https://youtube.com/shorts/DiU6l59Harw?si=ZuaOlVBTxzvWqxLP
newsics.com
ಬಾಲಿವುಡ್ ನಟಿ ಸಾರಾ ಅಲಿ ಖಾನ್ ಹಿಂದೂ ದೇವಸ್ಥಾನಗಳಿಗೆ ಆಗಾಗ ಭೇಟಿ ನೀಡುಲೇ ಇರುತ್ತಾರೆ. ಆದರೆ ಇನ್ಮುಂದೆ ನಟಿ ಸಾರಾ ಅಲಿ ಖಾನ್ ದೇವಸ್ಥಾನಕ್ಕೆ ಪ್ರವೇಶಿಸುವ ಮೊದಲು ಪ್ರಮಾಣಪತ್ರ ನೀಡಬೇಕಾಗುತ್ತದೆ. ಅದರಲ್ಲಿ ಅವರು ಏನು ಬರೆಯಬೇಕಾಗುತ್ತದೆ? ಅನ್ನೂ ವಿವರ ಇಲ್ಲಿದೆ.
ಚಾರ್ ಧಾಮ್ ಯಾತ್ರೆ 2026 ಪ್ರಾರಂಭವಾಗುವ ಮೊದಲು ದೊಡ್ಡ ಬದಲಾವಣೆಗಳನ್ನು ಘೋಷಿಸಲಾಗಿದ್ದು, ವಿಶೇಷವಾಗಿ ಸನಾತನೇತರ ಭಕ್ತರ ಪ್ರವೇಶಕ್ಕೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಶ್ರೀ ಬದರಿನಾಥ ಕೇದಾರನಾಥ ಮಂದಿರ ಸಮಿತಿಯ ವತಿಯಿಂದ ಈ ಬಗ್ಗೆ ಮಹತ್ವದ ಘೋಷಣೆ ಮಾಡಲಾಗಿದೆ.
ಕೇದಾರನಾಥ ಮಂದಿರ ಸಮಿತಿಯ ಅಧ್ಯಕ್ಷ ಹೇಮಂತ್ ದ್ವಿವೇದಿ ಅವರು ಮಾತನಾಡಿ, ಬದರಿನಾಥ ಮತ್ತು ಕೇದಾರನಾಥಕ್ಕೆ ಬರುವ ಪ್ರತಿಯೊಬ್ಬ ಭಕ್ತನಿಗೂ ಸ್ವಾಗತವಿದೆ. ಆದರೆ ಯಾರು ಸನಾತನೇತರರೋ, ಅವರು ಮಂದಿರ ಪ್ರವೇಶಿಸಲು Affidavit ನೀಡುವುದು ಕಡ್ಡಾಯವಾಗಿರುತ್ತದೆ. ಈ ಅಫಿಡವಿಟ್‌ನಲ್ಲಿ ನಾನು ಸನಾತನಿ ಆಗಿದ್ದೇನೆ ಎಂದು ನಮೂದಿಸಬೇಕಾಗುತ್ತದೆ. ಈ ಸಂಪೂರ್ಣ ಪ್ರಕ್ರಿಯೆಯನ್ನು ಮಂದಿರ ಸಮಿತಿಯೇ ನಿರ್ವಹಿಸಲಿದೆ ಎಂದು ಸ್ಪಷ್ಟಪಡಿಸಿದರು.
ಈ ನಿರ್ಧಾರದ ಬಗ್ಗೆ ಮಾತನಾಡುವಾಗ ಅಧ್ಯಕ್ಷರು ನಟಿ ಸಾರಾ ಅಲಿ ಖಾನ್ ಅವರನ್ನು ಉದಾಹರಣೆಯಾಗಿ ಉಲ್ಲೇಖಿಸಿದರು. “ಒಂದು ವೇಳೆ ಅವರು ದೇವಸ್ಥಾನಕ್ಕೆ ದರ್ಶನಕ್ಕಾಗಿ ಬರಲು ಇಚ್ಛಿಸಿದರೆ, ಅವರಿಗೂ ಸಹ ಈ ಪ್ರಮಾಣಪತ್ರದ ನಿಯಮ ಅನ್ವಯಿಸುತ್ತದೆ ಮತ್ತು ಅವರು ಅದನ್ನು ಪಾಲಿಸಬೇಕಾಗುತ್ತದೆ” ಎಂದು ಹೇಳಿದರು.
https://www.newsics.com/2026/03/18/horrific-fire-tragedy-7-members-of-the-same-family-burnt-alive/