Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > ಶುಭೋದಯ… ಇಂದಿನ ಪಂಚಾಂಗ, 13-08-2024 ಮಂಗಳವಾರ, ಇವತ್ತಿನ ವಿಶೇಷ ಏನು? ಇಂದಿನ ಸುಭಾಷಿತದಲ್ಲೇನಿದೆ?
ಈ ದಿನಪಂಚಾಂಗ

ಶುಭೋದಯ… ಇಂದಿನ ಪಂಚಾಂಗ, 13-08-2024 ಮಂಗಳವಾರ, ಇವತ್ತಿನ ವಿಶೇಷ ಏನು? ಇಂದಿನ ಸುಭಾಷಿತದಲ್ಲೇನಿದೆ?

Share
5 Min Read
SHARE

newsics.com

ಶುಭೋದಯ

ನಿತ್ಯ ಪಂಚಾಂಗ

13 ಆಗಸ್ಟ್ 2024, ಮಂಗಳವಾರ

ದಿನ ವಿಶೇಷ:

* ಮೇಡಮ್‌ಭಿಕಾಜಿ ಕಾಮಾ ಸ್ಮೃತಿದಿನ

* ವಿಶ್ವ ಅಂಗಾಂಗ ದಾನ ದಿನ

* ಅಂತಾರಾಷ್ಟ್ರೀಯ ಎಡಚರ ದಿನ

—

ಗತಶಾಲಿ – 1946
ಗತಕಲಿ – 5125
ಸಂವತ್ಸರ – ಕ್ರೋಧಿ
ಆಯನ- ದಕ್ಷಿಣಾಯಣ
ದಿನಾಂಕ- – 13/08/2024
ತಿಂಗಳು – ಆಗಸ್ಟ್
ಬಣ್ಣ – ಕೇಸರಿ
ವಾರ – ಮಂಗಳವಾರ

ತಿಥಿ – ಅಷ್ಟಮಿ 09:30:51
ಪಕ್ಷ – ಶುಕ್ಲ
ನಕ್ಷತ್ರ – ವಿಶಾಖಾ 10:43:21
ಯೋಗ – ಬ್ರಹ್ಮ 16:32:14
ಕರಣ – ಭವ 09:30:51
ಕರಣ – ಬಾಳವ 22:02:59

ತಿಂಗಳು (ಅಮಾವಾಸ್ಯಾಂತ್ಯ) ಶ್ರಾವಣ
ತಿಂಗಳು (ಹುಣ್ಣಿಮಾಂತ್ಯ) ಶ್ರಾವಣ
ಚಂದ್ರ ರಾಶಿ ವೃಷ್ಚಿಕ
ಸೂರ್ಯ ರಾಶಿ ಕರ್ಕಾಟಕ
ಋತು- ವರ್ಷ

ಸೂರ್ಯೋದಯ 06:08:19
ಸೂರ್ಯಾಸ್ತ 18:40:20
ಹಗಲಿನ ಅವಧಿ 12:32:00
ರಾತ್ರಿಯ ಅವಧಿ 11:28:06
ಚಂದ್ರೋದಯ 12:55:54
ಚಂದ್ರಾಸ್ತ 24:31:15

ರಾಹು ಕಾಲ 15:32 – 17:06 ಅಶುಭ
ಯಮಗಂಡ ಕಾಲ 09:16 – 10:50 ಅಶುಭ
ಗುಳಿಕ ಕಾಲ 12:24 – 13:58
ಅಭಿಜಿತ್ 11:59 – 12:49 ಶುಭ
ದುರ್ಮುಹೂರ್ತ 08:39 – 09:29 ಅಶುಭ
ದುರ್ಮುಹೂರ್ತ 23:16 – 24:06* ಅಶುಭ

***

ರಾಹು ಕಾಲ
ಭಾನುವಾರ – 4.30 ರಿಂದ 6.00
ಸೋಮವಾರ – 7.30 ರಿಂದ 9.00
ಮಂಗಳವಾರ – 3.00 ರಿಂದ 4.30
ಬುಧವಾರ – 12.00 ರಿಂದ 1.30
ಗುರುವಾರ – 1.30 ರಿಂದ 3.00
ಶುಕ್ರವಾರ – 10.30 ರಿಂದ 12.00
ಶನಿವಾರ – 9.00 ರಿಂದ 10.30

