಸಕ್ಕೆ ಬಂದಿದ್ದ ಹೇಮಾ ಎಂಬಾಕೆಗೆ ಮದುವೆಯ ಆಮಿಷವೊಡ್ಡಿ ದೋಖಾ ಮಾಡಿದ್ದಾನೆ. ಇನ್ನು ಗಾಯತ್ರಿ ಎನ್ನುವಾಕೆ ನೀಡಿದ ದೂರಿನಿಂದಲೇ ಈಗ ರಾಮಾಂಜಿಯ ಕಾಮಪುರಾಣ ಬಯಲಾಗಿದೆ. ಈಕೆಯೊಂದಿಗೆ ಲಿವಿಂಗ್ ರಿಲೇಶನ್‍ನಲ್ಲಿದ್ದ ಈತ, ಲಕ್ಷಾಂತರ ಹಣ ಮತ್ತು ಒಡವೆಗಳನ್ನು ಅಡಮಾನವಿಟ್ಟು ಪರಾರಿಯಾಗಿದ್ದ.

ವಂಚನೆಗೊಳಗಾದ ಗಾಯತ್ರಿ ಫೆಬ್ರವರಿ 18ರಂದು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ನಡೆಸಿದ ಪೊಲೀಸರು ಆರೋಪಿ ರಾಮಾಂಜಿಯನ್ನು ಬಂಧಿಸಿ ಜೈಲಿಗಟ್ಟಿದ್ದರು. ಪ್ರಸ್ತುತ ಈತ ಜಾಮೀನಿನ ಮೇಲೆ ಹೊರಗೆ ಬಂದಿದ್ದಾನೆ ಎನ್ನಲಾಗಿದೆ.

Personal Health ಇದೇನಿದು‌ ಮೌತ್ ಕಾಂಡೋಮ್? ಓರಲ್ ಕ್ಯಾನ್ಸರ್‌ಗೆ ಕಡಿವಾಣ ಹಾಕುತ್ತಾ?

 

TAGGED:A love drama with everyonea scam in the name of a security agency!
Share This Article
Facebook Twitter Copy Link Print
Previous Article Personal Health ಇದೇನಿದು‌ ಮೌತ್ ಕಾಂಡೋಮ್? ಓರಲ್ ಕ್ಯಾನ್ಸರ್‌ಗೆ ಕಡಿವಾಣ ಹಾಕುತ್ತಾ?
Next Article ಗ್ರಾಮ ಪಂಚಾಯಿತಿ ಚುನಾವಣೆ: ಮತ್ತೆ ಕಾಲಾವಕಾಶ ಕೇಳಿದ ಸರ್ಕಾರ!

Popular Posts

Siddhartha Parasanur ನಿಗೂಢ ರೀತಿಯಲ್ಲಿ ಕಿರುತೆರೆ ನಟ,‌ ಹಾಸ್ಯ ಕಲಾವಿದ ಸಿದ್ಧಾರ್ಥ ಪರಸನೂರು ನಿಧನ

1 Min Read

Preetam Chakravarthy ಬಾಲಿವುಡ್‌ಗೆ ವಿದಾಯ ಹೇಳಿದ್ರಾ ಸಂಗೀತ ನಿರ್ದೇಶಕ ಪ್ರೀತಂ ಚಕ್ರವರ್ತಿ?

1 Min Read

GOOD MORNING | Today’s Horoscope ಇಂದಿನ ಪಂಚಾಂಗ/ ರಾಶಿ ಭವಿಷ್ಯ, 16-06-2026, ಮಂಗಳವಾರ, ಹೇಗಿದೆ ಇಂದಿನ ನಿಮ್ಮ ಗ್ರಹಗತಿ?

4 Min Read

RSS reaction ಆರೆಸ್ಸೆಸ್ ರಹಸ್ಯವಾಗಿಲ್ಲ, ಪ್ರಿಯಾಂಕ್ ಖರ್ಗೆ ಪತ್ರ ರಾಜಕೀಯ ಗಿಮಿಕ್: ಡಾ. ಮೋಹನ್ ಭಾಗ್ವತ್

2 Min Read

You Might Also Like

ಕರ್ನಾಟಕಪ್ರಮುಖ

Pub catches fire ಪಬ್‌ನಲ್ಲಿ ಭಾರೀ ಬೆಂಕಿ: ಇಬ್ಬರು ಸಜೀವ ದಹನ, 7‌ ಮಂದಿ ಸ್ಥಿತಿ ಗಂಭೀರ

1 Min Read
ಕರ್ನಾಟಕದೇಶಪ್ರಮುಖ

Letter to RSS ಆರೆಸ್ಸೆಸ್‌ಗೆ ಪತ್ರ ಬರೆದ ಗೃಹಸಚಿವ ಪ್ರಿಯಾಂಕ್ ಖರ್ಗೆ! ಮೋಹನ್ ಭಾಗ್ವತ್‌ಗೆ ಕೇಳಿದ ಪ್ರಶ್ನೆಗಳೇನು?

4 Min Read
ಕರ್ನಾಟಕದೇಶಪ್ರಮುಖಮನರಂಜನೆ

Smriti Mandhana ಬೆಂಗಳೂರಲ್ಲಿ ಸ್ಮೃತಿ ಮಂಧಾನಗೆ ಬಾಡಿ ಶೇಮಿಂಗ್! ಸ್ಟಾರ್ ಬ್ಯಾಟರ್ ಹೇಳಿದ್ದೇನು?

1 Min Read
ಕರ್ನಾಟಕಪ್ರಮುಖ

Grihajyoti restart ಗೃಹಜ್ಯೋತಿ ಪರಿಷ್ಕರಣೆಯೂ ಆರಂಭ! ಇನ್ಮುಂದೆ ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್

3 Min Read

Social Networks

Facebook-f Instagram Twitter
Welcome Back!

Sign in to your account

Lost your password?