Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಕಾರ್ಯಕ್ರಮದಲ್ಲಿ ವಿಷ್ಣುದಾದ ಡೈಲಾಗ್ ಉಪ್ಪಿ ಹೇಳಿದ್ಯಾಕೆ?
ಕರ್ನಾಟಕಪ್ರಮುಖಮನರಂಜನೆ

ಕಾರ್ಯಕ್ರಮದಲ್ಲಿ ವಿಷ್ಣುದಾದ ಡೈಲಾಗ್ ಉಪ್ಪಿ ಹೇಳಿದ್ಯಾಕೆ?

Share
2 Min Read
SHARE

https://youtube.com/shorts/NQT6o3FTgxQ?si=QO7iNw2quSngYXpc

newsics.com

ಕನ್ನಡ ಚಿತ್ರರಂಗದ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅಭಿನಯದ ‘ಕೋಟಿಗೊಬ್ಬ’ ಚಿತ್ರ ಬಿಡುಗಡೆಯಾಗಿ 25 ವರ್ಷಗಳಾಗಿವೆ. ಈ ಸಂದರ್ಭದಲ್ಲಿ ಚಿತ್ರದ ನಿರ್ಮಾಪಕ ಸೂರಪ್ಪಬಾಬು ಒಂದು ಅವಿಸ್ಮರಣೀಯ ಸಮಾರಂಭ ಆಯೋಜಿಸಿದ್ದರು. ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ನಿರ್ದೇಶಕ ನಾಗಣ್ಣ, ಹಿರಿಯ ನಟ ದೇವರಾಜ್, ಉಪೇಂದ್ರ, ಪ್ರಿಯಾಂಕಾ ಉಪೇಂದ್ರ, ಗೋಲ್ಡನ್ ಸ್ಟಾರ್ ಗಣೇಶ್, ಸಾಹಿತಿ ಕೆ.ಕಲ್ಯಾಣ್ ಹಾಗೂ ಇತರರು ಉಪಸ್ಥಿತರಿದ್ದರು.
ಕೋಟಿಗೊಬ್ಬ’ ಸಿನಿಮಾ 2001, ನವೆಂಬರ್ 16ರಂದು ಅದ್ಧೂರಿಯಾಗಿ ರಿಲೀಸ್ ಆಗಿತ್ತು. ಈ ಸಿನಿಮಾವನ್ನು ನಾಗಣ್ಣ ನಿರ್ದೇಶನ ಮಾಡಿದ್ದರೆ, ಸೂರಪ್ಪ ಬಾಬು ನಿರ್ಮಾಣವನ್ನು ಮಾಡಿದ್ದಾರೆ. ಈ ಸಿನಿಮಾ 25 ವರ್ಷಗಳನ್ನು ಪೂರೈಸಿದ ಬೆನ್ನಲ್ಲಿ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ವೇಳೆ ವಿಶೇಷ ಅತಿಥಿಯಾಗಿ ಬಂದಿದ್ದ ರಿಯಲ್‌ ಸ್ಟಾರ್ ಉಪೇಂದ್ರ, ವಿಷ್ಣುದಾದ ಹೇಳಿದ್ದ ಮಾತುಗಳನ್ನು ಈ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ.
ಉಪೇಂದ್ರ ಮಾತನಾಡಿ, ವಿಷ್ಣು ಸರ್ ಬಗ್ಗೆ ಹೇಳೋಕೆ ತುಂಬಾನೆ ಇದೆ. ಅವರನ್ನು ಮಾತಾಡಿಸಬೇಕೆಂದೇ ನಾನು ಅವರ ಮನೆಗೆ ಹೋಗ್ತಿದ್ದೆ. ಆಧ್ಯಾತ್ಮ, ದೇವರ ಬಗ್ಗೆ ತುಂಬಾ ಹೇಳ್ತಿದ್ದರು. ಅಂಥ ಮಹಾನ್ ವ್ಯಕ್ತಿ ಮಾತು ಕೇಳೋದೇ ಪುಣ್ಯ. ಅವರಿಂದ ನಾನು ಸ್ಪೂರ್ತಿ ಪಡೆಯುತ್ತಿದ್ದೆ. ನಿಮ್ಮ ಸಿನಿಮಾಗಳು ಬೇರೆಯದೇ ಪ್ರೇಕ್ಷಕರನ್ನು ಹುಟ್ಟು ಹಾಕ್ತಿವೆ ಎಂದು ನನ್ನ ಸಿನಿಮಾಗಳನ್ನು ಮೆಚ್ಚಿಕೊಳ್ಳುತ್ತಿದ್ದರು. ಇನ್ನೂ ನನ್ನನ್ನು ತರ್ಲೆ ನನ್ಮಗ ಚಿತ್ರದ ಮೂಲಕ ನಿರ್ದೇಶಕನನ್ನಾಗಿ ಪರಿಚಯಿಸಿದ್ದೇ ಸೂರಪ್ಪಬಾಬು ಎಂದು ಹೇಳಿದರು.

