https://youtube.com/shorts/1G3iDuCfqaQ?si=rbtHZp_4mD8cY9Sv
newsics.com
ಚಿನ್ನ ಇರಬೇಕು, ಮನೆಯಲ್ಲಿ ಕೆಜಿ & ಕೆಜಿ ಚಿನ್ನ ತುಂಬಿರಬೇಕು ಅನ್ನೋದು ಪ್ರತಿಯೊಬ್ಬರ ಆಸೆ. ಇನ್ನು ನಮ್ಮ ಭಾರತೀಯರಿಗೆ ಚಿನ್ನದ ಮೇಲೆ ಆಸೆ ಸ್ವಲ್ಪ ಹೆಚ್ಚಾಗಿಯೇ ಇರುತ್ತದೆ. ಏಕೆಂದರೆ ಚಿನ್ನ ಭಾರತ ಮತ್ತು ಭಾರತೀಯರ ಸಂಸ್ಕೃತಿ ಜೊತೆಗೆ ಬೆರೆತು ಹೋಗಿದೆ.
ಈ ಮೂಲಕ ಚಿನ್ನ ಖರೀದಿ ಮಾಡುತ್ತಾ ಬಂಗಾರ & ಬೆಳ್ಳಿ ಸಂಗ್ರಹ ಮಾಡುವುದು ಕೂಡ ಭಾರತೀಯ ಸಂಸ್ಕೃತಿಯ ಒಂದು ಭಾಗವೇ ಆಗಿದೆ ಎನ್ನಬಹುದು. ಆದರೆ ಇತ್ತೀಚಿನ ದಿನಗಳಲ್ಲಿ ಚಿನ್ನ ಸಂಗ್ರಹ ಮಾಡುವುದು ಬಿಟ್ಟುಬಿಡಿ, ಮಿಲಿ ಗ್ರಾಂ ಲೆಕ್ಕದಲ್ಲೂ ಬಂಗಾರ ಖರೀದಿ ಮಾಡಲು ಪರದಾಡುವ ಪರಿಸ್ಥಿತಿ ನಿರ್ಮಾಣ ಆಗುತ್ತಿತ್ತು. ಆದರೆ ಇದೀಗ ಚಿನ್ನ ಭರ್ಜರಿ ಕುಸಿತ ಕಂಡಿದೆ. ಇಂದಿನ ಚಿನ್ನದ ರೇಟ್ ಎಷ್ಟು ನೋಡೋಣ ಬನ್ನಿ.
ಮಾರ್ಚ್ 20ರ ಶುಕ್ರವಾರವಾದ ನಿನ್ನ 10 ಗ್ರಾಮ್ 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ 1370 ರುಪಾಯಿ ಹಾಗೂ 22 ಕ್ಯಾರಟ್ 10 ಗ್ರಾಮ್ ಚಿನ್ನದ ಬೆಲೆಯಲ್ಲಿ 1200 ರುಪಾಯಿ ಇಳಿಕೆ ಕಂಡಿತ್ತು. ಅದೇ ಟ್ರೆಂಡ್ ಶನಿವಾರವಾದ ಇಂದೂ ಮುಂದುವರೆದಿದೆ.
ಮಾರ್ಚ್ 21ರಂದು ಪ್ರತಿ ಗ್ರಾಮ್ 24 ಕ್ಯಾರಟ್ ಚಿನ್ನದ ಮೇಲೆ 294 ರುಪಾಯಿ ಇಳಿಕೆ ಕಂಡಿದ್ದು, ಗ್ರಾಮ್ಗೆ 14,597 ರುಪಾಯಿಗಳಾಗಿವೆ. ಅಂದರೆ ಪ್ರತಿ 10 ಗ್ರಾಮ್ 24 ಕ್ಯಾರಟ್ ಚಿನ್ನದ ಮೇಲೆ ಬರೋಬ್ಬರಿ 2,940 ರುಪಾಯಿ ಇಳಿಕೆಯಾದಂತೆ ಆಗಿದೆ.
ಆಭರಣ ಚಿನ್ನವಾದ 22 ಕ್ಯಾರಟ್ ಪ್ರತಿ ಗ್ರಾಮ್ ಚಿನ್ನದ ಮೇಲೆ 275 ರುಪಾಯಿ ಇಳಿಕೆಯಾಗಿದ್ದು, ಇಂದು ಪ್ರತಿ ಗ್ರಾಮ್ಗೆ 13,380 ರುಪಾಯಿಗಳಾಗಿವೆ. ಅಲ್ಲಿಗೆ ಪ್ರತಿ 10 ಗ್ರಾಮ್ 22 ಕ್ಯಾರಟ್ ಚಿನ್ನದ ಮೇಲೆ ಬರೋಬ್ಬರಿ 2750 ರುಪಾಯಿ ಇಳಿಕೆಯಾದಂತೆ ಆಗಿದೆ.
ಒಟ್ಟಾರೆಯಾಗಿ ಕಳೆದ 10 ದಿನಗಳಲ್ಲಿ 24 ಕ್ಯಾರಟ್ ಪ್ರತಿ 10 ಗ್ರಾಮ್ ಚಿನ್ನದ ಬೆಲೆಯಲ್ಲಿ 16,250 ರುಪಾಯಿ ಇಳಿಕೆಯಾಗಿದ್ದರೇ, ಆಭರಣ ಚಿನ್ನವಾದ 22 ಕ್ಯಾರಟ್ 10 ಗ್ರಾಮ್ ಚಿನ್ನದ ಮೇಲೆ ಬರೋಬ್ಬರಿ 14,900 ರುಪಾಯಿ ಇಳಿಕೆಯಾಗಿದೆ.
https://www.newsics.com/2026/03/21/kkrtc-bus-theft-by-fired-driver/