https://youtube.com/shorts/yMSO-E277Og?si=gFSvtQQHQjZ3lXBt
newsics.com
ಬೆಂಗಳೂರು : ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಬಳಕೆಯಿಂದ ಪರಿಸರದ ಮೇಲೆ ಉಂಟಾಗುತ್ತಿರುವ ಪರಿಣಾಮದ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಸದನದಲ್ಲಿ ಮಾಹಿತಿ ನೀಡಿದ್ದಾರೆ.
ನಾವು ಚಾಟ್ ಜಿಪಿಟಿಯಲ್ಲಿ ಕೇಳುವ ಒಂದೊಂದು ಪ್ರಶ್ನೆಯೂ ಪರಿಸರದ ಮೇಲೆ ಅರಿವಿಲ್ಲದ ಪ್ರಭಾವ ಬೀರುತ್ತಿದೆ! ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ನೀರಿನ ದಾಹದ ಬಗ್ಗೆ ವಿಧಾನಸಭೆಯಲ್ಲಿ ಮಾತನಾಡಿದ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, 500 ಮಿಲಿ ಲೀಟರ್ ನೀರು ವ್ಯಯವಾಗುತ್ತದೆ.
ಒಂದು ಮೆಗಾವ್ಯಾಟ್ ಡೇಟಾ ಸೆಂಟರ್ಗೆ 25 ಮಿಲಿಯನ್ ಲೀಟರ್ ನೀರು ಮತ್ತು ಭಾರಿ ಪ್ರಮಾಣದ ವಿದ್ಯುತ್ ಅಗತ್ಯವಿರುತ್ತದೆ.ಇಂತಹ ಬೃಹತ್ ಡೇಟಾ ಸೆಂಟರ್ಗಳನ್ನು ಸರ್ಕಾರವೇ ಸ್ಥಾಪಿಸುವುದು ಕಷ್ಟಕರ. ಆದರೆ, ಖಾಸಗಿಯವರು ಮುಂದೆ ಬಂದರೆ ಸರ್ಕಾರ ಅಗತ್ಯ ನೆರವು ನೀಡಲಿದೆ ಎಂದರು.ರಾಜ್ಯದ ಹಳೆಯ ಡೇಟಾ ಸೆಂಟರ್ ಪಾಲಿಸಿಯನ್ನು ಪುನರ್ ಪರಿಶೀಲಿಸಿ, ‘ಸುಸ್ಥಿರ ಡೇಟಾ ಸೆಂಟರ್ ಪಾಲಿಸಿ’ ರೂಪಿಸಲು ಸರ್ಕಾರ ಮುಂದಾಗಿದೆ ಎಂದರು ಎಂದರು.