Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಟಿಬಿ ಡ್ಯಾಂ ದುರಸ್ತಿ ಕಾರ್ಯಕ್ಕೆ ಒಂದಷ್ಟು ನೀರು ಖಾಲಿ ಮಾಡ್ಲೇಬೇಕು: ಡಿಸಿಎಂ
ಕರ್ನಾಟಕಪ್ರಮುಖ

ಟಿಬಿ ಡ್ಯಾಂ ದುರಸ್ತಿ ಕಾರ್ಯಕ್ಕೆ ಒಂದಷ್ಟು ನೀರು ಖಾಲಿ ಮಾಡ್ಲೇಬೇಕು: ಡಿಸಿಎಂ

Share
2 Min Read
SHARE

newsics.com

ಬೆಂಗಳೂರು: ತುಂಗಭದ್ರಾ ಅಣೆಕಟ್ಟೆಯ ಗೇಟ್ ದುರಸ್ತಿ ಕಾರ್ಯ ಆರಂಭವಾಗಿದ್ದು, ನೀರಿನ ಪ್ರಮಾಣ ಕಡಿಮೆ ಮಾಡದ ಹೊರತಾಗಿ ದುರಸ್ತಿ ಕಾರ್ಯ ಸಾಧ್ಯವಿಲ್ಲ ಎಂದು ಜಲಸಂಪನ್ಮೂಲ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುಂಗಭದ್ರಾ ನೀರಾವರಿ ನಿಗಮ ನಮ್ಮೊಬ್ಬರ ಅಧಿಕಾರ ವ್ಯಾಪ್ತಿಯಲ್ಲಿ ಬರುವುದಿಲ್ಲ. ಕೇಂದ್ರ ಹಾಗೂ ಮೂರು ರಾಜ್ಯಗಳ ಸದಸ್ಯರೂ ಇದರಲ್ಲಿ ಇರುತ್ತಾರೆ. ಗೇಟ್ ಚೈನ್ ಕಿತ್ತು ಹೋದ ಪ್ರಕರಣದ ಬಗ್ಗೆ ಎಲ್ಲರಿಗೂ ತಕ್ಷಣ ಮಾಹಿತಿ ನೀಡಲಾಗಿದೆ ಎಂದರು.

ಅಣೆಕಟ್ಟೆ ಸುರಕ್ಷತಾ ಸಮಿತಿಯಲ್ಲಿ ಈ ಮೊದಲೇ ಕೆಲಸ ಮಾಡಿದಂತಹ ತಂತ್ರಜ್ಞರೂ ಇದ್ದರು. ಅವರ ಬಳಿ ಚರ್ಚೆ ನಡೆಸಿ, ನಂತರ ನಕ್ಷೆಯನ್ನು ತೆಗೆಸಿ ಅದರಂತೆ ಗೇಟ್ ತಯಾರಿಸುವವರ ಬಳಿ ಮಾತನಾಡಲಾಗಿದೆ. ನಾನೇ ಖುದ್ದಾಗಿ ಜಿಂದಾಲ್ ಕಾರ್ಖಾನೆಯವರ ಬಳಿ ಮಾತನಾಡಿರುವೆ ಎಂದರು.

50-60 ಟಿಎಂಸಿ ನೀರನ್ನು ಉಳಿಸಲು, ರೈತರಿಗೆ ಒಂದು ಬೆಳೆಗಾದರೂ ನೀರು ಕೊಡಲು ನಾವು ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
ಕೆರೆ, ಕಾಲುವೆಗೆ ನೀರು ಬಿಡುತ್ತೇವೆ. ಹೀಗಾಗಿ ರೈತರು ಆತಂಕಪಡಬೇಕಾಗಿಲ್ಲ. ನದಿಗೆ ನೀರು ಹರಿದು ಹೋಗುವ ಬದಲು ಎಲ್ಲಾ ಚಾನಲ್‌ಗಳನ್ನು ತೆರೆದು ಅಲ್ಲಿಗೂ ನೀರು ಹರಿಸಲಾಗುತ್ತಿದೆ. ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಸುರಕ್ಷತೆ ವಹಿಸಲಾಗಿದೆ ಎಂದು ಹೇಳಿದರು.