ಅಷ್ಟೇ ಅಲ್ಲದೆ ವಿಷ್ಣುವರ್ಧನ್ ಅವರ ಮಿಮಿಕ್ರಿ ಹಾಗೂ ಅವರು ಹೇಳುತ್ತಿದ್ದ ಫಿಲಾಸಫಿಕಲ್ ಮಾತುಗಳ ಬಗ್ಗೆನೂ ರಿವೀಲ್ ಮಾಡಿದ್ದಾರೆ. “ಅವರು ತುಂಬಾ ಒಳ್ಳೆಯ ಮಿಮಿಕ್ರಿ ಆರ್ಟಿಸ್ಟ್. ಅದ್ಭುತವಾಗಿ ಮಿಮಿಕ್ರಿ ಮಾಡೋರು. ಎಲ್ಲರನ್ನೂ ಹೇಗೆ ಮಿಮಿಕ್ರಿ ಮಾಡೋರು ಅಂದರೆ, ಒಂದೊಂದು ಗಂಟೆ ನೋಡುತ್ತಾ ಕೂತುಬಿಡುತ್ತಿದ್ದೆ. ಅದರ ಮಧ್ಯೆ ಒಂದು ಫೇಮಸ್ ಡೈಲಾಗ್ ಹೇಳೋರು. ಅದೇನಂದ್ರೆ, ಒಬ್ಬ ಮನುಷ್ಯನಿಗೆ ಯೋಗ ಬರುತ್ತೆ. ಅದನ್ನು ಉಳಿಸಿಕೊಳ್ಳುವ ಯೋಗ್ಯತೆ ಇರಬೇಕು. ಯೋಗ ಮತ್ತು ಯೋಗ್ಯತೆ ಇದ್ದರೇ ಈ ಸಿನಿಮಾರಂಗದಲ್ಲಿ ಚಪ್ಪಾಳೆ ತಟ್ಟೋದು ಅಂತ. ಇನ್ನೊಂದು ವಿಷಯ ಹೇಳೋರು ಅವನನ್ನು ಸಂಪೂರ್ಣ ಒಪ್ಪಿಕೊಳ್ಳಿ. ಅವನು ನಿಮ್ಮನ್ನು ಸಂಪೂರ್ಣ ಅಪ್ಪಿಕೊಳ್ತಾನೆ ಅಂತ. ಅದೇ ವಿಷ್ಣು ಸಾರ್.” ಎಂದು ಉಪೇಂದ್ರ ಹೇಳಿದ್ದಾರೆ.

ಅಮೆರಿಕದಲ್ಲಿ ರೀಲ್ಸ್‌ ಮಾಡಿದ ಭಾರತೀಯ; ಯುವಕನಿಗೆ ಗಡೀಪಾರು ಭೀತಿ!

