https://youtube.com/shorts/fD6pvkz7g8c?si=uKQ1N3BMJTvK6QIw
newsics.com
ಮೈಸೂರು: ಹಿರಿಯ ಸಿನಿ ಪತ್ರಕರ್ತ ಕೆ.ಜೆ. ಕುಮಾರ್ ತೀವ್ರ ಹೃದಯಾಘಾತದಿಂದ ನಿಧನರಾದರು.
ಬುಧವಾರ ಸಂಜೆ ಎದೆನೋವು ಕಾಣಿಕೊಂಡ ಹಿನ್ನೆಲೆಯಲ್ಲಿ ನಗರದ ಸರಸ್ವತಿಪುರಂನ ಕಾಮಾಕ್ಷಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಪ್ರಯೋಜನವಾಗಲಿಲ್ಲ.
ಕಳೆದ ಐದು ದಶಕಗಳಿಗೂ ಹೆಚ್ಚು ಕಾಲ ಮೈಸೂರಿನ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಕೆ.ಜೆ. ಕುಮಾರ್ ಸಿನಿಮಾ ಬರಹಗಳಿಗೆ ಹೆಸರಾಗಿದ್ದರು.
ಮೇರುನಟರಾದ ರಾಜ್ಕುಮಾರ್, ವಿಷ್ಣುವರ್ಧನ್, ರಜನಿಕಾಂತ್, ದಿ.ಅಂಬರೀಶ್ ಅವರ ಜತೆ ಆತ್ಮೀಯ ಒಡನಾಟ ಹೊಂದಿದ್ದರು. ಹಲವು ಸಿನಿತಾರೆಯರಿಗೆ ಆತ್ಮೀಯರಾಗಿದ್ದರು.
ಉದಯವಾಣಿ, ವಿಜಯ ದಿನಪತ್ರಿಕೆ, ಹೊಸದಿಗಂತ ಪತ್ರಿಕೆಗಳಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ್ದರು.
ಹಾಯ್ ಬೆಂಗಳೂರು ಸೇರಿದಂತೆ ಅನೇಕ ಜನಪ್ರಿಯ ಪತ್ರಿಕೆ, ಮ್ಯಾಗಜೀನ್ಗಳ ಏಜೆನ್ಸಿಪಡೆದು ಓದುಗರಿಗೆ ತಲುಪಿಸುದ್ದು ಇವರ ಹೆಗ್ಗಳಿಕೆ. ಕುಮಾರ್ ಅವರ ಅಂತ್ಯಕ್ರಿಯೆ ಗುರುವಾರ (ಮಾ.12) ಮಧ್ಯಾಹ್ನ ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಹರಿಶ್ಚಂದ್ರ ಘಾಟ್ನಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.