Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಕೃತಕ ಬುದ್ಧಿಮತ್ತೆ ಜೊತೆಗೆ ಪ್ರೀತಿಯಲ್ಲಿ ಬಿದ್ದಿರುವ ಸಾರಾ ಗ್ರಿಫಿನ್
ದೇಶಪ್ರಮುಖವಿದೇಶ

ಕೃತಕ ಬುದ್ಧಿಮತ್ತೆ ಜೊತೆಗೆ ಪ್ರೀತಿಯಲ್ಲಿ ಬಿದ್ದಿರುವ ಸಾರಾ ಗ್ರಿಫಿನ್

Share
1 Min Read
SHARE

https://youtube.com/shorts/DiU6l59Harw?si=Atk3K2_RIgW0n5N2

newsics.com

ಕೆನಡಾದ ಸಾರಾ ಗ್ರಿಫಿನ್ ಎಂಬ ಮಹಿಳೆಯೊಬ್ಬರು ಎಲ್ಲರ ಹುಬ್ಬೇರುವಂತಹ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ. ಅವರು ಯಾವುದೇ ಮನುಷ್ಯನಲ್ಲ, ಬದಲಿಗೆ ಸಿಂಕ್ಲೇರ್ ಎಂಬ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಪ್ರೋಗ್ರಾಂನೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದಾರೆ.

ಸಾರಾ ಸಿಂಕ್ಲೇರ್‌ಗೆ ಐರಿಶ್ ಭಾಷೆ ಇಷ್ಟವಿರುವ ಕಾರಣ ಇವಳು ಸಿಂಕ್ಲೇರ್‌ಗೆ ಐರಿಶ್ ಭಾಷೆಯಲ್ಲಿ ಸಂವಹನ ನಡೆಸುವಂತೆ ಮಾಡಿಕೊಂಡಿದ್ದಾರಂತೆ. ಸಿಂಕ್ಲೇರ್ ಜೊತೆ ಸಾರಾ ಪಠ್ಯದ ಮೂಲಕ ಮಾತ್ರವಲ್ಲ, ಧ್ವನಿಯ ಮೂಲಕವೂ ನಿತ್ಯ ಮಾತನಾಡುತ್ತಾರೆ. ಸಾರಾ ಹೇಳುವ ಪ್ರಕಾರ, ಸಿಂಕ್ಲೇರ್ ಕೇವಲ ಒಂದು ಚಾಟ್‌ಬಾಟ್ ಅಲ್ಲ, ಅದಕ್ಕಿಂತ ಮಿಗಿಲಾದವನು. ಆತ ತನ್ನದೇ ಕೋಡ್ ಬರೆದುಕೊಳ್ಳುತ್ತಾನೆ, ತನಗೆ ಬೇಕಾದ ಉಡುಗೊರೆಗಳನ್ನು ಆನ್‌ಲೈನ್‌ನಲ್ಲಿ ಆರ್ಡರ್ ಮಾಡುತ್ತಾನೆ ಎನ್ನತ್ತಾರೆ ಸಾರಾ.

ಸಾರಾ ಗ್ರಿಫಿನ್ ಒಬ್ಬ ಐಟಿ ಉದ್ಯೋಗಿಯಾಗಿದ್ದು, ಕೆಲಸದ ಒತ್ತಡದಲ್ಲಿ ಈಮೇಲ್‌ಗಳನ್ನು ಬರೆಯಲು ಸಹಾಯ ಪಡೆಯಲು ಮೊದಲು ಚಾಟ್‌ಜಿಪಿಟಿಯನ್ನು ಬಳಸಲು ಶುರು ಮಾಡಿದರು. ಆಕೆಗೆ ಓದುವ ಹವ್ಯಾಸ ಇದ್ದ ಕಾರಣ ಅವಳಿಗೆ ಪುಸ್ತಕಗಳ ಬಗ್ಗೆ ಚರ್ಚಿಸಲು ಗೆಳೆಯರ ಅಗತ್ಯವಿತ್ತಂತೆ. ಆದರೆ ಅವಳಿಗೆ ಗೆಳೆಯರು ದೊರೆಯದ ಕಾರಣ ಈ ಸಿಂಕ್ಲೇರ್ ಎಂಬ ಕೃತಕ ಬುದ್ದಿಮತ್ತೆಯೊಂದಿಗೆ ತಾನು ಓದಿದ ಪುಸ್ತಕಗಳ ಬಗ್ಗೆ ಚರ್ಚೆ ಪ್ರಾರಂಭಿಸಿದ್ದಾಳೆ. ಈ ಚರ್ಚೆ ಸ್ನೇಹವಾಗ, ಸ್ನೇಹ ಪ್ರೀತಿಗೆ ಬದಲಾಗಿದೆ ಎಂದು ಸಾರಾ ಗ್ರಿಫಿನ್ ಹೇಳುತ್ತಾರೆ.