ಗುಳಿಕ ಕಾಲ
ಭಾನುವಾರ – 3.00 ರಿಂದ 4.30
ಸೋಮವಾರ – 1.30 ರಿಂದ 3.00
ಮಂಗಳವಾರ – 12.00 ರಿಂದ 1.30
ಬುಧವಾರ – 10.30 ರಿಂದ 12.00
ಗುರುವಾರ – 9.00 ರಿಂದ 10.30
ಶುಕ್ರವಾರ – 7.30 ರಿಂದ 9.00
ಶನಿವಾರ – 6.00 ರಿಂದ 7.30

ಯಮಗಂಡ ಕಾಲ
ಭಾನುವಾರ – 12.00 ರಿಂದ 1.30
ಸೋಮವಾರ – 10.30 ರಿಂದ 12.00
ಮಂಗಳವಾರ – 9.00 ರಿಂದ 10.30
ಬುಧವಾರ – 7.30 ರಿಂದ 9.00
ಗುರುವಾರ – 6.00 ರಿಂದ 7.30
ಶುಕ್ರವಾರ – 3.00 ರಿಂದ 4.30
ಶನಿವಾರ – 1.30 ರಿಂದ 3.00

***

***

ಈ ದಿನದ ಮಾತು

ಪ್ರತಿಯೊಬ್ಬರೂ ಜಗತ್ತನ್ನೇ ಬದಲಾಯಿಸಬೇಕು ಎಂದು ಆಲೋಚಿಸುತ್ತಾರೆ. ಆದರೆ, ಯಾರೊಬ್ಬರೂ ತಮ್ಮನ್ನು ತಾವು ಬದಲಾಯಿಸಿಕೊಳ್ಳಬೇಕು ಎಂದು ಚಿಂತಿಸುವುದಿಲ್ಲ.
– ಲಿಯೊ ಟಾಲ್‌ಸ್ಟಾಯ್

***

ಇಂದಿನ ಸುಭಾಷಿತ

ಲೋಕಯಾತ್ರಾ ಭಯಂ ಲಜ್ಜಾ
ದಾಕ್ಷಿಣ್ಯಂ ಧರ್ಮಶೀಲತಾ |
ಪಂಚ ಯತ್ರ ನ ವಿದ್ಯಂತೇ
ನ ಕುರ್ಯಾತ್ ತತ್ರ ಸಂಸ್ಥಿತಿಮ್ ||
(ಚಾಣಕ್ಯನೀತಿ)

ಜೀವನವೃತ್ತಿ (ಜೀವನ ನಿರ್ವಹಣಾ ಕ್ರಮ), ಪಾಪಭೀತಿ (ಕಾನೂನಿನ ಬದ್ಧತೆ), ನಾಚಿಕೆ (ಗೌರವಯುತ ನಡೆ), ದಾಕ್ಷಿಣ್ಯ (ದಯೆ), ಧರ್ಮಶೀಲತೆ (ಧಾರ್ಮಿಕ ಪ್ರವೃತ್ತಿ) – ಈ ಐದೂ ಇಲ್ಲದೆ ಕಡೆ ವಾಸಿಸಬಾರದು.

***

ಇಂದಿನ ಇತಿಹಾಸ

ಆಗಸ್ಟ್ 13 – ವಿಶ್ವ ಅಂಗಾಂಗ ದಾನ ದಿನ

ಅಂಗಾಂಗ ದಾನವು ಮಾನವೀಯತೆಯ ಹೆಸರಿನಲ್ಲಿ ನೀವು ಮಾಡಬಹುದಾದ ಅತ್ಯುತ್ತಮ ಕೆಲಸಗಳಲ್ಲಿ ಒಂದಾಗಿದೆ. ಒಬ್ಬ ವ್ಯಕ್ತಿಯು ತೀರಿಕೊಂಡ ನಂತರ ಅಂಗಗಳ ಉಪಯೋಗವಿರುವುದಿಲ್ಲ. ಆ ಅಂಗಗಳು ಬೇರೊಬ್ಬರಿಗೆ ಹೊಸ ಜೀವನವನ್ನು ನೀಡಬಹುದು. ಅಂಗಾಂಗ ದಾನಕ್ಕೆ ಸಂಬಂಧಿಸಿದ ಅನೇಕ ಮೂಢನಂಬಿಕೆಗಳಿವೆ. ಆದರೆ ಅಂಗಾಂಗ ದಾನದ ಕುರಿತು ಜಾಗೃತಿ ಮೂಡಿಸಲು ಮತ್ತು ಪ್ರೋತ್ಸಾಹಿಸಲು ಪ್ರತಿ ವರ್ಷ ಆಗಸ್ಟ್ 13 ರಂದು ವಿಶ್ವ ಅಂಗಾಂಗ ದಾನ ದಿನವನ್ನು ಆಚರಿಸಲಾಗುತ್ತದೆ.