ಡ್ಯಾಂ 70 ವರ್ಷದ ಹಳೆಯ ತಂತ್ರಜ್ಞಾನದಿಂದ ನಿರ್ಮಿಸಲಾಗಿದೆ. ಡ್ಯಾಂನ ಎಲ್ಲಾ ಗೇಟ್‌ಗಳು ಸರಿಯಿವೆ. ಇದೊಂದು ಮಾತ್ರ ಒತ್ತಡ ತಡೆಯಲಾರದೆ ಅವಘಡ ಸಂಭವಿಸಿದೆ. ಇದರಲ್ಲಿ ಅಕಾರಿಗಳ ತಪ್ಪೇನಿದೆ ಎಂದು ಪ್ರಶ್ನಿಸಿದರು.

ನೀರು ಹಾಗೂ ಅಣೆಕಟ್ಟು ಎರಡೂ ಉಳಿಯಬೇಕು. 70 ವರ್ಷದ ಹಳೆಯ ಅಣೆಕಟ್ಟಾದ ಕಾರಣ ಈ ಅವಘಡ ಸಂಭವಿಸಿದೆ. ನಮ್ಮ ಬಳಿ ಎಲ್ಲಾ ನಕ್ಷೆ, ದಾಖಲೆಗಳು ಇದ್ದ ಕಾರಣಕ್ಕೆ ಬೇಗ ಕೆಲಸವಾಗುತ್ತಿದೆ ಎಂದು ತಿಳಿಸಿದರು.
ಅಣೆಕಟ್ಟೆ ಸುರಕ್ಷತಾ ಸಮಿತಿ ರಚನೆ
ಅಣೆಕಟ್ಟೆ ಸುರಕ್ಷತಾ ಸಮಿತಿ ರಚನೆ ಮಾಡಲಾಗುತ್ತಿದ್ದು, ಈ ಸಮಿತಿಯು ರಾಜ್ಯದ ಎಲ್ಲಾ ಅಣೆಕಟ್ಟೆಗಳಿಗೆ ಭೇಟಿ ನೀಡಿ, ಅಧ್ಯಯನ ನಡೆಸಿ ಮುಂದಿನ ಒಂದು ತಿಂಗಳ ಒಳಗಾಗಿ ಸುರಕ್ಷತೆಯ ಬಗ್ಗೆ ವರದಿ ನೀಡುತ್ತದೆ. ತುಂಗಭದ್ರಾ ಅಣೆಕಟ್ಟೆಯ ಗೇಟ್ ದುರಸ್ತಿ ಕಾರ್ಯಕ್ಕೂ ಈ ಸಮಿತಿಗೂ ಸಂಬಂಧವಿಲ್ಲ. ಉಳಿದ ವಿಚಾರದ ಬಗ್ಗೆ ವರದಿ ತಯಾರಿಸಲಾಗುವುದು ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

ನೀರಿನ ಹೊರಹರಿವು ಹೆಚ್ಚು ರಭಸದಿಂದ ಕೂಡಿದೆ. ಕೇವಲ 19ನೇ ಗೇಟ್ ಒಂದರಲ್ಲೇ 9 ಸಾವಿರ ಕ್ಯುಸೆಕ್‌ಗೂ ಹೆಚ್ಚಿನ ನೀರು ಹರಿದುಹೋಗುತ್ತಿದೆ. ನೀರಿನ ರಭಸ ಎಷ್ಟಿದೆ ಎಂದು ತಿಳಿಯಲು ಡ್ರೋಣ್ ಕ್ಯಾಮೆರಾ ಮೂಲಕ ಚಿತ್ರೀಕರಿಸಲಾಗುತ್ತಿದೆ. ಕೂಡಲೇ ಆ ವಿಡಿಯೋ ಬಿಡುಗಡೆ ಮಾಡಲಾಗುವುದು. ಬೇರೆ ಗೇಟ್‌ಗಳಿಗೆ ತೊಂದರೆ ಆಗದಂತೆ ಕೆಲಸ ಮಾಡಲಾಗುವುದು ಎಂದು ಶಿವಕುಮಾರ್ ಹೇಳಿದರು.