TAGGED:Why did Vishnu's dialogue in the program sound so loud?
Share This Article
Facebook Twitter Copy Link Print
Previous Article ಕಾಂಗ್ರೆಸ್ ಶಾಸಕರ ಪಿಎ ಲಾಡ್ಜ್‌ನಲ್ಲಿ ಸಾವು; ಹೆಂಡತಿಗೆ ಕರೆಮಾಡಿ ಜೀವಬಿಟ್ಟ ಆಪ್ತ ಸಹಾಯಕ!
Next Article ಸಾವು-ಬದುಕಿನ ಮಧ್ಯೆ ಬಿಗ್ ಬಾಸ್ ಸ್ಪರ್ಧಿ ಹೋರಾಟ; ಲೈವ್ ನಲ್ಲಿ ಹೇಳಿದ್ದೇನು?

Popular Posts

Bengaluru Traffic ವಾಹನ ಸವಾರರ ಗಮನಕ್ಕೆ : ಇಂದು ಈ ರಸ್ತೆಗಳಲ್ಲಿ ಸಂಚಾರ ಬಂದ್

1 Min Read

Ethanol blended fuels ಎಥನಾಲ್ ಮಿಶ್ರಿತ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ರದ್ದು ಮಾಡಿದ ಕೇಂದ್ರ ಸರ್ಕಾರ

1 Min Read

ಗರ್ಲ್‌ಫ್ರೆಂಡ್‌ಗೆ 3 ಲಕ್ಷದ ಗಿಫ್ಟ್ ಕೊಟ್ಟ ಯುವಕ : ದುಬಾರಿ ಗಿಫ್ಟ್ ಕೈಗೆ ಸಿಗುತ್ತಿದ್ದಂತೆ ಬ್ರೇಕಪ್, ಅಷ್ಟಕ್ಕೂ ಅಲ್ಲಿ ಆಗಿದ್ದೇನು?

2 Min Read

ಎಐ ಎಡವಟ್ಟು: ಜೀವಂತವಾಗಿರುವ ನಟ ವಿಜಯ್ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ ಗ್ರಾಕ್ ಎಐ!

1 Min Read

You Might Also Like

ಕರ್ನಾಟಕದೇಶಪ್ರಮುಖ

PM Modi ಈ ದಾಖಲೆ ನಿರ್ಮಿಸುತ್ತೇನೆಂದು ಕನಸಿನಲ್ಲೂ ಅಂದುಕೊಂಡಿರಲಿಲ್ಲ : ಎನ್​ಡಿಎ ಸಭೆಯಲ್ಲಿ ಭಾವುಕರಾದ ಪ್ರಧಾನಿ ಮೋದಿ

1 Min Read
ಕರ್ನಾಟಕಪ್ರಮುಖ

ಚೆಕ್ ಬೌನ್ಸ್ ಕೇಸ್ ಆರೋಪಿಯನ್ನು 2 ವರ್ಷ ಜೈಲಿನಲ್ಲಿಡುವಂತಿಲ್ಲ : ಹೈಕೋರ್ಟ್ ಆದೇಶ

1 Min Read
ಕರ್ನಾಟಕಪ್ರಮುಖ

Gruhalakshmi Scheme ಗೃಹಲಕ್ಷ್ಮಿ ಯೋಜನೆ ಮಹತ್ವದ ಬದಲಾವಣೆ: ಬಯೋಮೆಟ್ರಿಕ್‌ ಕಡ್ಡಾಯ, ನವೀಕರಿಸದಿದ್ದರೆ ಹಣ ಕಟ್‌!

1 Min Read
ಕರ್ನಾಟಕಪ್ರಮುಖ

Rain Alert ಮುಂದಿನ ಒಂದು ವಾರ ಭಾರಿ ಮಳೆ : ಹಲವು ಜಿಲ್ಲೆಗಳಿಗೆ ಗಾಳಿಯ ಎಚ್ಚರಿಕೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?