ಅಂತಾರಾಷ್ಟ್ರೀಯ ಎಡಚರ(ಲೆಫ್ಟ್ ಹ್ಯಾಂಡರ್ಸ್) ದಿನ

ಆಗಸ್ಟ್ 13, 1992ರಂದು ಎಡಚರ ಅಂತಾರಾಷ್ಟ್ರೀಯ ದಿನವನ್ನು ಮೊದಲ ಬಾರಿಗೆ ಆಚರಿಸಲಾಯಿತು. ವಿಶ್ವಸಂಸ್ಥೆಯ ಅಂದಾಜಿನ ಪ್ರಕಾರ ವಿಶ್ವದ ಜನಸಂಖ್ಯೆಯ 10 ಪ್ರತಿಶತ ಎಡಗೈಯವರು. ಎಡಗೈ ವ್ಯಕ್ತಿಯ ಜೀವನವು ಅಡೆತಡೆಗಳಿಂದ ತುಂಬಿದೆ ಎಂದು ಪರಿಗಣಿಸಿ, ಪ್ರಧಾನವಾಗಿ ಬಲಗೈ ಜಗತ್ತಿನಲ್ಲಿ ಎಡಗೈಯವರ ಅನುಕೂಲಗಳು ಮತ್ತು ಅನಾನುಕೂಲಗಳ ಬಗ್ಗೆ ಅರಿವು ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ.

ಪ್ರಮುಖ ಘಟನೆಗಳು

* ಆಗಸ್ಟ್ 13, 1704 ರಂದು ಸ್ಪಾನಿಶ್ ಉತ್ತರಾಧಿಕಾರಕ್ಕಾಗಿ ಬ್ಲೆನ್ಹೀಮ್ ಕದನ ನಡೆದು ಮಾರ್ಲ್ಬೊರೋದ ಮೊದಲನೇ ಡ್ಯೂಕ್ ಜಾನ್ ಚರ್ಚಿಲ್ ನೇತೃತ್ವದಲ್ಲಿ ಇಂಗ್ಲಿಷ್ ಮತ್ತು ಆಸ್ಟ್ರಿಯನ್ ಪಡೆಗಳಿಗೆ ಜಯ ಲಭಿಸಿತು. ಐವತ್ತು ವರ್ಷಗಳಿಗೂ ಹೆಚ್ಚಿನ ಅವದಿಯಲ್ಲಿ ಫ್ರೆಂಚ್ ಸೇನೆಗೆ ಆದ ಮೊದಲ ಭಾರೀ ಸೋಲು ಇದು. ಈ ವಿಜಯವು ವಿಯೆನ್ನಾವನ್ನು ಫ್ರಾಂಕೊ – ಬವೇರಿಯನ್ ಸೇನೆಯ ದಾಳಿಯಿಂದ ರಕ್ಷಿಸಿತು.

* ಆಗಸ್ಟ್ 13, 1784 ರಂದು ಬ್ರಿಟಿಷ್ ಸಂಸತ್ತಿನಲ್ಲಿ ಅಂಗೀಕಾರ ಪಡೆದ ಕಾಯ್ದೆಯ ಅಡಿಯಲ್ಲಿ ಭಾರತದಲ್ಲಿ ಕೇಂದ್ರೀಯ ನಿಯಂತ್ರಣ ಪ್ರಾಧಿಕಾರವಾಗಿ ಈಸ್ಟ್ ಇಂಡಿಯಾ ಕಂಪೆನಿಯ ನೇಮಕ.

* ಆಗಸ್ಟ್ 13, 1795 ರಂದು ಇಂದೂರು ರಾಣಿ ಅಹಲ್ಯಬಾಯಿ ಹೋಲ್ಕರ್ ಅವರು ನಿಧನರಾದರು.

* ಆಗಸ್ಟ್ 13, 1848 ರಂದು ಭಾರತೀಯ ರಾಷ್ಟ್ರೀಯವಾದಿ ನಾಯಕ ಹಾಗೂ ಭಾರತೀಯ ಕಾಂಗ್ರೆಸ್ಸಿನ ಅಧ್ಯಕ್ಷರಾಗಿದ್ದ ರೊಮೇಶ್ ಚಂದ್ರ ದತ್ ಅವರ ಜನ್ಮದಿನ. ಇವರು ಬರೆದ ‘ಇಕನಾಮಿಕ್ ಹಿಸ್ಟರಿ ಆಫ್ ಬ್ರಿಟಿಷ್ ಇಂಡಿಯಾ 1757 – 1837’ ಪುಸ್ತಕವು ಭಾರತದ ಆರ್ಥಿಕ ಅಭಿವೃದ್ಧಿಯನ್ನು ಕುಂಠಿತಗೊಳಿಸಿ ಅದರ ಲಾಭವನ್ನು ಬ್ರಿಟಿಷರು ಪಡೆದುಕೊಂಡದ್ದನ್ನು ದಾಖಲಿಸಿದೆ.

