Subscribe ನ್ಯೂಸಿಕ್ಸ್ ಕನ್ನಡ
newsics.com
ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಮಂಗಳವಾರ (ಮಾ.03) ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿರುವ ಅಮೆಜಾನ್‌ನ ಎರಡು ಡೇಟಾ ಸೆಂಟರ್‌ಗಳ ಮೇಲೆ ಇರಾನ್ ಡ್ರೋನ್ ದಾಳಿ ನಡೆಸಿರುವುದಾಗಿ ಖಚಿತಪಡಿಸಿದೆ.
ಬಹ್ರೇನ್‌ನಲ್ಲಿರುವ ಡಾಟಾ ಸೆಂಟರ್ ಮೇಲಿನ ಪ್ರತ್ಯೇಕ ಡ್ರೋನ್ ದಾಳಿಯು “ನಮ್ಮ ಮೂಲಸೌಕರ್ಯಕ್ಕೆ ಭಾರೀ ಹಾನಿಯನ್ನುಂಟು ಮಾಡಿದೆ” ಎಂದು ಕಂಪನಿ ತಿಳಿಸಿದೆ.
ಕಂಪನಿಯ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಿದ ಹೇಳಿಕೆಯಲ್ಲಿ, ತಂತ್ರಜ್ಞಾನ ದೈತ್ಯ ಸಂಸ್ಥೆಯು, ದಾಳಿಯಿಂದಾಗಿ ಡಾಟಾ ಕೇಂದ್ರಕ್ಕೆ ಹಾನಿಯಾಗಿದ್ದು, ಕೇಂದ್ರದ ಮೂಲಸೌಕರ್ಯದ ಕೆಲವು ಭಾಗಗಳಿಗೆ ವಿದ್ಯುತ್ ಸರಬರಾಜಿನಲ್ಲಿ ಅಡ್ಡಿಯಾಗಿದೆ ಎಂದು ಹೇಳಿದೆ.
“ಡ್ರೋನ್ ದಾಳಿಯ ಹಾನಿಯ ಸ್ವರೂಪವನ್ನು ಗಮನಿಸಿದರೆ ಡಾಟಾ ರಿಕವರಿಗೆ ದೀರ್ಘ ಸಮಯ ಅಗತ್ಯವಿದೆ. ಆದರೂ ಸಾಧ್ಯವಾದಷ್ಟು ಬೇಗ ಪೂರ್ಣ ಸೇವೆಯ ಲಭ್ಯತೆಯನ್ನು ಪುನಃಸ್ಥಾಪಿಸಲು ಕಾರ್ಯನಿರ್ವಹಿಸುತ್ತಿರುವುದಾಗಿ ಅಮೆಜಾನ್ ತಿಳಿಸಿದೆ.
ಕತಾರ್ ಏರ್ವೇಸ್ ವಿಮಾನ ಸಂಚಾರ ಸ್ಥಗಿತ:
ಕತಾರ್ ತನ್ನ ವಾಯುಪ್ರದೇಶ ಮುಚ್ಚಿರುವುದರಿಂದ ಕತಾರ್ ಏರ್ವೇಸ್ ವಿಮಾನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದಾಗಿ ವಿಮಾನಯಾನ ಸಂಸ್ಥೆ ತಿಳಿಸಿದೆ. ಕತಾರ್ ನಾಗರಿಕ ವಿಮಾನಯಾನ ಪ್ರಾಧಿಕಾರವು ಕತಾರ್ ವಾಯುಪ್ರದೇಶವನ್ನು ಪುನರಾರಂಭಿಸುವ ಕುರಿತು ಘೋಷಿಸಿದ ನಂತರ ವಿಮಾನ ಸಂಚಾರ ಆರಂಭವಾಗಲಿದೆ ಎಂದು ಹೇಳಿದೆ.
ಪಾಕ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿ, ದೂತಾವಾಸಗಳಲ್ಲಿನ ವೀಸಾ ಸಂದರ್ಶನ:
ಇಸ್ರೇಲ್ ಇರಾನ್ ನಡುವಿನ ಯುದ್ಧದ ಹಿನ್ನೆಲೆಯಲ್ಲಿ ಇಸ್ಲಾಮಾಬಾದ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿ ಮತ್ತು ಲಾಹೋರ್ ಹಾಗೂ ಕರಾಚಿಯಲ್ಲಿರುವ ಕಾನ್ಸುಲೇಟ್ ಜನರಲ್‌ಗಳು ಮಾರ್ಚ್ 6(ಶುಕ್ರವಾರ)ರವರೆಗೆ ಎಲ್ಲಾ ವೀಸಾ ಸಂದರ್ಶನಗಳನ್ನು ರದ್ದುಗೊಳಿಸಿವೆ ಎಂದು ರಾಯಭಾರ ಕಚೇರಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ.
ನಮ್ಮಿಂದ ಈಗ ಏನೂ ಮಾಡಲು ಆಗಲ್ಲ!
ಈ ಸಂದರ್ಭದಲ್ಲಿ ಅಮೆರಿಕನ್ನರನ್ನು ಸ್ಥಳಾಂತರಿಸುವ ಅಥವಾ ಇಸ್ರೇಲ್‌ನಿಂದ ಹೊರಡಲು ನೇರವಾಗಿ ಸಹಾಯ ಮಾಡುವ ಸ್ಥಿತಿಯಲ್ಲಿಲ್ಲ ಎಂದು ಜೆರುಸಲೆಮ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯು ತಿಳಿಸಿದೆ.
ಮಧ್ಯಪ್ರಾಚ್ಯಕ್ಕೆ ಮತ್ತಷ್ಟು ಸೈನಿಕರನ್ನು ರವಾನಿಸಿದ ಅಮೆರಿಕ: ನ್ಯೂಯಾರ್ಕ್ ಟೈಮ್ಸ್ ವರದಿ
ಅಮೆರಿಕದ ಸೇನೆಯು ಮಧ್ಯಪ್ರಾಚ್ಯಕ್ಕೆ ಹೆಚ್ಚಿನ ಪಡೆಗಳನ್ನು ನಿಯೋಜಿಸುತ್ತಿದೆ ಎಂದು ಅಮೆರಿಕದ ಉನ್ನತ ರಕ್ಷಣಾ ಅಧಿಕಾರಿ ಜನರಲ್ ಡ್ಯಾನ್ ಕೈನ್ ತಿಳಿಸಿರುವುದಾಗಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಮುಂದಿನ ನಾಲ್ಕರಿಂದ ಐದು ವಾರಗಳವರೆಗೆ ಅಮೆರಿಕ ಇರಾನ್ ಮೇಲೆ ದಾಳಿ ಮುಂದುವರಿಸಬಹುದು ಎಂಬ ಅಧ್ಯಕ್ಷ ಟ್ರಂಪ್ ಅವರ ಹೇಳಿಕೆಯ ನಂತರ ಈ ಬೆಳವಣಿಗೆ ನಡೆದಿದೆ.
ಇವಿ ಬೈಕ್ ಮಾಲೀಕನಿಂದ 35 ಕೋಟಿಗೂ ಹೆಚ್ಚು ವಂಚನೆ : ಗ್ರಾಹಕರಿಂದ ಪ್ರತಿಭಟನೆ!