Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಸಾವು-ಬದುಕಿನ ಮಧ್ಯೆ ಬಿಗ್ ಬಾಸ್ ಸ್ಪರ್ಧಿ ಹೋರಾಟ; ಲೈವ್ ನಲ್ಲಿ ಹೇಳಿದ್ದೇನು?
ಪ್ರಮುಖವೈರಲ್

ಸಾವು-ಬದುಕಿನ ಮಧ್ಯೆ ಬಿಗ್ ಬಾಸ್ ಸ್ಪರ್ಧಿ ಹೋರಾಟ; ಲೈವ್ ನಲ್ಲಿ ಹೇಳಿದ್ದೇನು?

Share
2 Min Read
SHARE

https://youtube.com/shorts/NQT6o3FTgxQ?si=QO7iNw2quSngYXpc

newsics.com
ಬಿಗ್ ಬಾಸ್ 17 ನೇ session ಸ್ಪರ್ಧಿ ಮತ್ತು ಜನಪ್ರಿಯ ಮೋಟೋವ್ಲಾಗರ್ ಅನುರಾಗ್ ದೊಭಾಲ್ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಖಿನ್ನತೆಯಿಂದಾಗಿ “ಕೊನೆಯ ರೈಡ್” ಎಂದು ಇನ್‌ಸ್ಟಾಗ್ರಾಮ್ ಲೈವ್‌ನಲ್ಲಿ ಹೇಳಿ ದೆಹಲಿ-ಮೀರುತ್ ಎಕ್ಸ್‌ಪ್ರೆಸ್‌ವೇಯಲ್ಲಿ ತನ್ನ ಟೊಯೋಟಾ ಫಾರ್ಚ್ಯೂನರ್‌ನಲ್ಲಿ ಅತೀ ವೇಗದಲ್ಲಿಡಿವೈಡರ್‌ಗೆ ಡಿಕ್ಕಿ ಹೊಡೆದು ಅಪಘಾತ ಮಾಡಿಕೊಂಡಿದ್ದಾರೆ. ಘಟನೆಯ ಸಮಯದಲ್ಲಿ ಸುಮಾರು 80,000 ಮಂದಿ ಲೈವ್ ವೀಕ್ಷಿಸುತ್ತಿದ್ದರು..

ಮಾರ್ಚ್ 7, 2026ರ ಶನಿವಾರ ರಾತ್ರಿ ನಡೆದ ಈ ದುರಂತದಲ್ಲಿ ಅನುರಾಗ್ ತೀವ್ರ ಗಾಯಗೊಂಡು ಸಬ್‌ಹಾರ್ತಿ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಪ್ರಸ್ತುತ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಮ್ಯಾನೇಜರ್ ರೋಹಿತ್ ಪಾಂಡೆ ಇನ್‌ಸ್ಟಾಗ್ರಾಮ್‌ನಲ್ಲಿ “ಅನುರಾಗ್ ಸದ್ಯ ಐಸಿಯುವಿನಲ್ಲಿದ್ದಾರೆ. ಎಲ್ಲರೂ ಪ್ರಾರ್ಥಿಸಿ. ನಾವು ಡಾಕ್ಟರ್‌ಗಳೊಂದಿಗೆ ಸಂಪರ್ಕದಲ್ಲಿದ್ದೇವೆ” ಎಂದು ಮನವಿ ಮಾಡಿಕೊಂಡಿದ್ದಾರೆ.

ಖ್ಯಾತ ಯೂಟ್ಯೂಬರ್ ಅನುರಾಗ್ ದೊಭಾಲ್ ಅವರು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಲೈವ್ ಬಂದು ಸಾಯಲು ಪ್ರಯತ್ನಿಸಿದ ಅವರ ಪರಿಸ್ಥಿತಿ ಚಿಂತಾಜನಕ ಆಗಿದೆ.