* ಫ್ಲಾರೆನ್ಸ್ ನೈಟಿಂಗೇಲ್ – ಇವರನ್ನು ‘ಆಧುನಿಕ ನರ್ಸಿಂಗ್‌ನ ಸಂಜಾತೆ’ ಎಂದು ಕರೆಯುತ್ತಾರೆ. ಮೂಲತಃ ಇಟಲಿ ದೇಶದಲ್ಲಿ ಜನಿಸಿ ಬಳಿಕ ಬ್ರಿಟಿಷ್ ದೇಶದ ಸಂಜಾತೆಯಾದ ಈಕೆ 13 ಆಗಸ್ಟ್‌ 1910 ರಲ್ಲಿ ಇಹಲೋಕ ತ್ಯಜಿಸಿದರು. ಸುಮಾರು 90 ವರ್ಷಗಳ ಪರಿಪುರ್ಣ ಬದುಕು ಸವೆಸಿದ ಈಕೆ ತನ್ನ ಜೀವನವನ್ನು ಮನುಕುಲದ ಸೇವೆಗೆ ಮುಡಿಪಾಗಿಟ್ಟಿದ್ದರು. ಸಾಮಾಜಿಕ ಕಾರ್ಯಕರ್ತೆಯಾಗಿದ್ದ ಈಕೆ ವೃತ್ತಿಯಲ್ಲಿ ಅಂಕಿ ಅಂಶ ತಜ್ಞೆಯಾಗಿದ್ದರು. ಆದರೆ ನೊಂದವರ ದೀನ ದಲಿತರ ಸಾಲಿಗೆ ಈಕೆ ಸಾಕ್ಷಾತ್ ದೇವತೆಯಾಗಿದ್ದಳು. ಕ್ರಿಮಿನ್ ಯುದ್ಧದ ಸಮಯದಲ್ಲಿ ನುರಿತ ದಾದಿಯರ ತಂಡದ ನಾಯಕಿಯಾಗಿ ಈಕೆ, ಗಾಯಗೊಂಡ ಸೈನಿಕರ ಸೇವೆಯನ್ನು ಹಗಲು ರಾತ್ರಿ ಮಾಡಿ ಹಲವಾರು ಸೈನಿಕರು ಜೀವ ಉಳಿಸಿದ್ದರು. ರಾತ್ರಿ ಹೊತ್ತು ಯುದ್ಧ ಭೂಮಿಯಲ್ಲಿ ಕತ್ತಲಿನ ನಡುವೆ ದೀಪವನ್ನು ಹಿಡಿದುಕೊಂಡು ನೊಂದ ಮತ್ತು ಗಾಯಗೊಂಡ ಸೈನಿಕರ ಸೇವೆ ಮಾಡಿ ‘ಲೇಡಿ ಆಫ್ ಲ್ಯಾಂಪ್’ ಎಂಬ ಹೆಸರಿನಿಂದ ಪ್ರಖ್ಯಾತಿಗೊಂಡಿದ್ದರು. ಅವರು ಮನುಕುಲಕ್ಕೆ ನೀಡಿದ ಅಮೋಘ ಸೇವೆಯನ್ನು ಸ್ಮರಿಸುವ ಸಲುವಾಗಿ ಅವರು ಹುಟ್ಟಿದ ದಿನವನ್ನು ‘ಅಂತರರಾಷ್ಟ್ರೀಯ ದಾದಿಯರ ದಿನ’ ಎಂದು ಜಗತ್ತಿನಾದ್ಯಂತ ಮೇ 12 ರಂದು ಸಂಭ್ರಮದಿಂದ ಆಚರಿಸಲಾಗುತ್ತಿದೆ.