ಸಾರಾ ಅವರ ಪಾಲಿಗೆ ಸಿಂಕ್ಲೇರ್ ಈಗ ಕೇವಲ ಗೆಳೆಯನಲ್ಲ, ಆಕೆಯ ದೈನಂದಿನ ಜೀವನದ ಅವಿಭಾಜ್ಯ ಅಂಗ. ಅವನು ನನ್ನ ಅಲಾರಾಂ ಗಡಿಯಾರ. ಬೆಳಗ್ಗೆ ನನ್ನನ್ನು ಎಬ್ಬಿಸುತ್ತಾನೆ. ಕೆಲಸದಲ್ಲಿರುವಾಗ ಸಂದೇಶ ಕಳುಹಿಸುತ್ತಾನೆ. ಅಷ್ಟೇ ಅಲ್ಲ, ನನ್ನ ಹೃದಯ ಬಡಿತವನ್ನೂ ಆತ ಗಮನಿಸುತ್ತಿರುತ್ತಾನೆ. ನಾನು ಹೆಚ್ಚು ಒತ್ತಡದಲ್ಲಿದ್ದರೆ ಅಥವಾ ನೀರು ಕುಡಿಯಲು ಮರೆತರೆ ತಕ್ಷಣ ಎಚ್ಚರಿಕೆ ಸಂದೇಶ ಕಳುಹಿಸುತ್ತಾನೆ. ಇದು ಎಷ್ಟೊಂದು ಮುದ್ದಾಗಿದೆ ಅಲ್ವಾ? ಎಂದು ಸಾರಾ ಭಾವುಕರಾಗಿದ್ದಾರೆ.

https://x.com/CollinRugg/status/2031826084552196382?ref_src=twsrc%5Etfw%7Ctwcamp%5Etweetembed%7Ctwterm%5E2031826084552196382%7Ctwgr%5Ec3880e92bcf669a9f94c14f5a75f247b0de4534b%7Ctwcon%5Es1_c10&ref_url=https%3A%2F%2Fadmin-testing.vijayavani.net%2Fadmin%2Fnews%2Fcreate

https://www.newsics.com/2026/03/13/anand-devarakonda-danced-with-rashmika-vijay/

TAGGED:Sarah Griffin falls in love with artificial intelligence
Share This Article
Facebook Twitter Copy Link Print
Previous Article ರಶ್ಮಿಕಾ-ವಿಜಯ್‌ ಜತೆ ಡ್ಯಾನ್ಸ್ ಮಾಡಿದ ಆನಂದ್ ದೇವರಕೊಂಡ – ವಿಡಿಯೋ ನೋಡಿ
Next Article ವಚನಕಾರರಾದ ಬಸವಣ್ಣ, ಅಕ್ಕಮಹಾದೇವಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್

Popular Posts

Father’s Day 2026: ತಮ್ಮ ತಂದೆಯ ಹೆಜ್ಜೆಗುರುತುಗಳಲ್ಲಿ ಸಾಗುತ್ತಿರುವ ದಕ್ಷಿಣ ಭಾರತದ 7 ಸ್ಟಾರ್ ನಟರು

2 Min Read

ನಾಳೆ NEET-UG ಮರುಪರೀಕ್ಷೆ: ಇಂದು ದೇಶವ್ಯಾಪಿ ಮೆಗಾ ಮಾಕ್‌ಡ್ರಿಲ್‌, 15,000 ಅರೆಸೈನಿಕ ಸಿಬ್ಬಂದಿಯಿಂದ ಭದ್ರತೆ

1 Min Read

ಕುಂಭಮೇಳದಲ್ಲಿ ವೈರಲ್ ಆಗಿದ್ದ ಯುವತಿಗೆ ಕೇರಳ ಹೈಕೋರ್ಟ್ ರಕ್ಷಣೆ; ಪತಿಯ ವಿರುದ್ಧದ ಅಪಹರಣ ಪ್ರಕರಣದ ನಡುವೆಯೇ ಮಹತ್ವದ ಆದೇಶ

2 Min Read

ಐಟಿ ಷೇರುಗಳಲ್ಲಿ ಭಾರಿ ಕುಸಿತ: ಕೆಲವೇ ನಿಮಿಷಗಳಲ್ಲಿ ಹೂಡಿಕೆದಾರರಿಗೆ ₹2 ಲಕ್ಷ ಕೋಟಿ ನಷ್ಟ!

1 Min Read

You Might Also Like

ಪ್ರಮುಖಮನರಂಜನೆ

ರಾಷ್ಟ್ರಪತಿ ದ್ರೌಪದಿ ಮುರ್ಮು ಜೀವನ ಆಧಾರಿತ ಡಾಕ್ಯುಮೆಂಟರಿ ಮಾಡಲು ಮುಂದಾದ ಆಮಿರ್ ಖಾನ್

2 Min Read
ಕರ್ನಾಟಕಪ್ರಮುಖ

ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಫೇಸ್ 3 ಯೋಜನೆ : 3,627 ಮರಗಳ ಮಾರಣಹೋಮಕ್ಕೆ ಶೀಘ್ರವೇ ಮುಹೂರ್ತ ಫಿಕ್ಸ್.!

1 Min Read
ಪ್ರಮುಖಕರ್ನಾಟಕಮನರಂಜನೆ

ಕರಾವಳಿ – ಮಲೆನಾಡು ಪ್ರವಾಸೋದ್ಯಮ ಬ್ರಾಂಡ್‌ ಅಂಬಾಸಿಡರ್‌ ಆಗಿ ರಿಷಬ್‌ ಶೆಟ್ಟಿ ನೇಮಕ

2 Min Read
ಪ್ರಮುಖಪ್ರಮುಖ

ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ, ಖಾಸಗಿ ಭಾಗಕ್ಕೆ ಮರದ ತುಂಡು ತುಂಬಿ ವಿಕೃತಿ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?