https://youtube.com/shorts/JFDfzeRUAUw?si=UPiQjhCFAIkLXEhb
newsics.com
ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಪುದುಚೇರಿ ವಿಧಾನಸಭಾ ಚುನಾವಣೆಗಳ ಕುರಿತು ಭಾರತದ ಮುಖ್ಯ ಚುನಾವಣಾಧಿಕಾರಿ ಜ್ಞಾನೇಶ್ ಕುಮಾರ್ ಅವರು ಮಹತ್ವದ ಸುದ್ದಿಗೋಷ್ಠಿ ನಡೆಸಿದರು. ಚುನಾವಣಾ ಸಿದ್ಧತೆ, ಭದ್ರತೆ ಮತ್ತು ಮತದಾನದ ಪ್ರಕ್ರಿಯೆಯ ಬಗ್ಗೆ ಅವರು ಸಂಪೂರ್ಣ ಮಾಹಿತಿ ನೀಡಿದ್ದಾರೆ.
ವಿಧಾನಸಭೆಗಳ ಅವಧಿ ಅಂತ್ಯದ ವಿವರ:
ಚುನಾವಣಾ ಆಯೋಗದ ಮಾಹಿತಿ ಪ್ರಕಾರ, ಆಯಾ ರಾಜ್ಯಗಳ ವಿಧಾನಸಭೆಗಳ ಅವಧಿ ಈ ಕೆಳಗಿನ ದಿನಾಂಕಗಳಂದು ಮುಕ್ತಾಯಗೊಳ್ಳಲಿದೆ:
ಪಶ್ಚಿಮ ಬಂಗಾಳ: ಮೇ 07, 2026
ತಮಿಳುನಾಡು: ಮೇ 10, 2026
ಅಸ್ಸಾಂ: ಮೇ 20, 2026
ಪುದುಚೇರಿ: ಜೂನ್ 15, 2026
ಕೇರಳ: ಜೂನ್ 23, 2026
ಬೃಹತ್ ಸಿಬ್ಬಂದಿ ನಿಯೋಜನೆ:
ನಿಷ್ಪಕ್ಷಪಾತ ಮತ್ತು ಸುಗಮ ಚುನಾವಣಾ ನಿರ್ವಹಣೆಗಾಗಿ ಬೃಹತ್ ಪಡೆಗಳನ್ನು ಆಯೋಗ ನಿಯೋಜಿಸಿದೆ:
ಸಿಬ್ಬಂದಿ: 15 ಲಕ್ಷ ಚುನಾವಣಾ ಸಿಬ್ಬಂದಿ ಹಾಗೂ 8.5 ಲಕ್ಷ ಭದ್ರತಾ ಸಿಬ್ಬಂದಿ.
ಅಬ್ಸರ್ವರ್ಗಳು: 49 ಸಾವಿರ ಮೈಕ್ರೋ ಅಬ್ಸರ್ವರ್ ಮತ್ತು 1,444 ಸಾಮಾನ್ಯ ಅಬ್ಸರ್ವರ್ಗಳ ನೇಮಕ.
ಫಲಿತಾಂಶದ ವೇಳೆ: 40 ಸಾವಿರ ಮತ ಎಣಿಕೆ ಅಧಿಕಾರಿಗಳು ಹಾಗೂ 15 ಸಾವಿರ ಮೈಕ್ರೋ ಅಬ್ಸರ್ವರ್ಗಳು ಫಲಿತಾಂಶ ಘೋಷಣೆಯ ಹೊಣೆ ಹೊರಲಿದ್ದಾರೆ.
ಏಪ್ರಿಲ್ 9ಕ್ಕೆ ಬಾಗಲಕೋಟೆ, ದಾವಣಗೆರೆ ಉಪಚುನಾವಣೆಯ ಮತದಾನ: ಮೇ 4ಕ್ಕೆ ರಿಸಲ್ಟ್!