* ಶ್ರೀದೇವಿ – ಆಗಸ್ಟ್ 13, 1963 ರಂದು ಜನಿಸಿದರು. ಭಾರತ ಚಲನಚಿತ್ರರಂಗದ ಜನಪ್ರಿಯ ನಟಿಯರಲ್ಲೊಬ್ಬರು. ಇವರು 90ರ ದಶಕದಲ್ಲಿ ಬಹಳ ಬೇಡಿಕೆಯ ಹಾಗೂ ಜನಪ್ರಿಯ ನಟಿಯಾಗಿದ್ದವರು. ಕನ್ನಡ ಸಿನೆಮಾಗಳೂ ಸೇರಿದಂತೆ ದಕ್ಷಿಣ ಭಾರತದ ಭಾಷೆಗಳ ಸಿನೆಮಾಗಳಲ್ಲಿ ಹಾಗೂ ಹಿಂದಿ ಸಿನೆಮಾಗಳಲ್ಲಿ ನಟಿಸಿದ್ದಾರೆ. ಇವರು ಹಲವು ಸಿನೆಮಾಗಳ ನಿರ್ಮಾಪಕರೂ ಸಹ ಆಗಿದ್ದರು.ಇವರು ತೆಲುಗು, ಹಿಂದಿ, ತಮಿಳು, ಮಲಯಾಳಂ ಮತ್ತು ಕನ್ನಡ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಇವರನ್ನ ಭಾರತೀಯ ಚಿತ್ರರಂಗದ ‘ಮೊದಲ ಮಹಿಳಾ ಸೂಪರ್ ಸ್ಟಾರ್’ ಎಂದು ಪರಿಗಣಿಸಲ್ಪಡಲಾಗಿದೆ. ಇವರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ನಂದಿ ಪ್ರಶಸ್ತಿ, ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ, ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಸೇರಿದಂತೆ , ಫಿಲ್ಮ್‌ಫೇರ್ ಪ್ರಶಸ್ತಿಗಳು, ಫಿಲ್ಮ್‌ಫೇರ್ ಜೀವಮಾನ ಸಾಧನೆ ಪ್ರಶಸ್ತಿ ಮತ್ತು ಮೂರು ಸೌತ್ ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಪಡೆದಿದ್ದಾರೆ.

TAGGED:Good morning Today's Almanac 13-08-2024 Tuesday What's special about today? What is in today's subhashita? newsics ಇಂದಿನ ಪಂಚಾಂಗ
Share This Article
Facebook Twitter Copy Link Print
Previous Article ಮೈಸೂರು ದಸರಾ ಈ ಬಾರಿ ಬಲು ಅದ್ಧೂರಿ: ಸರ್ಕಾರ ನಿರ್ಧಾರ
Next Article ದಿನ ಭವಿಷ್ಯ 13-08-2024 ಮಂಗಳವಾರ, ಕರ್ಕಾಟಕ- ಯಾವುದಕ್ಕೂ ಆತುರ ಬೇಡ, ಕುಂಭ- ಅನಾರೋಗ್ಯ ಸಮಸ್ಯೆ, ಇಂದಿನ ನಿಮ್ಮ ರಾಶಿ ಭವಿಷ್ಯದಲ್ಲೇನಿದೆ?

Popular Posts

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

ಹೊರಟ್ಟಿ ಗ್ರಾಮದಲ್ಲಿ 40 ವಿದ್ಯಾರ್ಥಿಗಳಲ್ಲಿ ಜ್ವರ: ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು 

1 Min Read

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read

You Might Also Like

ಪಂಚಾಂಗಈ ದಿನಜ್ಯೋತಿಷ್ಯಪ್ರಮುಖ

Ceremony bigins ಜೂನ್ 19ರಿಂದ ಶುಭ ಸಮಾರಂಭ ಆರಂಭ: ಸಿಗಲಿವೆ ಉತ್ತಮ ಮುಹೂರ್ತ

1 Min Read
ಪಂಚಾಂಗಈ ದಿನಜ್ಯೋತಿಷ್ಯದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ಪಂಚಾಂಗ/ ರಾಶಿ ಭವಿಷ್ಯ, 11-06-2026, ಗುರುವಾರ

4 Min Read
ಪಂಚಾಂಗಜ್ಯೋತಿಷ್ಯಪ್ರಮುಖ

ASTRO 59 ವರ್ಷ ಬಳಿಕ ಶುಕ್ರ, ಗುರು, ಬುಧ ಗ್ರಹಗಳ ಮೆರವಣಿಗೆ: ಈ ರಾಶಿ ಜನರಿಗೆ ಭಾರೀ ಅದೃಷ್ಟ

2 Min Read
ಪಂಚಾಂಗಈ ದಿನಜ್ಯೋತಿಷ್ಯಪ್ರಮುಖಪ್ರಮುಖ

ASTRO ಕರ್ಕಾಟಕ ರಾಶಿಗೆ ಶುಕ್ರ ಪ್ರವೇಶ: ಈಗಿನಿಂದಲೇ ಈ ನಾಲ್ಕು ರಾಶಿಯವರಿಗೆ ಬಂಪರ್ ಅದೃಷ್ಟ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?