newsics.com
ನಿನ್ನೆಯಷ್ಟೇ 24 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 5,950 ರೂ. ಇಳಿಕೆಯಾದರೆ, ಬೆಳ್ಳಿ ಕೆಜಿಗೆ 20,000 ಕುಸಿತ ಕಂಡಿತು. ಅದು ವಾರದ ಮೊದಲ ದಿನವೇ. ಮದುವೆ ಸೀಸನ್, ಶುಭ ಕಾರ್ಯಗಳ ಓಡಾಟದ ಚಿಂತೆಯಲ್ಲಿದ್ದ ಜನರಿಗೆ ಇದು ನಿಜಕ್ಕೂ ಸಿಹಿ ಸುದ್ದಿ.
ಮಧ್ಯಪ್ರಾಚ್ಯದಲ್ಲಿ ಯುದ್ಧ ನಡೆಯುತ್ತಿರುವ ಸಮಯದಲ್ಲಿ ಚಿನ್ನದ ಬೆಲೆಯಲ್ಲಿ ಸತತ ಇಳಿಕೆ ಕಾಣುತ್ತೆ ಎಂಬ ಕಲ್ಪನೆ ಕೂಡ ಹಲವರಿಗೆ ಇರಲಿಲ್ಲ. ಆದರೀಗ, ಎರಡನೇ ದಿನವು ಇಳಿಕೆ ಕಂಡಿರುವುದು ಸದ್ಯ ಖರೀದಿದಾರರಲ್ಲಿ ಮಂದಹಾಸ ಮೂಡಿಸಿದೆ.
ಇಸ್ರೇಲ್-ಇರಾನ್ ಯುದ್ಧಕ್ಕೂ ಮೊದಲು 1,70,000 ರೂ. ಗಡಿದಾಟಿ ಹೋಗಿದ್ದ ಚಿನ್ನವು ಇದೀಗ ಹಂತ ಹಂತವಾಗಿ ಕುಸಿಯುವ ಭರವಸೆಗಳನ್ನು ನೀಡಿದೆ. ಈ ಯುದ್ಧವು ಚಿನ್ನದಲ್ಲಿ ಹೂಡಿಕೆ ಮಾಡಿದವರಿಗೆ ಭಾರಿ ನಷ್ಟ ತಂದೊಡ್ಡಿದೆ ಎಂಬುದರಲ್ಲಿ ಅನುಮಾನವಿಲ್ಲ. ಸಂಘರ್ಷ ಪ್ರಾರಂಭವಾದಾಗಿನಿಂದ ಚಿನ್ನದ ಬೆಲೆ ತೀವ್ರವಾಗಿ ಕುಸಿದಿದೆ. ಕಳೆದ 24 ದಿನಗಳಲ್ಲಿ 10 ಗ್ರಾಂ ಚಿನ್ನದ ಬೆಲೆ ಊಹೆಗೂ ಮೀರಿದಷ್ಟು ಇಳಿಕೆಯಾಗಿದೆ.
ಯುಎಸ್ ಫೆಡ್ ರಿಸರ್ವ್ ಬಡ್ಡಿದರಗಳನ್ನು ಶೇ.3.5ರಿಂದ 3.75ರಲ್ಲಿ ಇರಿಸಿರುವುದರಿಂದ ಬಾಂಡ್ ಇಳುವರಿ ಅಧಿಕವಾಗಿದೆ. ಬಾಂಡ್‌ಗಳಿಗೆ ಬೇಡಿಕೆ ಹೆಚ್ಚಾದಂತೆ ಚಿನ್ನದ ಖರೀದಿಗಳು ಕುಸಿಯುತ್ತಿವೆ. ಪ್ರಸ್ತುತ, 24 ಕ್ಯಾರೆಟ್ನ 10 ಗ್ರಾಂ ಚಿನ್ನ 1.40 ಲಕ್ಷ ರೂ.ಗೆ ಇಳಿದಿದೆ. ಬೆಳ್ಳಿಯ ಬೆಲೆ ಶೇ.9ರಷ್ಟು ಕುಸಿದು ಪ್ರತಿ ಕೆಜಿಗೆ 2,06,441 ರೂ. ಆಗಿದೆ. ಈ ವರ್ಷದ ಜನವರಿಯಲ್ಲಿ ಚಿನ್ನದ ಬೆಲೆ ಸಾರ್ವಕಾಲಿಕ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿ 1.93 ಲಕ್ಷ ರೂ. ವರೆಗೆ ಹೋಗಿತ್ತು. ಈಗ ಇಳಿಕೆಯತ್ತ ಸಾಗುತ್ತಿರುವುದು ಗ್ರಾಹಕರನ್ನು ಖರೀದಿಯತ್ತ ಕೈಬಿಸಿ ಕರೆಯುತ್ತಿದೆ.
ಪ್ರಸ್ತುತ ನಡೆಯುತ್ತಿರುವ ಭೌಗೋಳಿಕ ರಾಜಕೀಯ ಅನಿಶ್ಚಿತತೆಯ ಹೊರತಾಗಿಯೂ, ಚಿನ್ನ ಸುರಕ್ಷಿತ ಹೂಡಿಕೆಯಾಗಿ ಉಳಿದಿರುವುದು ಗಮನಾರ್ಹ. ಮಂಗಳವಾರ (ಮಾ.24) ಬೆಳಗ್ಗೆ ದಾಖಲಾದ ವಿವರಗಳ ಪ್ರಕಾರ, ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಬೆಂಗಳೂರಿನಲ್ಲಿ 10 ಗ್ರಾಂಗೆ 24 ಕ್ಯಾರೆಟ್ 10 ಗ್ರಾಂ ಚಿನ್ನ 2,940 ರೂ. ಇಳಿಕೆಯಾಗಿದ್ದು, ಕೆಜಿ ಬೆಳ್ಳಿಯ 5,000 ರೂ. ಕುಸಿದಿದೆ. ಅಲ್ಲಿಗೆ ಚಿನ್ನವು 1,40,350 ರೂ. ತಲುಪಿದ್ದು, ಬೆಳ್ಳಿ 2,35,000 ರೂ. ಆಗಿದೆ,
ಮೊಬೈಲ್ ಬಳಕೆ ನಿಷೇಧಿಸುವ ನಿಟ್ಟಿನಲ್ಲಿ ಶಾಲಾ ಮಕ್ಕಳಿಗೆ ಕರಡು ನೀತಿ ಪ್ರಕಟ