ಅನುರಾಗ್ ಇತ್ತೀಚೆಗೆ ತನ್ನ ಯೂಟ್ಯೂಬ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ತೀವ್ರ ಖಿನ್ನತೆಯ ಬಗ್ಗೆ ಮಾತನಾಡಿದ್ದರು. ಪ್ರೀತಿಸಿ ಮದುವೆಯಾದ ಪತ್ನಿ ರಿತಿಕಾ ಚೌಹಾಣ್ ಅವರೊಂದಿಗಿನ ಸಂಬಂಧಕ್ಕೆ ಕುಟುಂಬ (ಪೋಷಕರು ಮತ್ತು ಸಹೋದರ) ವಿರೋಧ ವ್ಯಕ್ತಪಡಿಸಿದ್ದರಿಂದ ಅಂತರ್ಜಾತಿ ವಿವಾಹ ಸಂಕಷ್ಟ ಎದುರಿಸಿದ್ದರು. ಮದುವೆಯ ನಂತರ ಕುಟುಂಬದಿಂದ ಮನೆಯಿಂದ ಹೊರಹಾಕಲ್ಪಟ್ಟು, ಮಾನಸಿಕ ಕಿರುಕುಳ ಎದುರಿಸಿದ್ದೇನೆ ಎಂದು ಅನುರಾಗ್ ವಿಡಿಯೋಗಳಲ್ಲಿ ಆರೋಪಿಸಿದ್ದರು. ಇದರಿಂದ ತೀವ್ರ ಖಿನ್ನತೆಗೆ ಜಾರಿ, ಕೆಲವು ತಿಂಗಳುಗಳಿಂದ ಮಾನಸಿಕ ಒತ್ತಡದಲ್ಲಿದ್ದರು ಎಂದು ವರದಿಗಳಿವೆ.

ಲೈವ್‌ನಲ್ಲಿ ಅನುರಾಗ್ ತನ್ನ ತಾಯಿಯನ್ನು ಉದ್ದೇಶಿಸಿ “ಅಗಲೇ ಜನ್ಮದಲ್ಲಿ ಬಂದರೆ ಪ್ರೀತಿ ಕೊಡಮ್ಮಾ, ಬಹುತ್ ಜರೂರತ್ ಥಿ ಪ್ಯಾರ್ ಕಿ” ಎಂದು ಕಣ್ಣೀರು ಹಾಕುತ್ತಾ ಹೇಳಿದ್ದರು. “ಲೆಟ್ಸ್ ಗೋ ಫಾರ್ ಫೈನಲ್ ರೈಡ್” ಎಂದು ಹೇಳಿ ವಾಹನವನ್ನು ಡಿವೈಡರ್‌ಗೆ ಡಿಕ್ಕಿ ಹೊಡೆದಿದ್ದಾರೆ. ಅಪಘಾತದ ನಂತರ ಸ್ಥಳೀಯರು ರಕ್ಷಣೆ ಮಾಡಿ ಆಸ್ಪತ್ರೆಗೆ ಕರೆದೊಯ್ದರು.

ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಅನುರಾಗ್ ಶೀಘ್ರ ಚೇತರಿಕೆಗೆ ಪ್ರಾರ್ಥಿಸುತ್ತಿದ್ದಾರೆ. ಈ ಘಟನೆ ಮಾನಸಿಕ ಆರೋಗ್ಯ, ಕುಟುಂಬ ಸಂಬಂಧಗಳು ಮತ್ತು ಸೆಲೆಬ್ರಿಟಿ ಒತ್ತಡದ ಬಗ್ಗೆ ಚರ್ಚೆಯನ್ನು ಉಂಟುಮಾಡಿದೆ. ಅನುರಾಗ್ ಚೇತರಿಸಿಕೊಳ್ಳಲಿ ಎಂದು ಎಲ್ಲರೂ ಆಶಿಸುತ್ತಿದ್ದಾರೆ.