ಸರ್ಕಾರ ನಮ್ಮನ್ನು ಶತ್ರುವಿನಂತೆ ನೋಡುತ್ತಿದೆ-ಪ್ರಮೋದಾ ದೇವಿ

ಯಾವುದೇ ಕ್ಷಣದಲ್ಲಿ ಬೇಕಾದ್ರೂ ದಾಳಿ ಸಾಧ್ಯತೆ: ಇಸ್ರೇಲ್ ಹೇಳಿಕೆ

ಡಿಕೆಶಿ ಆದಾಯ ಮೀರಿದ ಅಕ್ರಮ ಆಸ್ತಿ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್

TAGGED:Some water should be released for TB dam repair work: DCM
Share This Article
Facebook Twitter Copy Link Print
Previous Article ನಾಳೆಯಿಂದ ನಮ್ಮ ಮೆಟ್ರೋ ರೈಲು ಸೇವೆಯಲ್ಲಿ ವ್ಯತ್ಯಯ
Next Article ಮೈಸೂರು ದಸರಾ ಈ ಬಾರಿ ಬಲು ಅದ್ಧೂರಿ: ಸರ್ಕಾರ ನಿರ್ಧಾರ

Popular Posts

Home Decor ನಿಮ್ಮ ಮನೆಯಲ್ಲೂ ಮಳೆಗಾಲದ ಇರುವೆ-ನೊಣಗಳ ಕಾಟವೇ? ಇಲ್ಲಿದೆ ಸಿಂಪಲ್ ‘ಕಿಚನ್ ಕ್ಲೀನಿಂಗ್’ ಹ್ಯಾಕ್ಸ್

1 Min Read

Ration news ಇನ್ಮುಂದೆ ಬೆಳಗಿನಿಂದ ರಾತ್ರಿವರೆಗೂ ಸಿಗುತ್ತೆ ಪಡಿತರ! ನ್ಯಾಯಬೆಲೆ ಅಂಗಡಿಗಳಿಗೆ ಸರ್ಕಾರದ ಸೂಚನೆ ಏನು?

1 Min Read

Malvan launched ಕಾರವಾರದಲ್ಲಿ ಐಎನ್‌ಎಸ್ ಮಾಲ್ವಣ್ ಲೋಕಾರ್ಪಣೆ, ಹೇಗಿದೆ ಯುದ್ಧನೌಕೆ?

1 Min Read

DMRC Alert 16 ಪ್ರಮುಖ ಮೆಟ್ರೋ ನಿಲ್ದಾಣಗಳು ಮುಂದಿನ ಆದೇಶದವರೆಗೆ ಬಂದ್

1 Min Read

You Might Also Like

ಪ್ರಮುಖದೇಶ

Flood ಮೇಘಸ್ಫೋಟಕ್ಕೆ ಭೀಕರ ಪ್ರವಾಹ; ಒಂದೇ ದಿನ 21 ಬಲಿ, ಸಂಕಷ್ಟದಲ್ಲಿ 5.64 ಲಕ್ಷ ಜನ

2 Min Read
ಪ್ರಮುಖಕರ್ನಾಟಕ

BP Harish ಬಿಜೆಪಿ ಶಾಸಕ ಬಿ.ಪಿ. ಹರೀಶ್‌ ಮೇಲೆ ಕಾಂಗ್ರೆಸ್‌ ಕಾರ್ಯಕರ್ತರಿಂದ ಮೊಟ್ಟೆ ಏಟು

1 Min Read
ಪ್ರಮುಖದೇಶ

NHAI Local Pass ಇನ್ಮುಂದೆ ಕಚೇರಿಗೆ ಅಲೆಯಬೇಕಿಲ್ಲ; ಮೊಬೈಲ್‌ನಲ್ಲೇ ಸಿಗಲಿದೆ NHAI ಡಿಜಿಟಲ್ ಲೋಕಲ್ ಟೋಲ್ ಪಾಸ್

3 Min Read
ಪ್ರಮುಖCrimeದೇಶ

Jammu Kashmir ಭೀಕರ ಉಗ್ರರ ದಾಳಿ; ಕರ್ತವ್ಯದಲ್ಲಿದ್ದ ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಹುತಾತ್ಮ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?