https://youtube.com/shorts/NQT6o3FTgxQ?si=QO7iNw2quSngYXpc
newsics.com
ಕನ್ನಡ ಚಿತ್ರರಂಗದ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅಭಿನಯದ ‘ಕೋಟಿಗೊಬ್ಬ’ ಚಿತ್ರ ಬಿಡುಗಡೆಯಾಗಿ 25 ವರ್ಷಗಳಾಗಿವೆ. ಈ ಸಂದರ್ಭದಲ್ಲಿ ಚಿತ್ರದ ನಿರ್ಮಾಪಕ ಸೂರಪ್ಪಬಾಬು ಒಂದು ಅವಿಸ್ಮರಣೀಯ ಸಮಾರಂಭ ಆಯೋಜಿಸಿದ್ದರು. ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ನಿರ್ದೇಶಕ ನಾಗಣ್ಣ, ಹಿರಿಯ ನಟ ದೇವರಾಜ್, ಉಪೇಂದ್ರ, ಪ್ರಿಯಾಂಕಾ ಉಪೇಂದ್ರ, ಗೋಲ್ಡನ್ ಸ್ಟಾರ್ ಗಣೇಶ್, ಸಾಹಿತಿ ಕೆ.ಕಲ್ಯಾಣ್ ಹಾಗೂ ಇತರರು ಉಪಸ್ಥಿತರಿದ್ದರು.
ಕೋಟಿಗೊಬ್ಬ’ ಸಿನಿಮಾ 2001, ನವೆಂಬರ್ 16ರಂದು ಅದ್ಧೂರಿಯಾಗಿ ರಿಲೀಸ್ ಆಗಿತ್ತು. ಈ ಸಿನಿಮಾವನ್ನು ನಾಗಣ್ಣ ನಿರ್ದೇಶನ ಮಾಡಿದ್ದರೆ, ಸೂರಪ್ಪ ಬಾಬು ನಿರ್ಮಾಣವನ್ನು ಮಾಡಿದ್ದಾರೆ. ಈ ಸಿನಿಮಾ 25 ವರ್ಷಗಳನ್ನು ಪೂರೈಸಿದ ಬೆನ್ನಲ್ಲಿ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ವೇಳೆ ವಿಶೇಷ ಅತಿಥಿಯಾಗಿ ಬಂದಿದ್ದ ರಿಯಲ್ ಸ್ಟಾರ್ ಉಪೇಂದ್ರ, ವಿಷ್ಣುದಾದ ಹೇಳಿದ್ದ ಮಾತುಗಳನ್ನು ಈ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ.
ಉಪೇಂದ್ರ ಮಾತನಾಡಿ, ವಿಷ್ಣು ಸರ್ ಬಗ್ಗೆ ಹೇಳೋಕೆ ತುಂಬಾನೆ ಇದೆ. ಅವರನ್ನು ಮಾತಾಡಿಸಬೇಕೆಂದೇ ನಾನು ಅವರ ಮನೆಗೆ ಹೋಗ್ತಿದ್ದೆ. ಆಧ್ಯಾತ್ಮ, ದೇವರ ಬಗ್ಗೆ ತುಂಬಾ ಹೇಳ್ತಿದ್ದರು. ಅಂಥ ಮಹಾನ್ ವ್ಯಕ್ತಿ ಮಾತು ಕೇಳೋದೇ ಪುಣ್ಯ. ಅವರಿಂದ ನಾನು ಸ್ಪೂರ್ತಿ ಪಡೆಯುತ್ತಿದ್ದೆ. ನಿಮ್ಮ ಸಿನಿಮಾಗಳು ಬೇರೆಯದೇ ಪ್ರೇಕ್ಷಕರನ್ನು ಹುಟ್ಟು ಹಾಕ್ತಿವೆ ಎಂದು ನನ್ನ ಸಿನಿಮಾಗಳನ್ನು ಮೆಚ್ಚಿಕೊಳ್ಳುತ್ತಿದ್ದರು. ಇನ್ನೂ ನನ್ನನ್ನು ತರ್ಲೆ ನನ್ಮಗ ಚಿತ್ರದ ಮೂಲಕ ನಿರ್ದೇಶಕನನ್ನಾಗಿ ಪರಿಚಯಿಸಿದ್ದೇ ಸೂರಪ್ಪಬಾಬು ಎಂದು ಹೇಳಿದರು.
ಅಷ್ಟೇ ಅಲ್ಲದೆ ವಿಷ್ಣುವರ್ಧನ್ ಅವರ ಮಿಮಿಕ್ರಿ ಹಾಗೂ ಅವರು ಹೇಳುತ್ತಿದ್ದ ಫಿಲಾಸಫಿಕಲ್ ಮಾತುಗಳ ಬಗ್ಗೆನೂ ರಿವೀಲ್ ಮಾಡಿದ್ದಾರೆ. “ಅವರು ತುಂಬಾ ಒಳ್ಳೆಯ ಮಿಮಿಕ್ರಿ ಆರ್ಟಿಸ್ಟ್. ಅದ್ಭುತವಾಗಿ ಮಿಮಿಕ್ರಿ ಮಾಡೋರು. ಎಲ್ಲರನ್ನೂ ಹೇಗೆ ಮಿಮಿಕ್ರಿ ಮಾಡೋರು ಅಂದರೆ, ಒಂದೊಂದು ಗಂಟೆ ನೋಡುತ್ತಾ ಕೂತುಬಿಡುತ್ತಿದ್ದೆ. ಅದರ ಮಧ್ಯೆ ಒಂದು ಫೇಮಸ್ ಡೈಲಾಗ್ ಹೇಳೋರು. ಅದೇನಂದ್ರೆ, ಒಬ್ಬ ಮನುಷ್ಯನಿಗೆ ಯೋಗ ಬರುತ್ತೆ. ಅದನ್ನು ಉಳಿಸಿಕೊಳ್ಳುವ ಯೋಗ್ಯತೆ ಇರಬೇಕು. ಯೋಗ ಮತ್ತು ಯೋಗ್ಯತೆ ಇದ್ದರೇ ಈ ಸಿನಿಮಾರಂಗದಲ್ಲಿ ಚಪ್ಪಾಳೆ ತಟ್ಟೋದು ಅಂತ. ಇನ್ನೊಂದು ವಿಷಯ ಹೇಳೋರು ಅವನನ್ನು ಸಂಪೂರ್ಣ ಒಪ್ಪಿಕೊಳ್ಳಿ. ಅವನು ನಿಮ್ಮನ್ನು ಸಂಪೂರ್ಣ ಅಪ್ಪಿಕೊಳ್ತಾನೆ ಅಂತ. ಅದೇ ವಿಷ್ಣು ಸಾರ್.” ಎಂದು ಉಪೇಂದ್ರ ಹೇಳಿದ್ದಾರೆ.