ಕಾರ್ಯಕ್ರಮದಲ್ಲಿ ವಿಷ್ಣುದಾದ ಡೈಲಾಗ್ ಉಪ್ಪಿ ಹೇಳಿದ್ಯಾಕೆ?

TAGGED:Bigg Boss contestants fight between life and death; What did they say live?
Share This Article
Facebook Twitter Copy Link Print
Previous Article ಕಾರ್ಯಕ್ರಮದಲ್ಲಿ ವಿಷ್ಣುದಾದ ಡೈಲಾಗ್ ಉಪ್ಪಿ ಹೇಳಿದ್ಯಾಕೆ?
Next Article ಮೆಟ್ರೋದಲ್ಲಿ ಪ್ರಾಂಕ್ ಗನ್ ಬಳಸಿ ದಂಡ ಕಟ್ಟಿದ ಯುವಕ

Popular Posts

Bengaluru Traffic ವಾಹನ ಸವಾರರ ಗಮನಕ್ಕೆ : ಇಂದು ಈ ರಸ್ತೆಗಳಲ್ಲಿ ಸಂಚಾರ ಬಂದ್

1 Min Read

Ethanol blended fuels ಎಥನಾಲ್ ಮಿಶ್ರಿತ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ರದ್ದು ಮಾಡಿದ ಕೇಂದ್ರ ಸರ್ಕಾರ

1 Min Read

ಗರ್ಲ್‌ಫ್ರೆಂಡ್‌ಗೆ 3 ಲಕ್ಷದ ಗಿಫ್ಟ್ ಕೊಟ್ಟ ಯುವಕ : ದುಬಾರಿ ಗಿಫ್ಟ್ ಕೈಗೆ ಸಿಗುತ್ತಿದ್ದಂತೆ ಬ್ರೇಕಪ್, ಅಷ್ಟಕ್ಕೂ ಅಲ್ಲಿ ಆಗಿದ್ದೇನು?

2 Min Read

ಎಐ ಎಡವಟ್ಟು: ಜೀವಂತವಾಗಿರುವ ನಟ ವಿಜಯ್ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ ಗ್ರಾಕ್ ಎಐ!

1 Min Read

You Might Also Like

ಕರ್ನಾಟಕದೇಶಪ್ರಮುಖ

PM Modi ಈ ದಾಖಲೆ ನಿರ್ಮಿಸುತ್ತೇನೆಂದು ಕನಸಿನಲ್ಲೂ ಅಂದುಕೊಂಡಿರಲಿಲ್ಲ : ಎನ್​ಡಿಎ ಸಭೆಯಲ್ಲಿ ಭಾವುಕರಾದ ಪ್ರಧಾನಿ ಮೋದಿ

1 Min Read
ಕರ್ನಾಟಕಪ್ರಮುಖ

ಚೆಕ್ ಬೌನ್ಸ್ ಕೇಸ್ ಆರೋಪಿಯನ್ನು 2 ವರ್ಷ ಜೈಲಿನಲ್ಲಿಡುವಂತಿಲ್ಲ : ಹೈಕೋರ್ಟ್ ಆದೇಶ

1 Min Read
ಕರ್ನಾಟಕಪ್ರಮುಖ

Gruhalakshmi Scheme ಗೃಹಲಕ್ಷ್ಮಿ ಯೋಜನೆ ಮಹತ್ವದ ಬದಲಾವಣೆ: ಬಯೋಮೆಟ್ರಿಕ್‌ ಕಡ್ಡಾಯ, ನವೀಕರಿಸದಿದ್ದರೆ ಹಣ ಕಟ್‌!

1 Min Read
ಕರ್ನಾಟಕಪ್ರಮುಖ

Rain Alert ಮುಂದಿನ ಒಂದು ವಾರ ಭಾರಿ ಮಳೆ : ಹಲವು ಜಿಲ್ಲೆಗಳಿಗೆ ಗಾಳಿಯ ಎಚ್ಚರಿಕೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?