https://youtube.com/shorts/yMSO-E277Og?si=gFSvtQQHQjZ3lXBt
newsics.com
ವಿಶ್ವದ ಶ್ರೀಮಂತ ವ್ಯಕ್ತಿ ಎಲೋನ್ ಮಸ್ಕ್ ಮಾಲೀಕತ್ವದ ‘X’ವೇದಿಕೆಯು ತನ್ನ ಕೃತಕ ಬುದ್ಧಿಮತ್ತೆ (AI) ಚಾಟ್‌ಬಾಟ್ ಆಗಿರುವ ‘ಗ್ರೋಕ್’ ಸೇವೆಯಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಇನ್ಮುಂದೆ ಉಚಿತ ಬಳಕೆದಾರರಿಗೆ ಗ್ರೋಕ್ ಸೇವೆ ಲಭ್ಯವಿರುವುದಿಲ್ಲ ಎಂದು ಕಂಪನಿ ಘೋಷಿಸಿದೆ.
ಗ್ರೋಕ್ ಸೌಲಭ್ಯವನ್ನು ಈಗ ಕೇವಲ ‘ಪ್ರೀಮಿಯಂ’ ಮತ್ತು ‘ಪ್ರೀಮಿಯಂ+’ ಚಂದಾದಾರರಿಗೆ ಮಾತ್ರ ಸೀಮಿತಗೊಳಿಸಲಾಗಿದೆ.ಈ ನಿಯಮವು ತಕ್ಷಣದಿಂದಲೇ ಜಾರಿಗೆ ಬಂದಿದ್ದು, ಉಚಿತವಾಗಿ ಬಳಸುತ್ತಿದ್ದವರಿಗೆ ಈಗ ಗ್ರೋಕ್ ಪ್ರವೇಶ ನಿರಾಕರಿಸಲಾಗಿದೆ.
ಪ್ರೀಮಿಯಂ ಚಂದಾದಾರಿಕೆಗೆ ತಿಂಗಳಿಗೆ ಸುಮಾರು 230 ರೂ. ಮತ್ತು ಪ್ರೀಮಿಯಂ+ ಸಬ್‌ಸ್ಕ್ರಿಪ್ಷನ್‌ಗೆ ತಿಂಗಳಿಗೆ 1,285 ರೂ. ಪಾವತಿಸಬೇಕಾಗುತ್ತದೆ.
ತಾಂತ್ರಿಕ ವೆಚ್ಚಗಳ ನಿರ್ವಹಣೆ, ಗ್ರೋಕ್ ಇಮೇಜ್ ಜನರೇಟರ್‌ನ ದುರುಪಯೋಗವನ್ನು ತಡೆಯುವುದು ಮತ್ತು ಕಂಪನಿಯ ಆದಾಯವನ್ನು ಹೆಚ್ಚಿಸುವುದು ಈ ನಿರ್ಧಾರದ ಹಿಂದಿನ ಪ್ರಮುಖ ಉದ್ದೇಶ ಎಂದು ಹೇಳಲಾಗುತ್ತಿದೆ.