https://www.newsics.com/2026/03/19/happy-ugadi-may-the-year-of-ugadi-be-prosperous/
newsics.com
ಇರಾನ್-ಅಮೆರಿಕಾ-ಇಸ್ರೇಲ್ ನಡುವಿನ ಸಂಘರ್ಷ ತೀವ್ರಗೊಂಡಿದ್ದು, ಅಮೆರಿಕದ ಎಫ್-35 ಫೈಟರ್ ಜೆಟ್ ಮೇಲೆ ಇರಾನ್ ದಾಳಿ ನಡೆಸಿದೆ ಎನ್ನಲಾಗಿದೆ. ಅಲ್ಲದೇ ತನ್ನ ಮೂಲಸೌಕರ್ಯಗಳ ಮೇಲೆ ಮತ್ತೊಮ್ಮೆ ದಾಳಿಯಾದರೆ ಸಂಯಮ ತೋರುವುದಿಲ್ಲ ಎಂದು ಇರಾನ್ ತನ್ನ ಶತ್ರುರಾಷ್ಟ್ರಗಳಾದ ಅಮೆರಿಕಾ ಹಾಗೂ ಇಸ್ರೇಲ್‌ಗೆ ಎಚ್ಚರಿಸಿದೆ.
ಈ ಯುದ್ಧವಿಮಾನದ ಮೇಲೆ ಇರಾನ್ ಗುಂಡು ಹಾರಿಸಿದ ಕ್ಷಣವನ್ನು ತೋರಿಸುವ ವೀಡಿಯೊವನ್ನು ಇರಾನ್ ಮಾಧ್ಯಮವು ಬಿಡುಗಡೆ ಮಾಡಿದೆ. ಈ ಘಟನೆಯ ಬಳಿಕ ಇರಾನ್ ಮೇಲೆ ಯುದ್ಧ ಕಾರ್ಯಾಚರಣೆಯನ್ನು ನಡೆಸುತ್ತಿದ್ದ ಫೈಟರ್ ಜೆಟ್ ಅನ್ನು ತುರ್ತು ಲ್ಯಾಂಡಿಂಗ್ ಮಾಡಲಾಯಿತು. ವಿಮಾನವನ್ನು ಸುರಕ್ಷಿತವಾಗಿ ಇಳಿಸಲಾಗಿದ್ದು ಪೈಲಟ್ ಸುರಕ್ಷಿತರಾಗಿದ್ದಾರೆ ಎಂದು ಅಮೆರಿಕ ಸ್ಪಷ್ಟಪಡಿಸಿದೆ.
ಇರಾನ್‌ನ ಹೇಳಿಕೆಗಳು ನಿಜವಾಗಿದ್ದರೆ, ಅದು ಅಮೆರಿಕದ ಮಿಲಿಟರಿಗೆ ಭಾರಿ ಹಿನ್ನಡೆಯಾಗಲಿದೆ, ಏಕೆಂದರೆ 100 ಮಿಲಿಯನ್ ಡಾಲರ್‌ಗಳಿಗಿಂತ ಹೆಚ್ಚು ಬೆಲೆಯ ಫೈಟ್ ಪೀಳಿಗೆಯ ಸ್ಟೆಲ್ತ್ ವಿಮಾನವಾದ ಎಫ್ -35, ಸಂಘರ್ಷದ ಸಮಯದಲ್ಲಿ ಮೊದಲ ಬಾರಿಗೆ ಹಾನಿಗೊಳಗಾದ ಘಟನೆ ಇದಾಗಿದೆ. ಇದರ ಜೊತೆಗೆ, ಮಧ್ಯಪ್ರಾಚ್ಯದಲ್ಲಿ ಯುದ್ಧ ಪ್ರಾರಂಭವಾದ ನಂತರ ಇರಾನ್ ಅಮೆರಿಕದ ಫೈಟರ್ ಜೆಟ್ ಅನ್ನು ಹಾನಿಗೊಳಿಸಿದ್ದು ಇದೇ ಮೊದಲು ಅನ್ನೋದು ಗಮನಾರ್ಹ.